ಹುಬ್ಬಳ್ಳಿ –
ಸದಾ ಒಂದಿಲ್ಲೊಂದು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್ ಈಗ ಮತ್ತೊಂದು ಮಹಾನ್ ಕೆಲಸವನ್ನು ಹಮ್ಮಿ ಕೊಂಡಿದೆ ಹೌದು ಈ ಬಾರಿ ಉಚಿತ ಕೃತಕ ಕೈ ಕಾಲು ಜೋಡಣಾ ಶಿಬಿರ ವನ್ನು ಹಮ್ಮಿಕೊಳ್ಳ ಲಾಗಿದೆ.
ಜುಲೈ 23 ರಂದು ಹುಬ್ಬಳ್ಳಿಯ ನಗರದ ಮೂರು ಸಾವಿರ ಮಠದಲ್ಲಿ ಈ ಒಂದು ಶಿಬಿರವನ್ನು ಆಯೋಜನೆಯನ್ನು ಮಾಡಲಾಗಿದೆ ಎಂದು ಫೌಂಡೇಶನ್ ನ ಸಂಚಾಲಕರಾದ ಮಂಜುನಾಥ ಭಟ್ಟ ಹೇಳಿದರು
ನಗರದಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು ಈಗಾಗಲೇ ಈ ಒಂದು ಶಿಬಿರಕ್ಕೆ ನೋಂದಣಿ ಮಾಡಿಕೊಂಡ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುತ್ತದೆ ಈವರೆಗೆ ಉತ್ತಮವಾಗಿ ಸ್ಪಂದನೆ ಸಿಕ್ಕಿದ್ದು ಶಿಬಿರದ ಲಾಭವನ್ನು ಪಡೆದು ಕೊಳ್ಳುವಂತೆ ವಿನಂತಿ ಮಾಡಿಕೊಂಡರು
ಈ ಒಂದು ಶಿಬಿರದಲ್ಲಿ ನುರಿತ ತಜ್ಞರು ವೈದ್ಯರು ಸೇರಿದಂತೆ ಹಲವರು ಆಗಮಿಸಿ ಫಲಾನುಭವಿಗ ಳನ್ಜು ಪರೀಕ್ಷೆ ಮಾಡಿ ಚಿಕಿತ್ಸೆ ನೀಡುತ್ತಾರೆ ನಂತರ ಅವರಿಗೆ ಉಚಿತವಾಗಿ ಕೃತಕ ಕೈ ಕಾಲು ಗಳನ್ನು ಜೋಡಣೆ ಮಾಡಲಾಗುತ್ತದೆ ಎಂದರು
ಈ ಒಂದು ಸುದ್ದಿಗೋಷ್ಟಿಯಲ್ಲಿ ಡಾ ವಿ ಬಿ ನಿಟಾಲಿ,ಮಂಜುನಾಥ ಭಟ್ಟ,ಅಜೀತ್ ಕುಲಕರ್ಣಿ, ಅಮೃತಬಾಯಿ ಪಟೇಲ್,ಅಮರೇಶ ಹಿಪ್ಪರಗಿ, ಸುಶಾಂತ ರಾಜ,ಸುನೀಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..