ಧಾರವಾಡ –
,ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ (ರಿ) ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯಿಂದ ನಾಳೆ ಧಾರವಾಡ ದ ನವಲಗುಂದ ತಾಲ್ಲೂಕಿನ ಹೆಬಸೂರು ಗ್ರಾಮದಲ್ಲಿ ಉಚಿತ ಬೃಹತ್ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಹೌದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ (ರಿ) ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಶ್ವ ಮಧ್ವ ಮಹಾ ಪರಿಷತ್, ಶ್ರೀ ಗುರು ಮಹಿಪತಿರಾಜ ನೇತ್ರ ಸೇವಾಸಂಸ್ಥೆ ಹಾಗೂ ಡಾ. ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ಇವರ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮ ಪಂಚಾಯತ ಕಛೇರಿ ಆವರಣದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಕಿತ್ಸಾ ಶಿಬಿರವನ್ನು ದಿ. 15-11-2022 ರಂದು ಆಯೋಜಿಸಿದೆ.
ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1-00 ರವರೆಗೆ ನಡೆಯುವ ಈ ಶಿಬಿರವನ್ನು ಸಕ್ಕರೆ ಹಾಗೂ ಜವಳಿ ಖಾತೆ ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ ಉದ್ಘಾಟಿಸುವರು.ಹೆಬಸೂರು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮಲ್ಲವ್ವ ಗಿ. ಕುರ್ಡಿಕೇರಿ ಇವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಶ್ರೀನಿವಾಸ ಜೋಶಿ ಹಾಗೂ ಕ್ಷಮತಾ ಸಂಚಾಲಕ ಗೋವಿಂದ ಜೋಶಿಯವರು ಉಪಸ್ಥಿತರಿರುವರು
ಡಾ. ಎಂ.ಎಂ ಜೋಶಿ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರ ತಂಡ ಕಣ್ಣಿನ ತಪಾಸಣೆ ನಡೆಸಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಜನರನ್ನು ಆಯ್ಕೆ ಮಾಡಲಿ ದ್ದಾರೆ.ಹೀಗೆ ಆಯ್ಕೆಯಾದ ಕಣ್ಣಿನ ಪೊರೆಬಂದಿ ರುವ ರೋಗಿಗಳನ್ನು ಹುಬ್ಬಳ್ಳಿ ಗೋಕುಲ ರಸ್ತೆ ಯಲ್ಲಿರುವ ಡಾ. ಎಂ.ಎಂ ಜೋಶಿ ಆಸ್ಪತ್ರೆಗೆ ಕರೆ ತಂದು ತ್ಯಾದುನಿಕ ಪದ್ದತಿ ಐ.ಓ.ಎಲ್. ಇಂಪ್ಲಾಂ ಟೇಷನ್ ಸಲುವಾಗಿ ಉಚಿತ ಶಸ್ತ್ರ ಚಿಕಿತ್ಸೆ ಮಾಡ ಲಾಗುವುದು.ಕಾರಣ ಹೆಬಸೂರು ಸುತ್ತಮುತ್ತ ಲಿನ ಹಳ್ಳಿಗಳಾದ ಕಿರೇಸೂರು ಕರ್ಲವಾಡ, ಕಾಲವಾಡ, ಬ್ಯಾಹಟ್ಟಿ, ಶಿಶುವಿನಹಳ್ಳಿ, ದುಂದೂರು,ಮಣಕವಾಡ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಕ್ಕೆ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಕ್ಷಮತಾ ಸಂಚಾಲಕ ಗೋವಿಂದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಬಿರಾರ್ಥಿಗಳ ನೋಂದಣಿ ಕಾರ್ಯ ಬೆಳಿಗ್ಗೆ 9ರಿಂದ ಆರಂಭವಾಗುವುದು.ಶಿಬಿರಕ್ಕೆ ಆಗಮಿಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವವರು ಹಾಗೂ ತಪಾಸಣೆ ಗೊಳಪಡುವವರು ತಮ್ಮ ಆಧಾರ ಅಥವಾ ಇತರ ಗುರುತಿನ ಚೀಟಿ ತರಲು ಪ್ರಕಟಣೆ ಯಲ್ಲಿ ತಿಳಿಸಲಾಗಿದೆ
ಹೆಚ್ಚಿನ ಮಾಹಿತಿಗಾಗಿ ಮೊ- 8147270008, 9242134654, 6361188433 ಹಾಗೂ 9448559997 ಅಥವಾ ಸಚಿವರ ಕಛೇರಿ ಸಂಖ್ಯೆ 0836-2251055 ಇಲ್ಲಿ ಸಂಪರ್ಕಿಸ ಬಹುದಾಗಿದೆ ಎಂದು ಕ್ಷಮತಾ ಪ್ರಕಟಣೆ ತಿಳಿಸಿದೆ.
ಚಂದ್ರಶೇಖರ ಬೆಳವಾಡಿ