ಬೆಂಗಳೂರು –
ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ ಮತ್ತೆ ಐವರು ಶಿಕ್ಷಕರು ಮೃತರಾಗಿದ್ದಾರೆ. ಬೆಳ್ಳಂ ಬೆಳಿಗ್ಗೆ ರಾಜ್ಯದ ಹಲವೆಡೆ ಆಸ್ಪತ್ರೆಗಳಿಗೆ ದಾಖಲಾಗಿದ್ದ ಶಿಕ್ಷಕರು ಚಿಕಿತ್ಸೆ ಫಲಿಸದೇ ಮೃತರಾಗದ್ದಾರೆ.ಹೌದು ಚುನಾವಣೆಯ ಕರ್ತವ್ಯ ಮಾಡಿ ಸಧ್ಯ ಕೋವಿಡ್ ಡೂಟಿಯಲ್ಲಿರುವ ಶಿಕ್ಷಕರಿಗೆ ಸೋಂಕು ಕಾಣಿಸಿ ಕೊಂಡು ನಂತರ ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.ಇನ್ನೂ ರಾಜ್ಯ ದಲ್ಲಿ ಸಾವಿಗೀಡಾದ ಶಿಕ್ಷಕರ ಕುರಿತಂತೆ ನೊಡೋ ದಾದರೆ

ಶ್ರೀಮತಿ ಜಿ ಎಮ್ ಕೊಳ್ಳಿ ಸಹ ಶಿಕ್ಷಕಿ ವಿಜಯಪುರ ಜಿಲ್ಲೆಯ ಉಣ್ಣಿಬಾವಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಇವರು ಕೋವಿಡ್ ಗೆ ನಿಧನರಾಗಿದ್ದಾರೆ.ಸೋಂಕು ಕಾಣಿಸಿಕೊಂಡು ವಿಜಯಪುರದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ.

ಇನ್ನೂ ಬೆಳಗಾವಿ ಜಿಲ್ಲೆಯಲ್ಲೂ ಕೂಡಾ ಒರ್ವ ಶಿಕ್ಷಕ ನಿಧನರಾಗಿದ್ದಾರೆ. ಇತ್ತೀಚಿಗೆ ನಡೆದ ಲೋಕ ಸಭೆಯ ಉಪಚುನಾವಣೆಯ ಕರ್ತವ್ಯ ಮಾಡಿದ್ದ ಬಿ ಎಸ್ ಪಾಟೀಲ ಮೃತರಾಗಿದ್ದಾರೆ.ಆಂಗ್ಲ ಭಾಷೆಯ ಸಂಪ ನ್ಮೂಲ ವ್ಯಕ್ತಿಯಾಗಿದ್ದರು ಚುನಾವಣೆಯ ನಂತರ
ಸೋಂಕು ಕಾಣಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇವರು ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಯುವ ಉತ್ಸಾಹಿ ಆಗಿದ್ದ ಇವರ ನಿಧನದಿಂದಾಗಿ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಬಡವದಂತಾಗಿದೆ.

ಇನ್ನೂ ಇನ್ನೊರ್ವ ಆದರ್ಶ ಶಿಕ್ಷಕ ಜಿಲ್ಲಾ, NGO, ನ ಮಾಜಿ ಅಧ್ಯಕ್ಷ ಪರಮೇಶ್ವರ್ ಕೊರೊನಕ್ಕೆ ತುತ್ತಾ ಗಿದ್ದಾರೆ.ಚಿಕ್ಕಮಗಳೂರಿನಲ್ಲಿ ಆದರ್ಶರಾಗಿದ್ದರು ಇವರ ನಿಧನಕ್ಕೆ ಅಧ್ಯಕ್ಷರು,ಹಾಗೂ ಸರ್ವ ಪದಾಧಿ ಕಾರಿಗಳು,ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥ ಮಿಕ ಶಾಲೆ ಶಿಕ್ಷಕರ ಸಂಘ ಚಿಕ್ಕಮಗಳೂರು ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನ ವನ್ನು ಸಲ್ಲಿಸಿದ್ದಾರೆ.

ಇನ್ನೊರ್ವ ಆದರ್ಶ ಶಿಕ್ಷಕಿ ಶಹತಾಜ್ ಸಹಶಿಕ್ಷಕಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಟಿಪ್ಪುನಗರ ಇವರು ಕೂಡಾ ನಿಧನರಾಗಿದ್ದಾರೆ. ಸೋಂಕು ಕಾಣಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೇ ನಿಧನ ರಾಗಿದ್ದಾರೆ.ಮೃತರಾದ ಇವರಿಗೆ ಶಿಕ್ಷಕಿರವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೇ ಇವರ ಕುಟುಂಬಕ್ಕೆ ಈ ದುಃಖ ಬರಿಸುವ ಶಕ್ತಿಯನ್ನು ಕರುಣಾಮಹಿಯಾದ ಭಗವಂ ತನಲ್ಲಿ ಶಿಕ್ಷಕರು ಪ್ರಾರ್ಥನೆ ಮಾಡಿದ್ದಾರೆ.

ಇದರೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊರ್ವ ಶಿಕ್ಷಕರು ಮೃತರಾಗಿದ್ದಾರೆ.ಇತ್ತೀಚಿಗೆ ಚುನಾವಣೆಯ ಕರ್ತವ್ಯವನ್ನು ಮುಗಿಸಿದ ಇವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದು ಇವರ ಕುರಿತಂತೆ ಜಿಲ್ಲಾ ಶಿಕ್ಷಕರ ಸಂಘ ಮತ್ತು ಇಲಾಖೆ ಮಾಹಿತಿಯನ್ನು ಕಲೆಹಾಕು ತ್ತಿದೆ.ಇಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂಬ ಮಾಹಿತಿಯನ್ನು ಶಿಕ್ಷಕ ರೊಬ್ಬರು ಸುದ್ದಿ ಸಂತೆ ಗೆ ಹೇಳಿದ್ದಾರೆ.

ಇನ್ನೂ ಮೃತರಾದ ಐದು ಜನ ಶಿಕ್ಷಕರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಆಪ್ತರು ಮಕ್ಕಳು ಸಂತಾಪವನ್ನು ಸೂಚಿಸಿದ್ದಾರೆ.ಅದರಲ್ಲೂ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾದ ಪವಾಡೆಪ್ಪ, ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನುಮಂತಪ್ಪ ಬೂದಿಹಾಳ,ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವ ಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ,ನಾಗರಾಜ ಕಾಮನ ಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪು ರ,ರಾಜೀವಸಿಂಗ ಹಲವಾಯಿ,ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ, ಎಂ ಐ ಮುನವಳ್ಳಿ, ಆರ್ ನಾರಾಯಣ ಸ್ವಾಮಿ ಚಿಂತಾಮಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ,ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ.ಇನ್ನೂ ಇತ್ತ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರ ಪರವಾಗಿ ಶಂಭುಲಿಂಗನೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ಸೂಚಿಸಿದರು.