ದೆಹಲಿ –
ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿನ ಸಚಿವ ಸಂಪುಟದ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ ಮೂರು ಪಟ್ಟಿ ಗಳೊಂದಿಗೆ ದೆಹಲಿಗೆ ಹೋಗಿದ್ದ CM ಗೆ ಕೊನೆಗೂ ಹೈ ಕಮಾಂಡ್ ಬಹಳಷ್ಟು ಬದಲಾವ ಣೆಯನ್ನು ಮಾಡಿ ತಮ್ಮದೇಯಾದ ಪಟ್ಟಿ ಯನ್ನು ಸಿದ್ದಮಾಡಿ ಕೊಟ್ಟಿದ್ದಾರೆ
ಮುಖ್ಯಮಂತ್ರಿ ನೀಡಿದ್ದ ಪಟ್ಟಿ ಯನ್ನು ಪರಿಶೀಲನೆ ನಡೆಸಿ ಅಂತಿಮವಾಗಿ ಕೆಲವೊಂದಿಷ್ಟು ಹಿರಿಯರಿಗೆ ಕೊಕ್ ನೀಡಿ ಯುವ ಶಾಸಕರಿಗೆ ಅವಕಾಶವನ್ನು ನೀಡಲಾಗಿದೆ. ಹೀಗಾಗಿ ಅಂತಿಮವಾಗಿ 20 ಜನರನ್ನು ಮೊದಲ ಹಂತದಲ್ಲಿ ನಾಳೆಯೇ ಪ್ರಮಾಣ ವಚನ ಸ್ವೀಕರಿಸಲು ಸಿದ್ದತೆ ಮಾಡಿಕೊಳ್ಳಲು ಹೇಳಲಾಗಿದ್ದು ಇತ್ತ ಮೂರು ಪಟ್ಟಿ ಗಳೊಂದಿಗೆ ದೆಹಲಿಗೆ ಹೋಗಿದ್ದ ಮುಖ್ಯಮಂತ್ರಿ ಅವರು ಒಂದೇ ಒಂದು ಪಟ್ಟಿ ಯೊಂದಿಗೆ ಬರುತ್ತಿದ್ದಾರೆ
ಇನ್ನೂ ಈ ಒಂದು ಪಟ್ಟಿ ಯಲ್ಲಿ ಯಾರ ಯಾರ ಹೆಸರು ಇದೆ ಸಧ್ಯ ಕೇಳಿ ಬರುತ್ತಿರುವ ಎಲ್ಲರೂ ಸಚಿವರು ಆಗ್ತಾರೆ ಬಾಂಬೆ ಪ್ರೇಂಡ್ಸ್ ಕಥೆ ಏನು ಹಿರಿಯರ ಮುಂದಿನ ನಿರ್ಧಾರ ಏನಾಗಲಿದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮಂತ್ರಿಯಾಗತಾರೆ ಎಂಬುದನ್ನು ನಾಳೆ ನಡೆಯಲಿರುವ ಪ್ರಮಾಣ ವಚನದವರೆಗೆ ಕಾದು ನೋಡಬೇಕು
ಮೂವರು DCM ಗಳಿಗೆ ಹೈ ಕಮಾಂಡ್ ಅಸ್ತು
ಗೋವಿಂದ ಕಾರಜೋಳ,ಅಶ್ವಥ್ ನಾರಾಯಣ,ಅರವಿಂದ ಲಿಂಬಾವಳಿ
ಯಾರು ಯಾರು ಸಚಿವರು
ದೆಹಲಿ ಬಿಜೆಪಿ ವರಿಷ್ಠರು ಸಿದ್ದಪಡಿಸಿರುವ 20 ಮಂದಿಯಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಗೆ ನಿಷ್ಠೆಯಾಗಿರುವ 9 ಮಂದಿ, ಮಾಜಿ ಸಿಎಂ ಯಡಿಯೂರಪ್ಪ ಬಣದ 5 ಹಾಗೂ ದೆಹಲಿ ಮತ್ತು ಬೊಮ್ಮಾಯಿ ಬಣದಿಂದ 6 ಮಂದಿ ಸೇರಿದಂತೆ ಒಟ್ಟು ಮೊದಲ ಹಂತದಲ್ಲಿ 20 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸತೀಶ್ ರೆಡ್ದಿ, ಸುನೀಲ್ ಕುಮಾರ್, ಅಭಯ್ ಪಾಟೀಲ್, ಪೂರ್ಣಿಮಾ ಶ್ರೀನಿವಾಸ್, ಅರವಿಂದ್ ಬೆಲ್ಲದ್, ಮುನಿರತ್ನ, ಬಿ.ವೈ.ವಿಜಯೇಂದ್ರ, ದತ್ತಾತ್ರೆಯ ಪಾಟೀಲ್ ಸೇರಿದಂತೆ 21 ಶಾಸಕರು ಮೊದಲ ಹಂತದಲ್ಲಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಯಾರು ಯಾರಿಗೆ ಕೊಕ್
ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ವಿ.ಸೋಮಣ್ಣ, ಪ್ರಭು ಚೌವ್ಹಾಣ್, ಸಿ.ಸಿ.ಪಾಟೀಲ್, ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಸೇರಿದಂತೆ ಹಲವು ಹಿರಿಯ ನಾಯಕರಿಗೆ ಕೊಕ್ ಕೊಡುವ ಸಾಧ್ಯತೆ ಇದೆ ಇದನ್ನು ಪಕ್ಷದ ಹೈ ಕಮಾಂಡ್ ನವರು ಹೇಳಿದ್ದಾರಂತೆ.
ಪ್ರಮಾಣ ವಚನ ಸ್ವೀಕಾರ ಯಾವಾಗ
ನೂತನ ಸಚಿವರ ಪಟ್ಟಿಯೊಂದಿಗೆ ದೆಹಲಿ ಯಿಂದ ಬೆಂಗಳೂರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬರುತ್ತಿದ್ದಾರೆ.ನೇತೃತ್ವದ ನೂತನ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ನಾಳೆ ಸಂಜೆ 5 ಗಂಟೆಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎರಡು ಹಂತದಲ್ಲಿ ಈ ಒಂದು ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.