ಕೊಪ್ಪಳ –
ಇದೊಂದು ನಕಲಿ ದಾಖಲೆಗಳನ್ನು ನೀಡಿ ಶಿಕ್ಷಕನಾಗಿ ಸೇರಿಕೊಂಡು 19 ವರ್ಷಗಳ ಸಿಕ್ಕಿಬಿದ್ದಿರುವ ಶಿಕ್ಷಕ ನೊಬ್ಬನ ಕಥೆ ಇದು. ಹೌದು ಇಂಥದೊಂದು ಪ್ರಕರಣ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.ತಾಲ್ಲೂಕಿನ ಮಿಟ್ಟಲಕೋಡ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ, ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಆರ್. ಗಂಗಾಧರ್ ಎಂಬುವರೇ ಸಿಕ್ಕಿಬಿದ್ದ ನಕಲಿ ಶಿಕ್ಷಕ ನಾಗಿದ್ದಾರೆ. ಆಗಸ್ಟ್ 13, 2002ರಂದು ಸಹ ಶಿಕ್ಷಕರಾಗಿ ಆಯ್ಕೆಯಾಗಿದ್ದ ಇವರು ಈಗ ನಕಲಿ ದಾಖಲೆ ನೀಡಿದ್ದು ಬೆಳಕಿಗೆ ಬಂದಿದೆ.ದ್ವಿತೀಯ ಪಿಯುಸಿ ಅಂಕಪಟ್ಟಿ ನೀಡಿದ್ದು ಕಂಡು ಬಂದಿದೆ.
ಹೌದು ಈ ಕುರಿತಂತೆ ತನಿಖೆ ನಡೆಸಿ BEO ಚನ್ನಬಸಪ್ಪ ಮಗ್ಗದ್, ಸಹ ಶಿಕ್ಷಕ ಆರ್ ಗಂಗಾಧರ್ ಅವರು ನೇಮಕಾತಿ ಸಂದರ್ಭದಲ್ಲಿ ಸಲ್ಲಸಿರುವಂತ ದ್ವಿತೀಯ ಪಿಯು ಅಂಕಪಟ್ಟಿ ನಕಲಿ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಹೀಗಾಗಿ ಅವರನ್ನು 19 ವರ್ಷಗಳು ಸೇವೆ ಸಲ್ಲಿಸಿದ ಬಳಿಕ ಈಗ ನೇಮ ಕಾತಿ ನಿಯಮ 1977 (20) ಉಲ್ಲಂಘನೆ ರಾಜ್ಯ ನಾಗರಿಕ ಸೇವಾ( ವರ್ಗೀಕರಣ, ನಿಯಂತ್ರಣ, ಅಪೀಲು) ನಿಯಮ 1957, 8(8)ರ ಅಡಿಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶಿ ಸಿದ್ದು ಸಧ್ಯ ಈ ಒಂದು ವಿಚಾರ ಕುರಿತು ತನಿಖೆ ಯನ್ನು ಪೊಲೀಸರು ಕೂಡಾ ಮಾಡತಾ ಇದ್ದಾರೆ. ಒಟ್ಟಾರೆ ಇದೊಂದು ದೊಡ್ಡ ಘಟನೆ ಆಗಿದ್ದು ನಕಲಿ ಜಾಲ ಹೇಗೆ ಹುಟ್ಟಿಕೊಂಡಿತು ಹೇಗೆ ಕರ್ತವ್ಯಕ್ಕೆ ಸೇರಿಕೊಂಡರು ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ.