ನಾನು ಈ ಬಾರಿ ಅಧಿವೇಶನದಲ್ಲಿ ಭಾಗಿಯಾಗೊದಿಲ್ಲವೆಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ – ಈಬಾರಿ ಚುನಾವಣೆಯಲ್ಲಿ 123 ರಿಂದ 130 ಸೀಟ್ ಗೆಲ್ಲುತ್ತೇವೆ ಎಂದ HDK

Suddi Sante Desk
ನಾನು ಈ ಬಾರಿ ಅಧಿವೇಶನದಲ್ಲಿ ಭಾಗಿಯಾಗೊದಿಲ್ಲವೆಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ – ಈಬಾರಿ ಚುನಾವಣೆಯಲ್ಲಿ 123 ರಿಂದ 130 ಸೀಟ್ ಗೆಲ್ಲುತ್ತೇವೆ ಎಂದ HDK

ಹುಬ್ಬಳ್ಳಿ

ಡಿಸೆಂಬರ್ 19 ರಿಂದ ಬೆಳಗಾವಿಯಲ್ಲಿ ಆರಂಭ ವಾಗಲಿರುವ ಚಳಿಗಾಲದ ಅಧಿವೇಶ ನದಲ್ಲಿ ನಾನು ಈ ಬಾರಿ ಪಾಲ್ಗೊಳ್ಳೊದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಹುಬ್ಬಳ್ಳಿ ಯಲ್ಲಿ ಮಾತನಾಡಿದ ಅವರು ಬರುವ ಚುನಾವಣೆಯಲ್ಲಿ 123 ರಿಂದ 130 ಸೀಟ್ ಗಳನ್ನು ಗೆಲ್ಲುತ್ತೇವೆ ಎಂದರು.

ಹುಬ್ಬಳ್ಳಿಯ ಏರಪೋರ್ಟ್ ನಲ್ಲಿ ಮಾತನಾಡಿದ ಅವರು ಲಕ್ಷ್ಮೇಶ್ಚರಕ್ಕೆ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗ್ತೀದಿನಿ.ಪಂಚ ರತ್ನ ಕ್ಕೆ ಹೋದ ಕಡೆ  ಅಭೂತಪೂರ್ವ ಬೆಂಬಲ ಸಿಕ್ಕಿದೆ.ಜನೇವರಿ 3 ರಿಂದ ಬೀದರ್ ಭಾಗದಿಂದ ಈ ಒಂದು ಕಾರ್ಯಕ್ರಮ ಆರಂಭವಾಗುತ್ತೆ ಫೆಬ್ರುವರಿ ತಿಂಗಳಲ್ಲಿ ಬೆಳಗಾವಿ ಭಾಗದಲ್ಲಿ ಪಂಚರತ್ನ ಕಾರ್ಯಕ್ರಮ ಆರಂಭವಾಗಲಿದೆ ಎಂದರು.

ಇನ್ನೂ ಬಿಜೆಪಿ ಸರ್ಕಾರ ಯಾವ ಕಾರ್ಯಕ್ರಮ ಆಗಿಲ್ಲ.ಪಂಚರತ್ನ ಯಾತ್ರೆಗೆ ಸಮಯ ನಿಗದಿಯಾ ಗಿದೆ ಹಾಗಾಗಿ ನಾನು ಭಾಗವಹಿಸುತ್ತಿಲ್ಲ.ನಮ್ಮ ಉಪಸ್ಥಿತಿಯಲ್ಲಿ ಬಂಡೆಪ್ಪ ಕಾಶಂಪೂರ ಸಮಸ್ಯೆ ಬಗ್ಗೆ ಮಾತಾಡ್ತಾರೆ ಸರ್ಕಾರ ಕೇವಲ ಘೋಷಣೆಗೆ ಸೀಮಿತವಾಗಿದೆ ಬರಿ ಸಿಹಿ ಸುದ್ದಿ,ಹುಳಿ ಸುದ್ದಿ ಅಂತಾರೆ.ಕೇವಲ ಬರೀ ದೊಡ್ಡ ಘೋಷಣೆ ಮಾಡೋದು ಇವರ ಕೆಲಸವಾಗಿದೆ ಎಂದರು

