ಶಾಲೆಗಳ ಆರಂಭದ ಬೆನ್ನಲ್ಲೇ ಶಾಲೆಗಳ ಮೌಲ್ಯಮಾಪನಕ್ಕೆ ಕಾರ್ಯಪಡೆ ರಚನೆ ಕಲಿಕಾ ಚೇತರಿಕೆ ಪರಿಶೀಲನೆ ಗೆ ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ ಕಾರ್ಯಪಡೆ ರಚನೆ

Suddi Sante Desk
ಶಾಲೆಗಳ ಆರಂಭದ ಬೆನ್ನಲ್ಲೇ ಶಾಲೆಗಳ ಮೌಲ್ಯಮಾಪನಕ್ಕೆ ಕಾರ್ಯಪಡೆ ರಚನೆ  ಕಲಿಕಾ ಚೇತರಿಕೆ ಪರಿಶೀಲನೆ ಗೆ ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ ಕಾರ್ಯಪಡೆ ರಚನೆ

ಬೆಂಗಳೂರು

 

 

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೈಗೊಂಡ ಮಹತ್ವಾ ಕಾಂಕ್ಷಿ  ಕಲಿಕಾ ಚೇತರಿಕೆ ವಿಶೇಷ ಕಾರ್ಯಕ್ರಮವು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಮರ್ಪಕ ಅನುಷ್ಠಾನಗೊಳ್ಳದೆ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ ಕಾರ್ಯಪಡೆ ರಚಿಸಲು ನಿರ್ಧರಿಸಿದೆ.ಕೋವಿಡ್‌ನಿಂದಾಗಿ ಶಾಲೆಗಳಲ್ಲಿ ವ್ಯವಸ್ಥಿತವಾಗಿ ಬೋಧನೆ, ಕಲಿಕಾ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ.

 

ಇದನ್ನು ಸರಿದೂಗಿಸಲು ಪ್ರಸಕ್ತ ಶೈಕ್ಷಣಿಕ ವರ್ಷ ವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿ ಸಿದೆ ಆದರೆ ಕಲಿಕಾ ಚೇತರಿಕೆಯ ಉಪಕ್ರಮಗಳು ಸರಿಯಾಗಿ ಅನುಷ್ಠಾನ ಗೊಂಡಿರಲಿಲ್ಲ.

 

ಕಾರ್ಯಪಡೆಯಲ್ಲಿ ಯಾರಿರುತ್ತಾರೆ            ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಪಡೆಯಲ್ಲಿ ಡಯಟ್‌ ಪ್ರಾಂಶುಪಾಲರು ಅಧ್ಯಕ್ಷರಾಗಿರುತ್ತಾರೆ. ಡಯಟ್‌ ಹಿರಿಯ ಉಪನ್ಯಾಸಕರು ನೋಡಲ್‌ ಅಧಿಕಾರಿಯಾಗಿದ್ದು ವಿಷಯ ಪರಿವೀಕ್ಷಕರು, ಬಿಆರ್‌ಪಿ,ಸಿಆರ್‌ಪಿ ಸದಸ್ಯರಾಗಿದ್ದಾರೆ.

 

ಕಾರ್ಯಪಡೆ ಜವಾಬ್ದಾರಿಗಳೇನು…..ರಗತಿಗಳಲ್ಲಿ ಕಲಿಕಾ ಚಟುವಟಿಕೆಗಳ ಅನುಷ್ಠಾನವನ್ನು ಖಾತ್ರಿಪಡಿಸಿಕೊಳ್ಳುವುದುಸಿ ಆರ್‌ಪಿಗಳ ಮೂಲಕ ಪ್ರಗತಿ ವಿವರ ಪಡೆದು ಶೈಕ್ಷಣಿಕ ಬೆಂಬಲ ನೀಡುವುದು ಪ್ರತೀ ತಿಂಗಳು ಎಲ್ಲ ಹಂತದ ಶಿಕ್ಷಕರಿಗೆ ಕ್ಲಸ್ಟರ್‌ ಸಮಾಲೋಚನ ಸಭೆ ನಡೆಸುವುದು ಕಲಿಕಾ ಹಾಳೆ ಹಾಗೂ ಶಿಕ್ಷಕರ ಕೈಪಿಡಿಗಳ ಸಮರ್ಪಕ ಬಳಕೆ ಖಾತ್ರಿಪಡಿಸಿಕೊಳ್ಳು ವುದು ಕಲಿಕಾ ಫಲ ಆಧಾರಿತ ತರಗತಿ ಪ್ರಕ್ರಿಯೆ ನಡೆಯುವಂತೆ ನಿರಂತರ ಮಾರ್ಗದರ್ಶನ ನೀಡುವುದು.ಶಿಕ್ಷಕರು ಹಾಗೂ ಅಧಿಕಾರಿಗಳ ಸಂದೇಹ ಪರಿಹಾರ ಮೌಲ್ಯಮಾಪನ ವಿಧಾನಗಳ ಬಗ್ಗೆ ಮಾರ್ಗ ದರ್ಶನ

 

 

ಬ್ಲಾಕ್‌ ಹಾಗೂ ಜಿಲ್ಲಾ ಹಂತದಲ್ಲಿ ಸಹಾಯ ವಾಣಿಯ ಸಮರ್ಪಕ ನಿರ್ವಹಣೆ ಜಿಲ್ಲಾ ಹಂತದಲ್ಲಿ ನೀಡಿರುವ ದತ್ತು ಶಾಲೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಮಾರ್ಗದರ್ಶನ ನೀಡುವುದನ್ನು ಖಾತ್ರಿಪಡಿಸಿಕೊಳ್ಳುವುದು.ಸಾ ರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶ ಕರು (ಅಭಿವೃದ್ಧಿ) ಕೂಡಲೇ ಜಿಲ್ಲಾ ಹಂತದ ಶೈಕ್ಷಣಿಕ ಕಾರ್ಯಪಡೆ ರಚಿಸಬೇಕು.ಇದಕ್ಕಾಗಿ ಸೂಕ್ತ ಕ್ರಮ ಕೈಗೊಂಡು ಕಲಿಕಾ ಚೇತರಿಕೆ ಕಾರ್ಯಕ್ರಮದ ಉಪಕ್ರಮಗಳ ಪರಿಣಾಮ ಕಾರಿ ಅನುಷ್ಠಾನ ಕುರಿತ ವರದಿಯನ್ನು ಪ್ರತಿ ತಿಂಗಳು ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗೆ ಕಳುಹಿಸಬೇಕು.

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.