ಹೊಸದಿಲ್ಲಿ –
ಇನ್ನೂ ಮುಂದೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸದ ರಿಗೆ ಇರುವ ಕೋಟಾ ಸಹಿತ ಹಲವು ವಿಶೇಷ ಪ್ರವೇಶ ಅವಕಾಶಗಳನ್ನು ರದ್ದು ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.ಜೊತೆಗೆ ಹೊಸ ನಿಯಮಗಳನ್ನೂ ಬಿಡುಗಡೆ ಮಾಡಿದೆ.ಇದರಿಂದಾಗಿ ಪ್ರತಿ ಕೆ.ವಿ.ಗೆ ತಲಾ ಹತ್ತರಂತೆ ಸುಮಾರು 40 ಸಾವಿರ ಹೆಚ್ಚುವರಿ ಸೀಟುಗಳು ಸಿಗಲಿವೆ. ಕೊರೊನಾದಿಂದಾಗಿ ಅನಾಥ ರಾದ 10 ಮಕ್ಕಳಿಗೆ ವಿಶೇಷ ಆದ್ಯತೆಯಲ್ಲಿ ಪ್ರವೇಶ ನೀಡಲು ನಿರ್ಧರಿಸಲಾಗಿದೆ ಅವರಿಗೆ 1-12 ನೇ ತರಗತಿ ವರೆಗೆ ಶುಲ್ಕ ವಿನಾಯಿತಿ ನೀಡಲು ತೀರ್ಮಾನ ವನ್ನು ತೆಗೆದುಕೊಳ್ಳಲಾಗಿದೆ
ಪರಮವೀರ ಚಕ್ರ ಸಹಿತ ವಿವಿಧ ಸೇನಾ ಮೆಡಲ್‌ಗಳು, ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದವರ ಕೋಟಾ, ರಿಸರ್ಚ್ ಆಯಂಡ್ ಅನಾಲಿಸಿಸ್ ವಿಂಗ್‌ನ ಉದ್ಯೋಗಿ ಗಳ 15 ಮಕ್ಕಳಿಗೆ,ವಿಶೇಷ ಸಂದರ್ಭಗಳಲ್ಲಿ ಅಸುನೀಗಿದ ಕೇಂದ್ರ ಸರಕಾರಿ ಉದ್ಯೋಗಿಗಳ ಮಕ್ಕಳಿಗೆ,ಕಲಾ ವಿಭಾಗ ದಲ್ಲಿ ವಿಶೇಷ ಸಾಧಕರ ಮಕ್ಕಳ ಕೋಟಾ ಇರಿಸಿಕೊಳ್ಳಲಾ ಗಿದೆ.ಸೇನೆ,ನೌಕಾಪಡೆ,ಐಎಎಫ್ ಉದ್ಯೋಗಿಗಳಿಗೆ,ಕೆ.ವಿ. ಸಂಘಟನ್‌ನಲ್ಲಿ ಕೆಲಸ ಮಾಡುತ್ತಿರುವವರ ಮಕ್ಕಳಿಗೆ, ರಾಷ್ಟ್ರಪತಿಗಳ ಪೊಲೀಸ್ ಮೆಡಲ್ ಪಡೆದವರ ಮಕ್ಕಳು, ಕೇಂದ್ರೀಯ ಪೊಲೀಸ್ ಪಡೆಗಳಲ್ಲಿರುವ ಬಿ ಮತ್ತು ಸಿ ವಿಭಾಗದ ಉದ್ಯೋಗಿಗಳ ಮಕ್ಕಳಿಗೆ,ಕಾಶ್ಮೀರಿ ಪಂಡಿತರ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ಸಿಗ ಲಿದೆ.ಸಂಸದರ ಕೋಟಾ ಅಲ್ಲದೆ,ಶಿಕ್ಷಣ ಸಚಿವಾಲಯದ ಉದ್ಯೋಗಿಗಳ ಮಕ್ಕಳಿಗೆ,ಕೇಂದ್ರೀಯ ವಿದ್ಯಾಲಯದ ನಿವೃತ್ತ ಉದ್ಯೋಗಿಗಳ ಸಂಘ,ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಿಗೆ ಮೀಸಲಾಗಿ ಇರುವ ವಿವೇಚನ ಕೋಟಾಗಳನ್ನು ರದ್ದು ಮಾಡಲಾಗಿದೆ.ಕಳೆದ ವರ್ಷ ಕೇಂದ್ರ ಸಚಿವರು ಕೆ.ವಿ ಗಳಿಗೆ ಮಾಡುವ ಶಿಫಾರಸು ರದ್ದುಪಡಿಸಲಾಗಿತ್ತು