ಮಾಸ್ಕ್ ಹಾಕಲು ಹೇಳಿದಕ್ಕೆ ನಗರ ಸಭೆ ನೌಕರನ ಕೊಲೆ – ನಾಲ್ವರ ಬಂಧನ…..

Suddi Sante Desk

ಭದ್ರಾವತಿ –

ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದಕ್ಕೆ ನಗರಸಭೆ ಗುತ್ತಿಗೆ ನೌಕರರೊಬ್ಬರನ್ನು ಕೊಲೆ ಮಾಡಿರುವ ಘಟನೆ ಶಿವ ಮೊಗ್ಗದ ಭದ್ರಾವತಿ ಯಲ್ಲಿ ನಡೆದಿದೆ.ನೌಕರ ಸುನೀ ಲ್ (24) ಅವರನ್ನು ಇರಿದು ಹತ್ಯೆ ಮಾಡಲಾಗಿದೆ. ಇನ್ನೂ ಕೆಲವರು ಗಾಯಗೊಂಡಿದ್ದು ನಗರದ ಶ್ರೀಕಂಠ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಸುನಿಲ್ ಹಾಗೂ ಮತ್ತೊಬ್ಬ ಸಹೋದ್ಯೋಗಿ ಶ್ರೀಕಂಠ ಮಂಗಳವಾರ ಸಂಜೆ ಜತೆಯಾಗಿ ಅನ್ವರ್ ಕಾಲೊನಿ ಕಡೆಗೆ ತೆರಳಿದ್ದ ವೇಳೆ ಅಲ್ಲಿ ನಿಂತಿದ್ದ ಯುವಕರಿಗೆ ಮಾಸ್ಕ್ ಹಾಕಲು ಹೇಳಿದ್ದಾರೆ.ಈ ಒಂದು ವಿಚಾರದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ಗುಂಪಿನಲ್ಲಿದ್ದ ಕೆಲವರು ಇವರ ಮೇಲೆ ಹಲ್ಲೆ ನಡೆಸಿ ಮಾರಾಕಾಸ್ತ್ರದಿಂದ ಇರಿದಿದ್ದಾರೆ. ಇರಿತಕ್ಕೊ ಳಗಾದ ಇವರನ್ನು ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿ ಚಿಕಿತ್ಸೆ ಗೆ ಸ್ಪಂದಿಸದೆ ಸುನಿಲ್ ಮೃತಪಟ್ಟಿದ್ದಾರೆ.ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.