ಬೆಂಗಳೂರು –

ಬೆಳ್ಳಂ ಬೆಳಿಗ್ಗೆ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮತ್ತೊಂದು ಸಿಹಿ ಸುದ್ದಿಯೊಂದನ್ನು ನೀಡಿದೆ. ರಾಜ್ಯ ದಲ್ಲಿ ಲಾಕ್ ಡೌನ್ ಆಗಿದ್ದ ನಂತರ ಸಧ್ಯ ಕರೋನಾ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹಂತ ಹಂತವಾಗಿ ಕೆಲವೊಂದಿಷ್ಟು ವಲಯಗಳನ್ನು ಸಡಲಿಕೆ ಮಾಡಲಾಗುತ್ತಿದ್ದು ಹೀಗಾಗಿ ಸಧ್ಯ ಜೂನ್ 21 ರಿಂದ ರಾಜ್ಯದಲ್ಲಿ ಹೊಟೇಲ್ ಗಳಲ್ಲಿ ಕುಳಿತು ಕೊಂಡು ಊಟ ಮಾಡಲಿಕ್ಕೆ ಹಾಗೇ ಕೆಲವೊಂದಿಷ್ಟು ಮಾಲ್ ಗಳ ಆರಂಭಕ್ಕೆ ರಾಜ್ಯ ಸರ್ಕಾರ ಅವಕಾಶ ವನ್ನು ನೀಡಿದೆ.ಪ್ರತಿಶತ ಅರ್ಧ ಪ್ರಮಾಣದಲ್ಲಿ ಜನ ರಿಗೆ ಅವಕಾಶವನ್ನು ನೀಡಿ ಆರಂಭ ಮಾಡಲು ಸರ್ಕಾರ ಸೂಚನೆ ನೀಡಿದ್ದು ಹೀಗಾಗಿ ಲಾಕ್ ಆಗಿದ್ದ ರಾಜ್ಯ ಹಂತ ಹಂತವಾಗಿ ಸಡಿಲಿಕೆಯಾಗುತ್ತಿದೆ. ಇದರೊಂದಿಗೆ ಪ್ರಮುಖವಾಗಿ ಸಾರ್ವಜನಿಕರ ಬದುಕಿಗೆ ಆಸರೆಯಾಗಿರುವ ಬಸ್ ಸಂಚಾರವನ್ನು ಕೂಡಾ ಆರಂಭ ಮಾಡುವ ನಿರೀಕ್ಷೆ ಯಿದೆ ಇದರೊಂದಿಗೆ ಬಂಗಾರದ ಮಳಿಗೆ ಮಾಲ್ ಗಳ ಆರಂಭಕ್ಕೂ ಅವಕಾಶವನ್ನು ನೀಡಲಾಗಿದೆ