ಬೆಂಗಳೂರು –
ಲಂಚಕ್ಕೇ ಬೇಡಿಕೆ ಇಟ್ಟಿದ್ದ ಮತ್ತಿಬ್ಬರು ಸರ್ಕಾರಿ ನೌಕರರಿಗೆ ಜೈಲು ಸೇರಿದ್ದಾರೆ. ಇಬ್ಬರು ಕಸ್ಟಮ್ಸ್ ಅಧಿಕಾರಿಗಳಿಗೆ ಜೈಲು ಶಿಕ್ಷೆ ಪ್ರಕಟವಾಗಿದೆ. ಸಿಂಗಪುರದಿಂದ ತರಲಾಗಿದ್ದ 15 ಲ್ಯಾಪ್‌ಟಾಪ್‌ಗಳನ್ನು ಕಸ್ಟಮ್ಸ್ ಸುಂಕ ವಿಧಿಸದೆ ಬಿಡುಗಡೆ ಮಾಡಲು ₹45 ಸಾವಿರ ಲಂಚ ಪಡೆದಿದ್ದ ಕಸ್ಟಮ್ಸ್ ಅಧಿಕಾರಿ ಸೇರಿ ಇಬ್ಬರಿಗೆ ನ್ಯಾಯಾಲಯ ನಾಲ್ಕು ವರುಷಗಳ ಜೈಲು ಶಿಕ್ಷೆ ವಿಧಿಸಿದೆ. ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ವಿ. ಶ್ರೀನಿವಾಸ ಪ್ರಸಾದ್ ಮತ್ತು ಅದೇ ಕಚೇರಿಯಲ್ಲಿ ಮುಖ್ಯ ಹವಾಲ್ದಾರ್ ಆಗಿದ್ದ ಎ ಪ್ರಭು ಶಿಕ್ಷೆಗೊಳಗಾದ ಕಸ್ಟಮ್ಸ್ ಅಧಿಕಾರಿಗಳಾಗಿದ್ದಾರೆ.
ಟಿ. ಶ್ರೀಕುಮಾರ್ ಎಂಬವರು ಸಿಂಗಪುರದಿಂದ 15 ಲ್ಯಾಪ್ಟಾರಪ್ ಗಳನ್ನು ತಗೆದುಕೊಂಡು ಬಂದಿದ್ದರು. ಕಸ್ಟಮ್ಸ್ ಅಧಿಕಾರಿಯಾಗಿದ್ದ ಶ್ರೀನಿವಾಸ ಪ್ರಸಾದ್, ಲಗೇಜ್ ತಪಾಸಣೆ ನಡೆಸಿ, ನಿಲ್ದಾಣದ ಆವರಣದಿಂದ ಲ್ಯಾಪ್ ಟಾಪ್ ತೆಗೆದುಕೊಂಡು ಹೊರ ಹೋಗಬೇಕೆಂದರೆ ₹1.62 ಲಕ್ಷ ಕಸ್ಟಮ್ಸ್ ಸುಂಕ ಕಟ್ಟಬೇಕಾಗುತ್ತದೆ.ಹಾಗೇ ಮಾಡದಿರಲು ₹1 ಲಕ್ಷ ಹಾಗೂ 2 ಲ್ಯಾಪ್ ಟಾಪ್ ಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಮಾತುಕತೆ ಬಳಿಕ ₹45 ಸಾವಿರಕ್ಕೆ ಒಪ್ಪಿದ್ದರು.
ಆದರೆ ಈ ಒಂದು ಲಂಚವನ್ನು ನೀಡಲು ಇಚ್ಛಿಸದ ಶ್ರೀಕುಮಾರ್, ಸಿಬಿಐಗೆ ದೂರು ನೀಡಿದ್ದರು. ಸಿಬಿಐ ಅಧಿಕಾರಿಗಳು 2015 ರ ಅಕ್ಟೋಬರ್ ತಿಂಗಳಲ್ಲಿ ಇಬ್ಬರನ್ನು ಬಂಧಿಸಿದ್ದರು ಈವರೆಗೆ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶರು ಲಂಚಕ್ಕೇ ಬೇಡಿಕೆ ಇಟ್ಟಿದ್ದು ಇಬ್ಬರು ಕಸ್ಟಮ್ಸ್ ಅಧಿಕಾರಿಗಳಿಗೆ ಕೊನೆಗೂ ಜೈಲಿನ ದಾರಿ ತೋರಿಸಿದ್ದಾರೆ. ಮೊನ್ನೆಯಷ್ಟೇ ಗುಲಬುರ್ಗಾದಲ್ಲಿ ವಾಹನವೊಂದನ್ನು ಬಿಡುಗಡೆ ಮಾಡಲು 25 ಸಾವಿರ ಬೇಡಿಕೆ ಇಟ್ಟಿದ್ದ ಡಿವೈಎಸ್ಪಿ ಅಧಿಕಾರಿ ಬೆನ್ನಲ್ಲೇ ಈಗ 45 ಸಾವಿರ ರೂಪಾಯಿ ಡಿಮ್ಯಾಂಡ್ ಮಾಡಿದ್ದ ಇಬ್ಬರು ಅಧಿಕಾರಿಗಳಿಗೆ ಜೈಲಿನ ದಾರಿಯನ್ನು ನ್ಯಾಯಾಧೀಶರು ತೋರಿಸಿದ್ದು ನಿಜಕ್ಕೂ ಕೂಡಾ ಬೇಸರದ ಸಂಗತಿಯಾಗಿದೆ.