ಬೆಂಗಳೂರು –
ರಾಜ್ಯದಲ್ಲಿ ಮಹಾಮಾರಿ ಕೋವಿಡ್ ನಿಂದಾಗಿ ಸಾಲು ಸಾಲಾಗಿ ಶಿಕ್ಷಕರು ನಿಧನರಾಗುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ದಾಖಲೆಯ ಪ್ರಮಾಣ ದಲ್ಲಿ ನಾಡಿನ ಮೂಲೆ ಮೂಲೆಗಳಲ್ಲಿ ಶಿಕ್ಷಕರು ಈ ಒಂದು ಮಹಾಮಾರಿಗೆ ಬಲಿಯಾಗುತ್ತಿದ್ದರೂ ಕೂಡಾ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಮಾತ್ರ ಇನ್ನೂ ಎಚ್ಚೇತ್ತುಕೊಳ್ಳುತ್ತಿಲ್ಲ.ಈ ಬಾರಿ ತಡವಾಗಿ ಶಿಕ್ಷಕರಿಗೆ ರಜೆಯನ್ನು ನೀಡಿ ನಂತರ ಶಿಕ್ಷಕರಿಗೆ ಸಧ್ಯ ಕೋವಿಡ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ .

ಹೀಗಾಗಿ ಸೋಂಕು ಕಾಣಿಸಿಕೊಂಡು ಒಬ್ಬರ ಮೇಲೊಬ್ಬರಂತೆ ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ನಿಧನರಾಗುತ್ತಿದ್ದು ದುರಂತದ ವಿಚಾರವಾಗಿದೆ. ಇನ್ನೂ ಇಂದು ರಾಜ್ಯದಲ್ಲಿ ಮತ್ತೆ ಐದು ಜನ ಶಿಕ್ಷಕರು ಸಾವಿಗೀಡಾಗಿದ್ದಾರೆ.

ಡಿ ಎಸ್ ಅಗಸರ ದೈಹಿಕ ಶಿಕ್ಷಕರು ಗೋಲಗೇರಿ ಸಿಂದಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇವರಿಗೆ ಕಳೆದ ನಾಲ್ಕು ದಿನಗಳ ಹಿಂದೆ ಕರೋನಾ ಸೋಂಕು ಕಾಣಿಸಿಕೊಂಡು ನಂತರ ಸಿಂದಗಿಯಲ್ಲಿ ಆಸ್ಪತ್ರಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಇವರು ಇಂದು ನಿಧನರಾಗಿದ್ದಾರೆ.

ವಿ ರಾಮಪ್ಪ ಚಿಕ್ಕಬಳ್ಳಾಪೂರದ ಚಿಂತಾಮಣಿಯ ನೆಲಮಾಚನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಮತ್ತು ಶಿಕ್ಷಕರ ರಾಜ್ಯ ಮುಖಂಡರಾದ ಇವರು ಕೂಡಾ ಕೋವಿಡ್ ಗೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಇವರಿಗೆ ಕರೋನಾ ಸೋಂಕು ಕಾಣಿ ಸಿಕೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾ ಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಯಲ್ಲಿ ಶಿಕ್ಷಕಿ ಯಾಗಿದ್ದ ರಾಜೇಶ್ವರಿ ಉದುಪುಡಿ ಇವರು ಕೂಡಾ ಕೋವಿಡ್ ಗೆ ಬಲಿಯಾಗಿದ್ದಾರೆ. ಲೋಕಸಭಾ ಉಪಚುನಾವಣೆಯಲ್ಲಿ ಕರ್ತವ್ಯ ಮುಗಿಸಿ ಮರಳಿದ್ದ ಇವರಿಗೆ ನಂತರ ಸೋಂಕು ಕಾಣಿಸಿಕೊಂಡಿತ್ತು. ಆರೋಗ್ಯದಲ್ಲಿ ಏರುಪೇರು ಕಂಡು ಬಂದು ಸಾಲಹ ಳ್ಳಿಯಲ್ಲಿ ಚಿಕಿತ್ಸೆ ಯನ್ನು ನೀಡಿದ ನಂತರ ಬಾಗಲ ಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಿಸದೇ ಇವರು ಕೂಡಾ ನಿಧನರಾಗಿದ್ದಾರೆ.

ಇನ್ನೂ ಇತ್ತ ಚಿಕ್ಕಬಳ್ಳಾಪುರದಲ್ಲಿ ಕೂಡಾ ಒರ್ವ ಶಿಕ್ಷಕ ಈ ಒಂದು ಕರೋನಾಗೆ ಬಲಿಯಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ಶಾಲಾ ಶಿಕ್ಷಕ ಕೊರೋ ನಾ ಗೆ ಸಾವಿಗೀಡಾಗಿದ್ದಾರೆ.ಚಿಂತಾಮಣಿ ತಾಲ್ಲೂಕಿ ನಲ್ಲಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವ 48 ವರ್ಷದ ಕನ್ನಡ ಶಿಕ್ಷಕ ಕೊರೋನಾಗೆ ನಿಧನರಾಗಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇನ್ನೂ ಇದರೊಂ ದಿಗೆ ರಾಜ್ಯದ ಹಲವೆಡೆ ಶಿಕ್ಷಕರು ಬೆಳ್ಳಂ ಬೆಳಿಗ್ಗೆ ಮೃತ ರಾಗದ್ದಾರೆ.

ಇನ್ನೂ ರಾಜ್ಯದಲ್ಲಿ ಹೀಗೆ ಸರಣಿ ರೂಪದಲ್ಲಿ ಶಿಕ್ಷಕರು ಸಾಯುತ್ತಿದ್ದರೂ ಕೂಡಾ ಶಿಕ್ಷಣ ಇಲಾಖೆ ಮಾತ್ರ ಎಚ್ಚೇತ್ತುಕೊಳ್ಳುತ್ತಿಲ್ಲ ಕೋವಿಡ್ ಕರ್ತವ್ಯಕ್ಕೆ ಶಿಕ್ಷಕ ರನ್ನು ನಿಯೋಜನೆ ಮಾಡಿದ್ದು ಇನ್ನಾದರೂ ಕೈಬಿಡು ವಂತೆ ಆಗ್ರಹವನ್ನು ನಾಡಿನ ಶಿಕ್ಷಕರು ಮಾಡಿದ್ದಾರೆ. ಇನ್ನೂ ನಾಡಿನ ತುಂಬೆಲ್ಲಾ ಮೃತರಾದ ಶಿಕ್ಷಕರಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ ಅಶೋಕ ಸಜ್ಜನ,ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾ ಪೂರ, ರಾಜುಸಿಂಗ್ ಹಲವಾಯಿ, ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,.ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗವೇಣಿ, ಇಂದಿರಾ.ಮುಕಾಂಬಿಕಾ ಭಟ್. ನಾಗರತ್ನ, ಲಕ್ಷ್ಮೀದೇ ವಮ್ಮ, ಎಂ ವಿ,ಕುಸುಮಾ ಎಸ್ ಹೊಳೆಯಣ್ಣನ ವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಹನಮಂತಪ್ಪ ಬೂದಿಹಾಳ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಸೂಕ್ತ ಪರಿಹಾರ ನೀಡುವಂತೆ ಒತ್ತಾಯವನ್ನು ಮಾಡಿದ್ದಾರೆ