ಕೊಪ್ಪಳ –
ಕಚೇರಿಯಲ್ಲೇ ಖುಲ್ಲಂ ಖುಲ್ಲಾವಾಗಿ ತಹಶೀಲ್ದಾರರೊಬ್ಬರು ಡೀಲ್ ಗೆ ಇಳಿದ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.ತಹಶೀಲ್ದಾರ್ ಮೇಡಂ ಲಂಚಾವತಾರದ ವಿಡಿಯೋ ಈಗ ವೈರಲ್ ಆಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಹಶೀಲ್ದಾರ್ ಲಂಚಾವತಾರದ ವಿಡಿಯೋ ಇದಾಗಿದೆ. ಗಂಗಾವತಿ ತಹಶೀಲ್ದಾರ್ ರೇಣುಕಾ ಲಂಚಾವತಾರದ ವಿಡಿಯೋ ವೈರಲ್ ಆಗಿದೆ.
ಮರಳು ಅಕ್ರಮ ವ್ಯವಹಾರ ನಡೆಸಿ ಮಾತುಕತೆ ಮಾಡಿ ನಂತರ ಹಣವನ್ನು ತಗೆದುಕೊಂಡು ಡೀಲ್ ಗೆ ಇಳಿದಿರೋ ವಿಡಿಯೋ ವೈರಲ್ ಆಗಿದೆ. ಪ್ರತಿ ಒಂದು ಟ್ರ್ಯಾಕ್ಟರ್ ಗೆ 10 ಸಾವಿರ ಫಿಕ್ಸ್ ಅಡ್ವಾನ್ಸ್ 5 ಸಾವಿರ ಪಡೆದಿರೋದು ವಿಡಿಯೋದಲ್ಲಿದೆ.

ಇನ್ನೂ ಮುಖ್ಯವಾಗಿ ಕೊಪ್ಪಳ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಕೊರತೆ ಏನಿಲ್ಲ. ಇಲ್ಲಿನ ಮರಳು ಕೊಪ್ಪಳದಿಂದ ದೂರದ ಹತ್ತಾರು ಊರುಗಳಿಗೆ ಸರಬರಾಜು ಆಗುತ್ತದೆ, ಹುಬ್ಬಳ್ಳಿ ,ಗದಗ, ಬಳ್ಳಾರಿ, ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೆ ಸರಬರಾಜು ಆಗುತ್ತಾ ಹೋಗುತ್ತಿದೆ. ಆದರೆ ಇತ್ತಿಚಿನ ಕಠಿಣ ಕಾನೂನುಗಳಿಂದಾಗಿ ಮರಳು ಸಾಗಾಟ ಮಾತ್ರ ಕಡಿಮೆಯಾಗಿಲ್ಲ .

ಬದಲಾಗಿ ಮರಳು ಅಕ್ರಮವಾಗಿ ಅವ್ಯಾಹತವಾಗಿ ಸಾಗಾಟವನ್ನು ಮಾಡಲಾಗುತ್ತಿದೆ. ಜಿಲ್ಲೆಯ ಗಂಗಾವತಿ ತಹಶೀಲ್ದಾರ್ ರೇಣುಕಾ ಅವರು ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ, ದರ್ಪ ತೋರುತ್ತಾರೆ ಎಂಬ ಆರೋಪಗಳಿದ್ದವು. ಜೊತೆಗೆ ಮರಳು ಅಕ್ರಮಕ್ಕೆ ರೇಣುಕಾ ಮೇಡಂ ಅಭಯಹಸ್ತ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಈ ಬಗ್ಗೆ ಸಾಮಾಜಿಕ ಹೋರಾಟಗಾರರು ತಹಶೀಲ್ದಾರ್ ಅವರಿಗೆ ಅಕ್ರಮಕ್ಕೆ ಬ್ರೆಕ್ ಹಾಕುವಂತೆ ಮೌಖಿಕವಾಗಿ ಲಿಖಿತವಾಗಿ ದೂರು ನೀಡಿದರೂ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ತಹಶೀಲ್ದಾರ ಮೇಡಂ ಯಾಕೇ ಕ್ರಮವನ್ನು ಕೈಗೊಂಡಿಲ್ಲ ಎನ್ನೊದಕ್ಕೇ ಸಧ್ಯ ಈ ಒಂದು ಲಂಚಾವತಾರದ ವಿಡಿಯೋ ಸಾಕ್ಷಿಯಾಗಿದೆ.

ಮೂರ್ನಾಲ್ಕು ದಿನಗಳ ಹಿಂದೆ ಕಚೇರಿಯಲ್ಲೇ ಖುಲ್ಲಂ ಖುಲ್ಲಾ ಡೀಲ್‌ಗೆ ಇಳಿದ ತಹಶೀಲ್ದಾರರು ಮರಳು ಅಕ್ರಮಕ್ಕೆ ಲಂಚ ಪಡೆಯುತ್ತಿರೊ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ.ಪ್ರತಿ ಟ್ರ್ಯಾಕ್ಟರ್‌ಗೆ 20 ಸಾವಿರ ರೂಪಾಯಿ ಕೊಡಬೇಕು. ಅಡ್ವಾನ್ಸ್ ಆಗಿ 10 ಸಾವಿರ ಕೊಡುವಂತೆ ಬೇಡಿಕೆ ಇಟ್ಟು ಎದುರಿಗಿದ್ದ ವ್ಯಕ್ತಿ 5 ಸಾವಿರ ರೂಪಾಯಿ ಅಡ್ವಾನ್ಸ್ ಎಂದು ಹೇಳುತ್ತಾನೆ. ಆಗ ತಹಶೀಲ್ದಾರರು ಇನ್ನೂ 15 ಸಾವಿರ ರೂಪಾಯಿ? ಅಂತ ಕೇಳುತ್ತಾರೆ ಅಲ್ಲದೇ ಇನ್ನೂ ಕೆಲವು ವಿಚಾರಗಳನ್ನು ಕೂಡಾ ಮಾತನಾಡಿರುವ ವಿಡಿಯೋದಲ್ಲಿವೆ.
ವಿಡಿಯೋದಲ್ಲಿದೆ.ಇನ್ನೂ ಈ ಒಂದು ವಿಚಾರವು ನಮ್ಮ ಗಮನಕ್ಕೇ ಬಂದಿದ್ದು ಗಂಗಾವತಿ ತಹಶಿಲ್ದಾರರ ಬಗ್ಗೆ ನಿನ್ನೆಯಷ್ಟೇ ಈ ಕುರಿತು ದೂರು ಬಂದಿತ್ತು. ಈಗಾಗಲೇ ಎಚ್ಚರಿಕೆ ನೀಡಿದ್ದೇನೆ. ನನ್ನ ಬಳಿ ವಿಡಿಯೊ ಇಲ್ಲ. ವಿಡಿಯೋ ನೋಡಿದ ನಂತರ ಸರಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯುತ್ತೇನೆಂದು ಕೊಪ್ಪಳದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಸುದ್ದಿ ಸಂತೆಗೆ ಹೇಳಿದ್ದಾರೆ.