ಕಲಬುರಗಿ –
ಬಿಜೆಪಿ ಯ ಹಿರಿಯ ನಾಯಕ ಮಾಜಿ ಶಾಸಕ ಚಿತ್ತಾಪುರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ವಾಲ್ಮೀಕಿ ನಾಯಕ್ (65) ನಿಧನರಾಗಿದ್ದಾರೆ.ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿ ನಿಧನರಾಗಿದ್ದಾರೆ.

ತೀವ್ರ ಹೃದಯಾಘಾತ ಹಿನ್ನಲೆಯಲ್ಲಿ ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಾಲ್ಮೀಕಿ ನಾಯಕ್ ನಿಧನರಾದರು.

2009 ಚಿತ್ತಾಪುರ ಉಪಚುನಾವಣೆಯಲ್ಲಿ ಪ್ರೀಯಾಂಕ್ ಖರ್ಗೆ ವಿರುದ್ಧ ಗೆಲವು ಸಾಧಿಸಿದ್ದರು. ಇನ್ನೂ ಇವರ ನಿಧನಕ್ಕೆ ಧಾರವಾಡ ಜಿಲ್ಲೆಯ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಧಾರವಾಡ ಜಿಲ್ಲೆಯ ಬಿಜೆಪಿ ಶಾಸಕರಾದ ಅಮೃತ ದೇಸಾಯಿ,ಅರವಿಂದ ಬೆಲ್ಲದ, ಶಂಕರ ಪಾಟೀಲ್ ಮುನೇನಕೊಪ್ಪ ಸೇರಿದಂತೆ ಹಲವರು ಅಗಲಿದ ಪಕ್ಷದ ಹಿರಿಯ ನಾಕನಿಗೆ ಸಂತಾಪ ಸೂಚಿಸಿದ್ದಾರೆ.