 

 

ಬೆಳಗಾವಿ ಗಡಿ ವಿವಾದ ಕುರಿತು ಮಾತನಾಡಿದ ಅವರು ಎರಡು ರಾಜ್ಯದ ಬಿಜೆಪಿ ನಾಯಕರು ವಿಷಯ ಡೈವರ್ಟ್ ಮಾಡ್ತೀದಾರೆ ಕರ್ನಾಟಕ ಬಿಜೆಪಿ,ಮಾಹಾರಾಷ್ಟ್ರ ಬಿಜೆಪಿ ನಾಯಕರು ವಿಷಯ ಡೈವರ್ಟ್ ಮಾಡ್ತೀದಾರೆ ಗಡಿ ವಿವಾದ ಮುಗಿದು ಹೋದ ಅಧ್ಯಾಯವಾಗಿದೆ ಎಂದರು ಕುಮಾರಸ್ವಾಮಿ.ಇನ್ನೂ ಬಿಜೆಪಿ ನಾಯಕರಿಗೆ ಅಭಿವೃದ್ದಿ ವಿಷಯ ಇಲ್ಲ,ಒಬ್ಬರು ಅತ್ತಹಾಗೆ ಮಾಡು,ಒಬ್ಬರು ಹೊಡದಂಗೆ ಮಾಡೋ ಹಾಗಿದೆ ನಾವು ಈ ಬಾರಿ 123 ರಿಂದ 130 ಸೀಟ್ ಗೆಲ್ತೀವಿ ರಾಜ್ಯದ ಯಾವ‌ ಪಕ್ಷದ ನಾಯಕರು ನನ್ನ ಸಂಪರ್ಕದಲ್ಲಿ ಇಲ್ಲ

ಸಿದ್ದರಾಮಯ್ಯ ಬಸ್ ಯಾತ್ರೆ ವಿಚಾರ  ಕುರಿತಂತೆ ಮಾತನಾಡಿ ಅವರು ಎಲ್ಲಿಂದಲೋ ಸ್ಟಾರ್ಟ್ ಮಾಡಲಿ ಅದು ಅವರ ಅವರ ಪಕ್ಷದ ವಿಚಾರ, ನಾನು ಯಾಕೆ ಚರ್ಚೆ ಮಾಡಲಿ ಎಂದು ಟಾಂಗ್ ನೀಡಿದರು.ಕೆಸಿಆರ್ ನಮಗೆ ಬೆಂಬಲ ಕೊಡ್ತೀ ದಾರೆ ಅವರ ಪಕ್ಷದ ಶಾಸಕರು ನಮಗೆ ಬೆಂಬಲ ಕೊಡ್ತೀನಿ ಎಂದಿದ್ದಾರೆ.ಜನಾರ್ಧನ ರೆಡ್ಡಿ ಮಾತು ಕತೆಯಾಗಿಲ್ಲ ಈ ಬಾರಿ ಯಾರ ಜೊತೆಯೂ ಹೊಂದಾಣಿಕೆ ಪ್ರಶ್ನೆ ಇಲ್ಲ ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಅನ್ನೋ ಗುರಿ ಇದೆ ಗುಜರಾತ್ ಮಾಡೆಲ್ಲ ಇಲ್ಲಿ ವರ್ಕೌಟ್ ಆಗಲ್ಲ ವೆಂದರು.

ಈ ಒಂದು ಸಮಯದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ,ಹಜರತ್ ಅಲಿ ಜೋಡಮಣಿ,ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಎಮ್ ಸವದತ್ತಿ, ಸಾಕ್ಷಿ ಕುಡಚಿ,ಸೇರಿದಂತೆ ಹಲವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸ್ವಾಗತ ಮಾಡಿಕೊಂಡು ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.