ಬೆಂಗಳೂರು –
ಕಂದಾಯ ಸಚಿವ ಆರ್. ಅಶೋಕ ಹೆಸರಿನಲ್ಲಿ ಸರ್ಕಾರಿ ಅಧಿಕಾರಿ ಬಳಿ ಹಣ ಬೇಡಿಕೆ ಮಾಡಿದ್ದ ಪಿಎ ಗಂಗಾಧರ್ ಗೆ ಗೇಟ್ ಪಾಸ್ ನೀಡಲಾಗಿದೆ. ಮಾತೃ ಇಲಾಖೆಗೆ ವಾಪಸ್ ಕಳಿಸಿದ್ದಾರೆ ಸಚಿವ ಆರ್ ಅಶೋಕ. ಶೃಂಗೇರಿ ಉಪನೊಂದಣಾಧಿಕಾರಿ ಬಳಿ ಹಣ ಕೇಳಿದ ಆರೋಪದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಗಂಗಾಧರ್ ವಿರುದ್ಧ ದೂರು ದಾಖಲಾಗಿತ್ತು ಇದರಿಂದ ಎಚ್ಚೆತ್ತುಕೊಂಡ ಸಚಿವರು ಗಂಗಾಧರ್ ಅವರಿಗೆ ಗೇಟ್ ಪಾಸ್ ನೀಡಿದ್ದಾರೆ.
ಗಂಗಾಧರ್ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಬಳಿ ಲಂಚ ಕೇಳಿದ್ದಾರೆ ಎಂಬ ಆರೋಪವಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಗಂಗಾಧರ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಚೆಲುವರಾಜ್ ದೂರನ್ನು ದಾಖಲು ಮಾಡಿದ್ದಾರೆ.
ಒಟ್ಟಾರೆ ಸಚಿವರ ಹೆಸರಲ್ಲಿ ಹಣ ಬೇಡಿಕೆ ಇಟ್ಟು ಈಗ ಸಚಿವರ ಸೂಚನೆ ಯಂತೆ ಮರಳಿ ಮಾತೃ ಸಂಸ್ಥೆಗೆ ಹೋಗಿದ್ದು ಇತ್ತ ಪೊಲೀಸರು ದೂರನ್ನು ದಾಖಲು ಮಾಡಿಕೊಂಡಿದ್ದು ಇವೆಲ್ಲದರ ನಡುವೆ ಮುಂದೆನಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಇನ್ನೂ ಈ ಕುರಿತು ಸುದ್ದಿ ಸಂತೆ ಕೂಡಾ ವರದಿಯೊಂದನ್ನು ಪ್ರಸಾರ ಮಾಡಿತ್ತು.