ಬೆಂಗಳೂರು –
ಪಠ್ಯಪರಿಶೀಲನಾ ಸಮಿತಿ ಅಧ್ಯಕ್ಷ ಸ್ಥಾನದಿಂದ ರೋಹಿತ್ ಚಕ್ರತೀರ್ಥಗೆ ಗೇಟ್‌ಪಾಸ್ ನೀಡಲು ಸಿಎಂ ಮುಂದಾಗಿ ದ್ದಾರೆ.ಕಳೆದ ಕೆಲವು ತಿಂಗಳುಗಳಿಂದ ರೋಹಿತ್ ಚಕ್ರತೀ ರ್ಥಯವರ ಬಗ್ಗೆ ಕೇಳಿ ಬರುತ್ತಿರುವ ದೂರಿನ ಸರಮಾಲೆ ಗಳು ಹೆಚ್ಚುತ್ತಿದ್ದು ಇದಲ್ಲದೇ ಶಿಕ್ಷಣ ಸಚಿವ ನಾಗೇಶ್ ಕೂಡ ರೋಹಿತ್ ಪರವಾಗಿ ಬ್ಯಾಟ್ ಬೀಸಿದ್ದರು, ಆದ್ರೆ ರೋಹಿತ್ ಹಿನ್ನಲೆ ಬಗ್ಗೆ ಹೇಳಿದ್ದ ಮಾತೊಂದು ಈಗ ಸುಳ್ಳು ಅಂತ ನಿರೂಪಿತವಾಗಿದೆ ಕೂಡ.ಸರ್ಕಾರಕ್ಕೆ ಭಾರಿ ಮುಜುಗರ ವನ್ನು ಉಂಟು ಮಾಡಿದೆ.
ಇನ್ನೂ ರೋಹಿತ್ ಚಕ್ರತೀರ್ಥ ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿ ಮಾಡಿದ್ದಾರೆ ಎನ್ನುವ ಆರೋಪ ಕಳೆದ ಮೂರು ವರ್ಶದಿಂದ ಕೂಡ ಕೇಳಿಬರತಿತ್ತು ಆದರೆ ಆಗ ಯಾವುದೇ ಸರ್ಕಾರಗಳು ಪೋಲಿಸರು ಅವರ ವಿರುದ್ದ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿರಲಿಲ್ಲ ಈಗ ನಾಡಗೀ ತೆಗೆ ಅವಮಾನ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಖುದ್ದು ರಾಜ್ಯ ಒಕ್ಕಲಿಗ ಸಂಘ ರೋಹಿತ್ ವಿರುದ್ದ ಕ್ರಮ ಕೈಗೊಳ್ಳುವಂತೆ ಸಿಂಗೆ ಮನವಿ ಸಲ್ಲಿಸಿದ್ದಾರೆ.ಒಂದು ವೇಳೆ ಪಠ್ಯ ಪರಿಶೀಲನಾ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡದೇ ನಾಡಗೀತೆಗೆ ಮಾಡಿದ ಅವಮಾನಕ್ಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಹೋದ್ರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದಲ್ಲದೇ ಆದಿಚುಂ ಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂ ದನಾಥ ಸ್ವಾಮೀಜಿ ಕೂಡ ಘಟನೆ ಸಂಬಂಧ ಆಘಾತವನ್ನು ವ್ಯಕ್ತಪಡಿಸಿದ್ದು ಈ ಕೂಡಲೇ ಸೂಕ್ತ ಕ್ರಮವನ್ನು ಕೈಗೊಳ್ಳು ವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈ ನಡುವೆ ಸಿಎಂ ಕೂಡ ಈ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗು ವುದು ಎನ್ನಲಾಗಿದ್ದು ಮುಂಬರುವ ವಿಧಾನಸಭಾ ಚುನಾ ವಣಾ ಹಿನ್ನಲೆಯಲ್ಲಿ ಒಕ್ಕಲಿಗರ ವಿರುದ್ದ ಹೋರಾಡುವ ಬದಲು ರೋಹಿತ್ ಚಕ್ರತೀರ್ಥಗೆ ಕೂಡಲೇ ಪಠ್ಯಪರಿಶೀ ಲನಾ ಸಮಿತಿ ಅಧ್ಯಕ್ಷ ಸ್ಥಾನದಿಂದ ಗೇಟ್ ಪಾಸ್ ನೀಡಲು ಮುಂದಾಗಿದ್ದಾರೆ.