ಬೆಂಗಳೂರು –
ಹೊಸ ಪಿಂಚಣಿ ವ್ಯವಸ್ಥೆ ವಿರುದ್ದ ಸಿಡಿದೆದ್ದಿರುವ ರಾಜ್ಯದ ಎನ್ ಪಿ ಎಸ್ ನೌಕರರು ಕಳೆದ 8 ದಿನ ಗಳಿಂದ ಬೆಂಗಳೂರಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟವನ್ನು ಮಾಡುತ್ತಿದ್ದಾರೆ.ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಈ ಒಂದು ಹೋರಾಟವು ನಡೆಯುತ್ತಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಎನ್ ಪಿ ಎಸ್ ನೌಕರರು ಪಾಲ್ಗೊಂಡಿದ್ದಾರೆ.
ಕಳೆದ 8 ದಿನಗಳಿಂದ ಲಕ್ಷಾಂತರ ನೌಕರರು ಈ ಒಂದು ಹೋರಾಟದಲ್ಲಿ ಪಾಲ್ಗೊಂಡು ಪ್ರತಿಭಟನೆ ಮಾಡುತ್ತಿದ್ದು ಇದರ ನಡುವೆಯೂ ನೌಕರರು ಸ್ವಚ್ಚತೆಯನ್ನು ತಾವೇ ಮಾಡುತ್ತಿದ್ದಾರೆ.ಹೌದು ಪ್ರೀಡಂ ಪಾರ್ಕ್ ನ ಪ್ರತಿಭಟನಾ ಸ್ಥಳದ ಸುತ್ತ ಮುತ್ತಲಿನ ಸ್ಥಳವನ್ನು ಧಾರವಾಡ ಜಿಲ್ಲಾ ಎನ್ ಪಿಎನ್ ನೌಕರ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಕರೆನ್ನವರ ಸ್ವಚ್ಚತೆಯನ್ನು ಮಾಡಿದರು.
ಹೋರಾಟದ ನಡುವೆಯೂ ಸುತ್ತ ಮುತ್ತಲಿನ ಸ್ಥಳವನ್ನು ಸ್ವಚ್ಚತೆಯನ್ನು ಮಾಡಿದರು.ತಾವೇ ಖುದ್ದಾಗಿ ಕೈಯಲ್ಲೊಂದು ಕಸಬರಗಿ ಯನ್ನು ಹಿಡಿದುಕೊಂಡು ಕ್ಲೀನ್ ಮಾಡಿದರು.ಕಸ ಸೇರಿ ದಂತೆ ಎಲ್ಲವನ್ನೂ ಸ್ವಚ್ಚಗೊಳಿಸಿದ ಜಿಲ್ಲಾಧ್ಯಕ್ಷರು ಪ್ರತಿಭಟನೆಯ ಸ್ಥಳದ ಸುತ್ತ ಮುತ್ತಲಿನ ಸ್ಥಳ ವನ್ನು ಸಂಪೂರ್ಣವಾಗಿ ಸ್ವಚ್ಚತೆಯನ್ನು ಮಾಡಿ ಇತರರಿಗೆ ಮಾದರಿಯಾದರು.
ಯಲ್ಲಪ್ಪ ಕರೆನ್ನವರ ಅವರಿಗೆ ಇತರ ಮಹಿಳಾ ನೌಕರರು ಕೂಡಾ ಸಾಥ್ ನೀಡಿ ನೆರವಾಗಿ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿಕೊಟ್ಟು ಇತರರಿಗೆ ಮಾದರಿಯಾದರು.ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟವನ್ನು ಮಾಡದೇ ಅದರೊಂದಿಗೆ ಸಾಮಾಜಿಕ ಜವಾಬ್ದಾರಿ ಏನು ಎಂಬೊದನ್ನು ಎನ್ ಪಿಎಸ್ ನೌಕರರು ಈ ಮೂಲಕ ತೋರಿಸಿಕೊಟ್ಟರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..