ಹುಕ್ಕೇರಿ –
ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಯುವ ಜನರ ಉದ್ಯೋಗಕ್ಕಾಗಿ ಹಮ್ಮಿಕೊಂಡಿದ್ದ 2A ಮೀಸ ಲಾತಿಗಾಗಿ ಹೋರಾಟದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಪಾಲ್ಗೊಂಡು ಧ್ವನಿ ಎತ್ತಿದರು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದ ಒಂದು ದಿನದ ಚಳುವಳಿಯಲ್ಲಿ ಪಾಲ್ಗೊಂಡು ಮೀಸಲಾತಿ ಗಾಗಿ ಪಾದಯಾತ್ರೆ ಮಾಡುತ್ತಾ ಆಗ್ರಹವನ್ನು ಮಾಡಿದರು.
ಪ್ರಥಮ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಧರ್ಮಕ್ಷೇತ್ರ ಕೂಡಲ ಸಂಗಮ ಸಾನಿಧ್ಯದಲ್ಲಿ ಮಹತ್ವದ ಚಳುವಳಿಗೆ ಸಮಾಜ ಬಾಂಧವರು ಹಾಲಿ ಮಾಜಿ ಜನಪ್ರತಿ ನಿಧಿಗಳು ವಿವಿಧ ಸಂಘಟನೆಗಳ ವಿವಿಧ ಘಟಕ ಗಳು ರಾಷ್ಟ್ರೀಯ, ರಾಜ್ಯ ಜಿಲ್ಲಾ ತಾಲ್ಲೂಕು ನಗರ ಗ್ರಾಮ ಘಟಕಗಳ ಪದಾಧಿಕಾರಿಗಳು ನೆರೆದ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಲಕರ್ಣಿ ಮೀಸಲಾತಿ ಕುರಿತಂತೆ ಮಾಹಿತಿಯನ್ನು ನೀಡಿ ಈ ಕೂಡಲೇ ಸಮಾಜಕ್ಕೆ ಮೀಸಲಾತಿಯನ್ನು ನೀಡುವಂತೆ ಒತ್ತಾಯವನ್ನು ಮಾಡಿದರು.
ಈ ಸಮಯದಲ್ಲಿ ಪಂಚಮಸಾಲಿ ಸಮಾಜದ ರಾಷ್ಟ್ರಾಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ ಮಾಜಿ ಸಚಿವರುಗಳಾದ ಎ ಬಿ ಪಾಟೀಲ, ಶಶಿಕಾಂತ ನಾಯಕ ,ವಿಧಾನ ಪರಿಷತ ಸದಸ್ಯ ರಾದ ಚನ್ನರಾಜ ಹಟ್ಟಿಹೊಳಿ,ಶಾಸಕರುಗಳಾದ ಬಸನಗೌಡ ಪಾಟೀಲ ಯತ್ನಾಳ,ಲಕ್ಷ್ಮಿ ಹೆಬ್ಬಾಳ ಕರ್,ಅರವಿಂದ ಬೆಲ್ಲದ ಸೇರಿದಂತೆ ಬೆಳಗಾವಿ ಜಿಲ್ಲಾ ಪಂಚಮಸಾಲಿ ಮುಖಂಡರು ಉಪಸ್ಥಿತರಿದ್ದರು.