ಮಂಗಳೂರು –
ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆ ಪರೀಕ್ಷೆ ಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಶವವಾಗಿ ಪತ್ತೆ ಹೌದು
ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ. ಎಸ್.ಎಸ್.ಎಲ್.ಸಿ. ಇಂಗ್ಲಿಷ್ ಪೂರ್ವ ಸಿದ್ಧತಾ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಬಳಿಕ ನಾಪತ್ತೆಯಾಗಿದ್ದರು.
ಯಶ್ವಿತ್ ಚಂದ್ರಕಾಂತ್, ನಿರುಪ್, ಅನ್ವಿತ್, ರಾಘವೇಂದ್ರ ಅವರ ಶವ ಪತ್ತೆಯಾಗಿದೆ. ಇವರು ಸುರತ್ಕಲ್ ನ ವಿದ್ಯಾದಾಯಿನಿ ಶಾಲೆಯ ವಿದ್ಯಾರ್ಥಿ ಗಳಾಗಿದ್ದು ಇವರ ಮೃತದೇಹಗಳು ಹಳೆಯಂಗಡಿ ಸಮೀಪ ನದಿಯಲ್ಲಿ ಪತ್ತೆಯಾಗಿವೆ
ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆ ಬರೆದು ಶಾಲೆಯಿಂದ ಹೊರಬಂದ ಬಳಿಕ ನಾಪತ್ತೆಯಾಗಿದ್ದರು.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪರೀಕ್ಷೆ ಮುಗಿದ ನಂತರ ಈಜಲು ತೆರಳಿದ ನಾಲ್ವರು ನದಿಯಲ್ಲಿ ಮುಳುಗಿ ಮೃತಪ ಟ್ಟಿರುವ ಶಂಕೆ ವ್ಯಕ್ತವಾಗಿದೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸುದ್ದಿ ಸಂತೆ ನ್ಯೂಸ್ ಮಂಗಳೂರು…..