ಬೆಂಗಳೂರು –
ಹೌದು ಕೆಲವೊಂದಿಷ್ಟು ಮೂಲಭೂತ ಸೌಲಭ್ಯಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದಿನಿಂದ ಬೆಂಗಳೂರಿನಲ್ಲಿ ರಾಜ್ಯದ ಬಿಸಿಯೂಟ ನೌಕರರು ಹೋರಾಟವನ್ನು ಮಾಡಲಿದ್ದಾರೆ.ಪ್ರಮುಖವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಬಿಸಿಯೂಟ ನೌಕರರಿಗೆ ಗ್ರಾಚ್ಯುಟಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಇಂದಿನಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾ ವಧಿ ಹೋರಾಟ ಮಾಡಲಾಗುವುದು ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ತಿಳಿಸಿದೆ.
ರಾಜ್ಯದಲ್ಲಿ 6,500 ನೌಕರರಿಗೆ 60 ವರ್ಷ ವಯಸ್ಸಾಗಿದೆ ಎಂದು ನಿವೃತ್ತಿ ಸೌಲಭ್ಯ ಒದಗಿಸದೇ ವಜಾ ಮಾಡಿರು ವುದು ಖಂಡನೀಯ.ಈ ಕೆಲಸವನ್ನೇ ಜೀವನಾಧಾರ ಎಂದು ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳ ಮೇಲೆ ಬರೆ ಎಳೆದಂತಾಗಿದ್ದು ಹೀಗಾಗಿ ಈ ಎಲ್ಲಾ ಬೇಡಿಕೆ ಈಡೇರಿಸುವವರಗೂ ಪ್ರತಿಭಟನೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು ಇವರ ಹೋರಾಟದಿಂ ದಾಗಿ ಬಿಸಿಯೂಟ ತಯಾರಿಕೆಯಲ್ಲಿ ಅಸ್ಥವ್ಯಸ್ಥತೆ ಆಗಲಿದ್ದು ಸರ್ಕಾರ ಇಲಾಖೆ ಯಾವ ರೀತಿ ಮುಂದಿನ ಕ್ರಮಗಳನ್ನು ತಗೆದುಕೊಳ್ಳುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.