ಮಕ್ಕಳಿಗೆ ನೆರವಾದ ಈರಣ್ಣಾ ಬಾರಕೇರ ಗೆಳೆಯರ ಬಳಗ
ಧಾರವಾಡ-
ಪೊಷಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಧಾರವಾಡದ ಈರಣ್ಣ ಬಾರಕೇರ ಮತ್ತು ತಂಡದವರು ನೆರವಾಗಿದ್ದಾರೆ. ಧಾರವಾಡ ತಾಲ್ಲೂಕಿನ ಹಂಗರಕಿ ಗ್ರಾಮದಲ್ಲಿ ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿರುವ ಹಲವಾರು ಮಕ್ಕಳ ನೆರವಿಗೆ ಇವರು ಸಹಾಯವನ್ನು ಮಾಡಿದರು.ಪ್ರಮುಖವಾಗಿ ಪೊಷಕರಿಲ್ಲದೇ ಅನಾಥವಾಗಿರುವ ಮಕ್ಕಳನ್ನು ಗುರುತಿಸಿರುವ ಯುವಕರು ಅವರ ಶಿಕ್ಷಣಕ್ಕೆ ಬೇಕಾಗಿರುವ ಕಲಿಕಾ ಸಾಮಗ್ರಿಗಳನ್ನು ನೀಡಿದರು.

ಹಂಗರಕಿ ಗ್ರಾಮ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ತೆರಳಿದ ಈರಣ್ಣಾ ಬಾರಕೇರ ಮತ್ತು ಗೆಳೆಯರು ಮಕ್ಕಳಿಗೆ ಮುಖ್ಯವಾಗಿ ಬೇಕಾಗಿರುವ ಕಲಿಕಾ ಸಾಮಗ್ರಿಗಳನ್ನು ನೀಡಿದರು. ಸ್ಕೂಲ್ ಬ್ಯಾಗ್ ಆರು ನೋಟ್ ಬುಕ್ ಪೆನ್ಸಿಲ್ ಜ್ಯಾಮೆಟ್ರಿ ಬಾಕ್ಸ್ ಊಟದ ಡಬ್ಬಿ ನೀರಿನ ಬಾಟಲ್ ಎರಡು ಬಿಸ್ಕಿಟ್ ಬಂಡಲ್ ಗಳನ್ನು ಒಳಗೊಂಡ ಕೀಟ್ ನ್ನು ಮಕ್ಕಳಿಗೆ ನೀಡಿದರು.ಈಗಾಗಲೇ 12 ಗ್ರಾಮದ 20 ಕ್ಕೂ ಹೆಚ್ಚು ಮಕ್ಕಳಿಗೆ ನೆರವು ನೀಡಿರುವ ಈರಣ್ಣಾ ಬಾರಕೇರ ಮತ್ತು ಗೆಳೆಯರು ಇನ್ನೂ ಹೆಚ್ಚೆಚ್ಚು ಗ್ರಾಮಗಳಲ್ಲಿನ ಮಕ್ಕಳಿಗೆ ನೆರವು ನೀಡಲು ಯೋಚನೆ ಮಾಡಿಕೊಂಡಿದ್ದಾರೆ.

ಯಾವ ದಾನಿಗಳಿಂದ ನೆರವು ಪಡೆದುಕೊಳ್ಳದೇ ಗೆಳೆಯರೆಲ್ಲರೂ ಸೇರಿಕೊಂಡು ಈ ಮಹತ್ವದ ಕಾರ್ಯಕ್ಕೇ ಈರಣ್ಣಾ ಬಾರಕೇರ ಮತ್ತು ಗೆಳೆಯರು ಮುಂದಾಗಿ ಮತ್ತೊಂದು ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಈಗಾಗಲೇ ಕರೋನಾದ ಲಾಕ್ ಡೌನ್ ಸಮಯದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳೊಂದಿಗೆ ಸಾರ್ವಜನಿಕರಿಗೆ ನೆರವಾಗಿರುವ ಇವರು ಈಗ ಮಕ್ಕಳಿಗೂ ಕೂಡಾ ಸಹಾಯದ ಹಸ್ತ ಚಾಚಿದ್ದಾರೆ. ಮಕ್ಕಳಿಗೆ ಕೀಟ್ ವಿತರಣೆಯೊಂದಿಗೆ ಕರೋನಾ ಮತ್ತು ಆರೋಗ್ಯದ ಕುರಿತು ಜಾಗೃತಿಯನ್ನು ಹೇಳುತ್ತಾ ಮಕ್ಕಳಿಗೆ ಸಂಬಂಧಿಸಿದ ಸರಕಾರದ ಸೌಲಭ್ಯಗಳ ಕುರಿತು ಮಾಹಿತಿ ಪರಿಚಯಿಸಿದ್ರು.ಸಹಾಯದ ಹಸ್ತದ ಕಾರ್ಯಕ್ರಮದಲ್ಲಿ ಈರಣ್ಣಾ ಬಾರಕೇರ ಮಲ್ಲಯ್ಯ ಓಡೆಯರ ಈರಪ್ಪ ಜೀರಗಿವಾಡ ಶಶಿಕಲಾ ಶಿವಣ್ಣಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.