ಶುಕ್ರವಾರ ಉರ್ದು ಶಾಲೆಗಳಿಗೆ ಬ್ಯಾಗ್ ರಹಿತ ದಿನ – ಬ್ಯಾಗ್ ರಹಿತ ದಿನವನ್ನಾಗಿ DSERT ಯಿಂದ ಸೂಚನೆ…..

Suddi Sante Desk
ಶುಕ್ರವಾರ ಉರ್ದು ಶಾಲೆಗಳಿಗೆ ಬ್ಯಾಗ್ ರಹಿತ ದಿನ – ಬ್ಯಾಗ್ ರಹಿತ ದಿನವನ್ನಾಗಿ DSERT ಯಿಂದ ಸೂಚನೆ…..

ಬೆಂಗಳೂರು

ಶುಕ್ರವಾರ ಉರ್ದು ಶಾಲೆಗಳಿಗೆ ಬ್ಯಾಗ್ ರಹಿತ ದಿನ – ಬ್ಯಾಗ್ ರಹಿತ ದಿನವನ್ನಾಗಿ DSERT ಯಿಂದ ಸೂಚನೆ ಹೌದು

ರಾಜ್ಯದ ಉರ್ದು ಶಾಲೆಗಳಲ್ಲಿ ಶುಕ್ರವಾರ ಬ್ಯಾಗ್ ರಹಿತ ದಿನವನ್ನಾಗಿ ಮಾಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.ಹೌದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸಂಸ್ಥೆ ಈ ಒಂದು ಸೂಚನೆ ಯನ್ನು ನೀಡಿದೆ.

ಶಾಲಾ ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರ ಮಕ್ಕಳ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ.ರಾಜ್ಯದ ಉರ್ದು ಶಾಲೆಗಳು ಶುಕ್ರವಾರ ಅರ್ಧ ದಿನ ಮತ್ತು ಶನಿವಾರ ಪೂರ್ಣ ದಿನ ಶಾಲೆ ನಡೆಯುತ್ತಿರುವ ಕಾರಣ

ಉರ್ದು ಶಾಲೆಗಳಲ್ಲಿ ‘ಸಂಭ್ರಮ ಶನಿವಾರ’ ಆಚರಣೆ ಯನ್ನು ಶುಕ್ರವಾರ ಅಥವಾ ಶನಿವಾರ ಆಚರಿಸುವ ಕುರಿತು ಹಲವು ಶಾಲೆಗಳು ಮಾರ್ಗ ದರ್ಶನ ನೀಡುವಂತೆ ಕೋರಿದ್ದವು.ಈ ಹಿನ್ನೆಲೆ ಯಲ್ಲಿ ರಾಜ್ಯದ ಉರ್ದು ಶಾಲೆಗಳಲ್ಲಿ ಶನಿವಾರ ಪೂರ್ಣ ದಿನವಾಗಿದ್ದು ಶುಕ್ರವಾರ ಅರ್ಧ ದಿನ ಶಾಲೆ ನಡೆಯುವುದರಿಂದ

‘ಶುಕ್ರವಾರ ಬ್ಯಾಗ್ ರಹಿತ ದಿನ’ವನ್ನಾಗಿ ಆಚ ರಿಸಲು ಕ್ರಮ ವಹಿಸುವಂತೆ ಡಿಎಸ್‌ಇಆರ್‌ಟಿ ನಿರ್ದೇಶಕಿ ವಿ. ಸುಮಂಗಲಾ ನಿರ್ದೇಶನ ನೀಡಿದ್ದಾರೆ.ಬ್ಯಾಗ್ ರಹಿತ ದಿನದಂದು ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸು ವುದರ ಮೂಲಕ ನಾಗರಿಕ ಪ್ರಜ್ಞೆನ್ನು ಬೆಳೆಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ

ವಿವಿಧ 10 ವಿಷಯಗಳಲ್ಲಿ ಸ್ವಯಂ ವಿವರ ಣಾತ್ಮಕ ಚಿತ್ರ ಸಹಿತ ಚಟುವಟಿಕೆ ಪುಸ್ತಕಗಳನ್ನು ಹಾಗೂ ಅವುಗಳನ್ನು ತರಗತಿಗಳಲ್ಲಿ ನಿರ್ವಹಿ ಸಲು ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ.ವಿದ್ಯಾರ್ಥಿಗಳಲ್ಲಿ ಅನ್ವಯಿಕ ಕಲಿಕಾ ಮನೋಭಾವವನ್ನು ಪ್ರೋತ್ಸಾಹಿಸುವಂತೆ ಕಲಿಕಾ ಹಾಳೆಗಳಲ್ಲಿ ಚಟುವಟಿಕೆಗಳನ್ನು ನೀಡ ಲಾಗಿದೆ.

ಈ ಕಲಿಕಾ ಹಾಳೆಗಳಲ್ಲಿನ ಚಟುವಟಿಕೆಗಳಿಗೆ ಪೂರಕವಾಗಿ ಬ್ಯಾಗ್ ರಹಿತ ದಿನ ಆಚರಿಸಲಾ ಗುತ್ತದೆ.ಡಿಎಸ್‌ಇಆರ್‌ಟಿ 2017ರಲ್ಲಿ ಬ್ಯಾಗ್ ರಹಿತ ದಿನ ಆಚರಿಸುವ ಸಂಬಂಧ ಕಾರ್ಯಕ್ರಮ ರೂಪಿಸಿತ್ತು. ಇದನ್ನು 2019ರಲ್ಲಿ ಯೋಜನೆ ಅನುಷ್ಠಾನಕ್ಕೆ ಆದೇಶ ಹೊರಡಿಸಿತ್ತು.

ಕರೊನಾ ಸೇರಿ ಇನ್ನಿತರ ಕಾರಣಗಳಿಗೆ ಯೋಜನೆ ಅನುಷ್ಠಾನ ಆಗಿರಲಿಲ್ಲ.2013-24ನೇ ಸಾಲಿ ನಿಂದ ಅಧಿಕೃತವಾಗಿ ಯೋಜನೆಯನ್ನು ಜಾರಿಗೊಳಿಸಿತ್ತು.ಅದನ್ನು ಈಗ ಉರ್ದು ಶಾಲೆಗಳಿಗೂ ವಿಸ್ತರಿಸಿದೆ.

ಘನತ್ಯಾಜ್ಯ ನಿರ್ವಹಣೆ, ಸುರಕ್ಷಿತ ತಂತ್ರಜ್ಞಾನ ಬಳಕೆ, ಸುರಕ್ಷತೆ ಮತ್ತು ಭದ್ರತೆ, ಸಾರ್ವಜನಿಕ ಸೌಕರ್ಯ, ರಸ್ತೆ ಸುರಕ್ಷತೆ, ಸ್ವಾಸ್ಥ್ಯ ಮತ್ತು ಶುಚಿತ್ವ, ಮಾದಕವಸ್ತು, ಲಿಂಗ ಸಮಾನತೆ, ಆರೋಗ್ಯಕರ ಜೀವನಶೈಲಿ ಸೇರಿ ಇನ್ನಿತರ ವಿಷಯಗಳ ಕುರಿತು ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.