ಕಮಲ ಬಾರ ಇಳಿಸಿ ಕೈ ಬಾರ ಹೊತ್ತುಕೊಳ್ಳಲು ಮುಂದಾದ ಮಾಜಿ ಶಾಸಕ V S ಪಾಟೀಲ್ …..

Suddi Sante Desk

ಕಾರವಾರ –

ಮಾಜಿ ಶಾಸಕ ವಿ ಎಸ್ ಪಾಟೀಲ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಯಾಗಲು ನಿರ್ಧಾರ ಕೈಗೊಂಡಿದ್ದಾರೆ ಹೌದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ರಾಜಕೀಯದಲ್ಲಿ ಬದಲಾವಣೆಯ ಸುದ್ದಿ ಹಬ್ಬಿದೆ.ಮಾಜಿ ಶಾಸಕ,ಪ್ರಭಾವಿ ನಾಯಕ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ತಯಾರಿಯ ಲ್ಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ.

ಮಾಜಿ ಶಾಸಕ ವಿ.ಎಸ್.ಪಾಟೀಲ್ ಬಿಜೆಪಿ ತೊರೆದು ಕಾಂಗ್ರೆಸ್‌ನತ್ತ ಹೊರಟಿದ್ದಾರೆ.ಮುಂದಿನ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿದೆ ಎಂದು ಚರ್ಚೆ ಗಳು ನಡೆದಿವೆ.ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಶಿವರಾಮ್‌ ಹೆಬ್ಬಾರ್‌ಗೆ ವಿ. ಎಸ್. ಪಾಟೀಲ್ ಕ್ಷೇತ್ರ ಬಿಟ್ಟುಕೊಟ್ಟಿದ್ದರು.ಬಳಿಕ ಅವರಿಗೆ ಸರಿಯಾದ ಗೌರವ,ಸ್ಥಾನಮಾನ ಸಿಕ್ಕಿಲ್ಲ ಎಂಬುದು ಚರ್ಚೆಯ ವಿಚಾರವಾಗಿದೆ.ಇದರಿಂದಾಗಿ ಅವರ ಅಭಿಮಾನಿಗಳು ಸಹ ಬೇಸರಗೊಂಡಿದ್ದಾರೆ ಇದರಿಂದಾಗಿ ಕಾಂಗ್ರೆಸ್‌ ಕಡೆ ಜನರು ವಾಲುತ್ತಿದ್ದಾರೆ.

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿದ್ದ ವಿ. ಎಸ್. ಪಾಟೀಲ್ ಅಧಿಕಾರ ರದ್ದುಪಡಿಸಿ ಆಗಸ್ಟ್ ತಿಂಗಳಿ ನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದರು.2023ರ ಚುನಾವಣೆ ಮೇಲೆ ಕಣ್ಣಿಟ್ಟಿರುವ ವಿ. ಎಸ್. ಪಾಟೀಲ್ ರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಈಗ ಬಲವಾಗಿ ಕೇಳಿ ಬರುತ್ತಿದ್ದು ಇದಕ್ಕೆ ಇವರು ಸೇರ್ಪಡೆ ವಿಚಾರ ಪುಷ್ಟಿ ನೀಡುತ್ತಿದೆ

