ಬದಾಮಿ –
ವೇದಿಕೆಯ ಮೇಲೆ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಿಂದ ಕೆಳಗೆ ನೂಕಿದ ಘಟನೆ ಬದಾಮಿಯಲ್ಲಿ ನಡೆದಿದೆ.

ಬಾದಾಮಿ ಪಟ್ಟಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

ಅಹವಾಲು ಸಲ್ಲಿಸುವ ವೇಳೆ ಕಾರ್ಯಕರ್ತರ ಮಧ್ಯೆ ವಾಗ್ವಾದ ಆರಂಭವಾಯಿತು. ಸಮಸ್ಯೆ ಹೇಳುವ ಭರದಲ್ಲಿ ಹಿರಿಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಹಿರಿಯರಾದ ಸಂಗಣ್ಣ ದ್ಯಾಮನ್ನವರ್. ಕಿತ್ತಲಿ ಗ್ರಾಮದ ಇವರು ಸಿದ್ದರಾಮಯ್ಯ ಎದುರೇ ಅಸಮಧಾನ ಹೊರಹಾಕಿದರು.
ಯಾರೂ ಸಹ ಹಳ್ಳಿ ಭಾಗದ ಕಡೆಗೆ ಬಂದಿಲ್ಲ.ನಮ್ಮ ಗ್ರಾಮದ ಆಶ್ರಯ ಮನೆಗಳು ಹಾಳಾಗಿ ಹೋಗಿವೆ.ಸಿದ್ದಾರಾಮಯ್ಯ ಬಂದು ಹೋದ್ರೂ, ಆದ್ರು ಕಾಮಗಾರಿ ಸರಿಯಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಅಲ್ಲದೇ ಹಳ್ಳಿಗಳ ಕಡೆಗೆ ಬಂದು ಜನ್ರು ಸಮಸ್ಯೆಯನ್ನ ಆಲಿಸಬೇಕು ಎಂದರು .ಇದು ಕಾಂಗ್ರೆಸ್ ಪಕ್ಷ, ದೊಡ್ಡ ಪಕ್ಷ. ಹುಡುಗಾಟ ಹಚ್ಚಿದ್ದೀರಾ ಎಂದು ತಾರಾಟೆಗೆ ತಗೆದುಕೊಳ್ಳಲು ಮುಂದಾದರು.

ಹೀಗೆ ಮುಂದಾಗುತ್ತಿದ್ದಂತೆ ವ್ಯಕ್ತಿಯ ವಿರುದ್ದ ಕೆಲವರ ವಿರೋಧ ವ್ಯಕ್ತಪಡಿಸಿದರು. ಸಂಗಣ್ಣ ದ್ಯಾಮಣ್ಣನವರ್ ಮಾತು ಕೇಳಿ ಗರಂ ಆದ ಸಿದ್ದರಾಮಯ್ಯ ಸಮಸ್ಯೆ ಹೇಳ್ತಿರೋ ಸಂಗಣ್ಣ ದ್ಯಾಮನ್ನವರ್ ರನ್ನು ನೂಕಿ ಹೊರ ಕಳಿಸಿದರು.

ಬಾದಾಮಿ ಪಟ್ಟಣದ ಶಾಸಕ ಸಿದ್ದರಾಮಯ್ಯ ಗೃಹ ಕಛೇರಿ ಎದುರು ನಡೆಯುತ್ತಿರುವ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಈ ಒಂದು ಘಟನೆ ನಡೆದಿದ್ದು ಸಧ್ಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಬಂದಾಗಲಾದರೂ ತಾಳ್ಮೆಯಿಂದ ಕ್ಷೇತ್ರದ ಸಮಸ್ಯೆಯನ್ನು ಆಲಿಸಬೇಕು ಕೇಳಬೇಕು
ಅದನ್ನೇಲ್ಲ ಬಿಟ್ಟು ವೇದಿಕೆಯ ಮೇಲೆ ಇರೊದನ್ನು ಹೇಳುತ್ತಿದ್ದ ಹಿರಿಯರನ್ನು ಸಿದ್ದರಾಮಯ್ಯ ಹೀಗೆ ಮಾಡಿದ್ದು ಕ್ಷೇತ್ರದ ಮತದಾರರಿಗೆ ಅನ್ಯಾಯ ಮಾಡಿದಂತೆ ಎಂಬ ಮಾತುಗಳು ಸಧ್ಯ ಕೇಳಿ ಬರುತ್ತಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮತದಾರರು ಮಾಜಿ ಸಿಎಮ್ ವಿರುದ್ದ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.