ಬೆಂಗಳೂರು –
ಹತ್ತ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಬೆಂಗಳೂರಿ ನಲ್ಲಿ ನಡೆದಿದೆ. ಹೌದು ನಗರದ ಜಾಲಹಳ್ಳಿ ಯಲ್ಲಿ ಈ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ ಜಾಲಹಳ್ಳಿಯ ನಿವಾಸಿಗಳಾದ ಲಕ್ಷ್ಮೀ (9) ಹಾಗೂ ಗೌತಮ್ (7) ಕೊಲೆಯಾದ ದುರ್ದೈವಿಗಳಾಗಿದ್ದಾರೆ
ಮಕ್ಕಳನ್ನು ಕೊಲೆ ಮಾಡಿದ ತಾಯಿ ಗಂಗಾದೇವಿ, ತಾನೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ದ್ದಾಳೆ ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಪರಿಶೀ ಲನೆ ನಡೆಸಿ ಆರೋಪಿ ಗಂಗಾದೇವಿಯನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಗಂಗಾದೇವಿ ಕುಟುಂಬ ಜಾಲಹಳ್ಳಿಯಲ್ಲಿ ನೆಲೆಸಿತ್ತು.ಆರೋಪಿ ಗಂಗಾ ದೇವಿ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ ಆಕೆ ಪತಿ ಬಿಬಿಎಂಪಿಯ ಗುತ್ತಿಗೆ ಆಧಾರದ ಪೌರ ಕಾರ್ಮಿ ಕನಾಗಿ ಕೆಲಸ ಮಾಡುತ್ತಿದ್ದ.
ಮಗಳ ಮೇಲೆ ಲೈಂಗಿಕ ಕಿರುಕುಳ ನೀಡಿರುವು ದಾಗಿ ಪತಿಯ ವಿರುದ್ಧ ಗಂಗಾದೇವಿ ಮತ್ತು ತನ್ನ ಪುತ್ರಿ ಜೊತೆಯಲ್ಲಿ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದರು.ಪೋಕ್ಸೊ ಪ್ರಕರಣ ದಾಖಲಿ ಸಿಕೊಂಡಿದ್ದ ಪೊಲೀಸರು ಗಂಗಾದೇವಿ ಮತ್ತು ಬಾಲಕಿಗೆ ಕೌನ್ಸಲಿಂಗ್ ಮಾಡಿ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಿದ್ದರು.
ಅಲ್ಲದೆ ಬಾಲಕಿ ತಂದೆಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಕ್ಕಳೊಂದಿಗೆ ನೆಲೆಸಿದ್ದ ಗಂಗಾದೇವಿ ಯುಗಾದಿ ಹಬ್ಬವನ್ನು ಆಚರಿಸಿದ್ದರು ಹಬ್ಬದ ಊಟವನ್ನು ಸವಿದು ಮಕ್ಕಳೊಂದಿಗೆ ಗಂಗಾದೇವಿ ಮಲಗಿದ್ದ ಳು ತಡರಾತ್ರಿ ಮಲಗಿದ್ದ ಮಕ್ಕಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.
ಬಳಿಕ ತಾನು ಆತ್ಮಹತ್ಯೆಗೆ ನಿರ್ಧರಿಸಿದ್ದಳು. ಕೊನೆಗೆ ತಡರಾತ್ರಿ 1 ಗಂಟೆಯಲ್ಲಿ ಗಂಗಾದೇವಿ ನಮ್ಮ 112ಗೆ ಕರೆ ಮಾಡಿ ಮನೆಯಲ್ಲಿ ಗಲಾಟೆ ನಡೆಯುತ್ತಿದ್ದು ಪೊಲೀಸರ ನೆರವು ಬೇಕೆಂದು ಕೋರಿದ್ದಳು ದೂರು ಸ್ವೀಕರಿಸಿದ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋಗಿ ನೋಡಿದಾಗ ಪೊಲೀಸರ ಎದುರು ಗಂಗಾದೇವಿ ತಾನೇ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಜಾಲಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರ ಣೋತ್ತರ ಪರೀಕ್ಷೆಗೆ ಒಳಪಡಿಸಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಗಂಗಾದೇ ವಿಯನ್ನು ಬಂಧಿಸಿದ್ದಾರೆ ಮಕ್ಕಳ ಕೊಲೆ ಪ್ರಕರಣ ವನ್ನು ಎಲ್ಲ ಆಯಾಮದಲ್ಲಿ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..