ಬೆಂಗಳೂರು –
ಸ್ವಂತ ಜಿಲ್ಲೆಗೆ ವರ್ಗಾವಣೆ ಗಾಗಿ ಮತ್ತೆ ಬೆಂಗಳೂರು ಚಲೋ ಹೋರಾಟಕ್ಕೆ ಕರೆಯಲಾಗಿದೆ ಹೌದು ಜೂನ್ 2 ಕ್ಕೆ ಶಿಕ್ಷಕರು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಈ ಒಂದು ಹೋರಾಟವನ್ನು ಆರಂಭ ಮಾಡಲಿದ್ದು ಹೆಚ್ಚಿನ ಪ್ರಮಾಣ ದಲ್ಲಿ ಪ್ರತಿಭಟನೆ ಯಲ್ಲಿ ಪಾಲ್ಗೊಳ್ಳುವಂತೆ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ಪವಾಡೆಪ್ಪ ಸೇರಿದಂತೆ ಹಲವರು ಕರೆ ನೀಡಿದ್ದಾರೆ
ಸುಮಾರು ವರ್ಷಗಳಿಂದ ಹತ್ತು ಹದಿನೈದು ಇಪ್ಪತ್ತು ಇಪ್ಪ ತ್ತೈದು ವರ್ಷಗಳ ವರೆಗೆ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸು ತ್ತಿರುವ ಶಿಕ್ಷಕರು ಒಮ್ಮೆ ಸ್ವಂತ ಜಿಲ್ಲೆಗೆ ವರ್ಗಾವಣೆ ಗಾಗಿ ಜೂನ್ ಎರಡರಂದು ಬೆಂಗಳೂರು ಪ್ರೀಡಂಪಾರ್ಕ್ ಹೋರಾಟಕ್ಕೆ ಕರೆ ನೀಡಿದ್ದಾರೆ ಸಾಕಷ್ಟು ಸೇವೆ ಸಲ್ಲಿಸಿದರು ನಮ್ಮನ್ನ ವರ್ಗಾವಣೆ ಮಾಡದೆ ಕಡಿಮೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ ವರ್ಗಾವಣೆ ನೀಡಿ ನಮ್ಮ ಸೇವೆ ಪರಿಗಣಿಸದೆ ವರ್ಗಾವಣೆಯಿಂದ ವಂಚಿತರಾಗಿ ಮಾಡಿದ್ದಾರೆ ಹೀಗಾಗಿ ಶಿಕ್ಷಕರ ಕುಟುಂಬಗಳು ಬೀದಿಪಾಲಾಗಿವೆ ಅನೇಕ ಕೌಟುಂ ಬಿಕ ಕಲಹಗಳು ಡೈವರ್ಸ್ ವೈದ್ಯಕೀಯ ಅಂಗವಿಕಲ ಪತಿ ಪತ್ನಿ ಪ್ರಕರಣ ದೀರ್ಘಕಾಲದವರೆಗೆ ಸೇವೆ ಸಲ್ಲಿಸಿದ ಶಿಕ್ಷಕರು ಶಿಕ್ಷಕಿಯರು ನೆಮ್ಮದಿಯಿಲ್ಲದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ ಹೀಗಾಗಿ ಒಮ್ಮೆ ಸ್ವಂತ ಜಿಲ್ಲೆಗೆ ವರ್ಗಾವಣೆ ಕೊಡಿ ನೆಮ್ಮದಿಯಿಂದ ಪಾಠ ಮಾಡಲು ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಒತ್ತಡ ಹಾಕಲು ತಮ್ಮ ನೋವುಗಳನ್ನು ತೋಡಿಕೊಳ್ಳಲು ಜೂನ್ 2 ರಿಂದ ಬೆಂಗ್ಳೂರು ಚಲೋ ಹೋರಾಟಕ್ಕೆ ಕರೆ ನೀಡಿದ್ದಾರೆ ಎಂದು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