2018ರ ವಿಧಾನಸಭೆ ಚುನಾವಣೆಯಲ್ಲಿ ಅರೆಬೈಲು ಶಿವರಾಮ್ ಹೆಬ್ಬಾರ್ ಯಲ್ಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.66,290 ಮತಗಳನ್ನು ಪಡೆದು ಜಯಗಳಿಸಿದರು.ಆಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾ ಆದರೆ 2019ರಲ್ಲಿ ರಾಜಕೀಯ ಚಿತ್ರಣ ಬದಲಾಯಿತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವರಾಮ್ ಹೆಬ್ಬಾರ್ ಬಿಜೆಪಿಗೆ ಬಂದರು.ಉಪ ಚುನಾವಣೆಯಲ್ಲಿ ವಿ. ಎಸ್. ಪಾಟೀಲ್ ಕ್ಷೇತ್ರ ಬಿಟ್ಟುಕೊಟ್ಟರು.ಉಪ ಚುನಾವಣೆ ಗೆದ್ದ ಹೆಬ್ಬಾರ್ ಸಚಿವರಾದರು.ಆದರೆ ಪಾಟೀಲ್‌ಗೆ ಸರಿ ಯಾದ ಗೌರವ ಸಿಗಲಿಲ್ಲ.ವಿ. ಎಸ್. ಪಾಟೀಲ್ 64,807 ಮತಗಳನ್ನು ಪಡೆದು ಎರಡನೇ ಸ್ಥಾನಗಳಿಸಿದ್ದರು.

ವಿ. ಎಸ್. ಪಾಟೀಲ್ ಕ್ಷೇತ್ರದಲ್ಲಿ ಅಪಾರ ಅಭಿಮಾನಿಗ ಳನ್ನು ಹೊಂದಿದ್ದಾರೆ.ಕಳೆದ ಬಾರಿಯ ಚುನಾವಣೆಯಲ್ಲಿ ಅವರು 64,807 ಮತಗಳನ್ನು ಪಡೆದಿದ್ದು ಸಹ ಇದಕ್ಕೆ ಸಾಕ್ಷಿಯಾಗಿದೆ.ಈಗ ಅವರು ಕಾಂಗ್ರೆಸ್ ಸೇರಿದರೆ ಪಕ್ಷಕ್ಕೆ ಸಹ ಲಾಭವಾಗಲಿದೆ.

ಯಲ್ಲಾಪುರ ಕ್ಷೇತ್ರದ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕಾರ್ಮಿಕ ಸಚಿವರು.ಒಂದು ವೇಳೆ ವಿ. ಎಸ್. ಪಾಟೀಲ್ ಕಾಂಗ್ರೆಸ್‌ ಸೇರಿದರೆ ಕ್ಷೇತ್ರದಲ್ಲಿ 2023ರ ಚುನಾವಣೆಯ ಬಿಜೆಪಿಗೆ ಭಾರೀ ಸವಾಲು ಎದುರಾಗಲಿದೆ.

ವಿ. ಎಸ್.ಪಾಟೀಲ್‌ಗೆ ಅಭಿಮಾನ ಮತ್ತು ಅನುಕಂಪದ ಮತಗಳು ಸಿಗುತ್ತವೆ.ಅಲ್ಲದೇ ಕ್ಷೇತ್ರದ ಲಿಂಗಾಯತ ಮತ ಗಳು ಮುಂದಿನ ಸಲ ಬಿಜೆಪಿಗೆ ಹೋಗುವುದು ಅನುಮಾನ ಎಂಬುದು ಸದ್ಯ ಚಾಲ್ತಿಯಲ್ಲಿರುವ ಮಾತು.ವಿ.ಎಸ್. ಪಾಟೀಲ್ ಕಾಂಗ್ರೆಸ್ ಸೇರಿ ಟಿಕೆಟ್ ಘೋಷಣೆಯಾದರೆ ಯಲ್ಲಾಪುರದ ಚಿತ್ರಣವೇ ಬದಲಾಗಲಿದೆ ಎನ್ನುತ್ತಾರೆ ಜನರು.ಸಚಿವ ಶಿವರಾಮ್ ಹೆಬ್ಬಾರ್ ಮೇಲೆ ಮುನಿಸಿ ಕೊಂಡ ಅನೇಕರು ಇದ್ದಾರೆವಅವರು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ.ವಿ. ಎಸ್. ಪಾಟೀಲರು ಕಾಂಗ್ರೆಸ್ ಸೇರಿ ದರೆ ಅವರನ್ನು ಬೆಂಬಲಿಸುವ ಸಾಧ್ಯತೆ ಇದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.