ಕಲಿಕಾ ಭಾಗ್ಯ ಯೋಜನೆ ಗೆ ಮತ್ತಷ್ಟು ಸಹಾಯಧನ ಹೆಚ್ಚಳ ಸಹಾಯಧನ ಹೆಚ್ಚಳದಿಂದ ಮಧ್ಯಮ ವರ್ಗದ ವಿದ್ಯಾರ್ಥಿ ಗಳಿಗೆ ಅನುಕೂಲ…..

Suddi Sante Desk

ಬೆಂಗಳೂರು –

ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಇರುವ ವಿಶೇಷ ಶೈಕ್ಷಣಿಕ ಸಹಾಯ ಧನದ ಕಲಿಕಾ ಭಾಗ್ಯ ಯೋಜನೆ ಯ ಹಣವನ್ನು ಹೆಚ್ಚಳ ಮಾಡಲಾಗಿದೆ ಹೌದು ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು,ಪದವಿ ವಿದ್ಯಾರ್ಥಿಗಳು,ಮತ್ತು ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳಿಗೂ ಈ ಒಂದು ಯೋಜನೆ ಯಡಿ ಯಲ್ಲಿ ಸಹಾಯಧನ ನೀಡಲಾಗುತ್ತಿದೆ

ಈ ಹಿಂದೆ ಇದ್ದ ಯೋಜನೆಯ ಹಣದ ಅನುದಾನವನ್ನು ‌ನೋಡೊದಾದರೆ

ಈ ಹಿಂದೆ ಇದ್ದ ಸಹಾಯಧನ

ಸಧ್ಯ ಈ ಹಿಂದೆ ಇದ್ದ ಸಹಾಯ ಧನ ವನ್ನು ಹೆಚ್ಚಳ ಮಾಡಲಾಗಿದ್ದು ಈ ಕೆಳಗಿನಂತೆ ಇದೆ

ನರ್ಸರಿ ಮತ್ತು ಎಲ್.ಕೆ.ಜಿ. ಮಕ್ಕಳಿಗೆ ವಾರ್ಷಿಕ 5000 ರೂ.

1 ರಿಂದ 4ನೇ ತರಗತಿಯವರೆಗೆ 5000 ರೂ.

5 ರಿಂದ 8 ನೇ ತರಗತಿ ಮಕ್ಕಳಿಗೆ 8000 ರೂ.

9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ 12,000 ರೂ.

ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 15,000 ರೂ.

ಐಟಿಐ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ 20,000 ರೂ.

ಯಾವುದೇ ಪದವಿ ವಿದ್ಯಾರ್ಥಿಗಳಿಗೆ 35,000 ರೂ.

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 50,000 ರೂ.

ಇಂಜಿನಿಯರಿಂಗ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 60,000 ರೂ.

ವೈದ್ಯಕೀಯ, ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ 60,000 ರೂ.

ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ 75,000 ರೂ. ನೀಡಲಾಗುವುದು.

ಇದರಿಂದಾಗಿ ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ‘ಕಲಿಕೆ ಭಾಗ್ಯ’ ಯೋಜನೆ ಯನ್ನು ಜಾರಿಗೆ ತಂದಿದ್ದು,ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಶೈಕ್ಷಣಿಕ ಸಹಾಯಧನವನ್ನು ಒದಗಿಸಲಾಗುತ್ತಿದ್ದು ಮತ್ತಷ್ಟು ಹೆಚ್ಚು ಅನುಕೂಲವಾಗಲಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.