ನವದೆಹಲಿ –
ಒಂದು ಸಮಯದಲ್ಲಿ ಮೈದಾನದಲ್ಲಿ ಕಲಾತ್ಮಕ ಆಟದ ಮೂಲಕ ಹೆಸರಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈಗ ಮತ್ತೊಂದು ವಿಶೇಷ ಸಾಮಾಜಿಕ ಕಾರ್ಯದ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ.
ಸಧ್ಯ ಅವರು ಬಿಜೆಪಿ ಸಂಸದರಾಗಿದ್ದು ಗೌತಮ್ ಗಂಭೀರ್ ಅವ್ರು ದೆಹಲಿಯಲ್ಲಿ ಎರಡನೇ ಜನ್ ರಸೋಯಿ ಅನ್ನೋ ಕ್ಯಾಂಟೀನ್ ಆರಂಭಿಸಿದ್ದಾರೆ. ಈ ಕ್ಯಾಟಿಂನ್ ನ ಸ್ಪೆಷಾಲಿಟಿ ಏನು ಅಂದ್ರೆ ಇಲ್ಲಿ ಕೇವಲ ಒಂದು ರೂಪಾಯಿ ಒಂದು ಊಟ ಸಿಗುತ್ತೆ.
ಇಷ್ಟು ಕಡಿಮೆ ದರದಲ್ಲಿ ಆಹಾರ ಮಾರಾಟ ಮಾಡ್ತಿರೋದಾದ್ರು ಯಾಕೆ..? ಇದ್ರ ಹಿಂದಿನ ಉದ್ದೇಶವಾದ್ರು ಏನು ಗೊತ್ತಾ? ಅಸಲಿಗೆ ಬಡವರ ಹೊಟ್ಟೆ ತುಂಬಿಸಲು ಪೌಷ್ಠಿಕ ಆಹಾರ(ಥಾಲಿ) ನೀಡುವುದೇ ಜನ್ ರಸೋಯಿ ಕ್ಯಾಂಟೀನ್ ಉದ್ದೇಶ.
ಈ ಬಗ್ಗೆ ಮಾತನಾಡಿದ ಸಂಸದ ಗೌತಮ್ ಗಂಭೀರ್, ‘ಇದು ಕೇವಲ ಕ್ಯಾಂಟೀನ್ ಅಲ್ಲ, ಬಡವರ ಹೊಟ್ಟೆ ತುಂಬಿಸುವ ಒಂದು ಅಭಿಯಾನ’ ಅಂತಾ ಹೇಳಿದ್ದಾರೆ.
ನ್ಯೂ ಅಶೋಕ್ ನಗರದಲ್ಲಿ ಎರಡನೇ ಕ್ಯಾಂಟೀನ್ ಆರಂಭಿಸಲಾಗಿದ್ದು, ಇಲ್ಲಿ ಒಮ್ಮೆಲೆ ಸುಮಾರು 50 ಜನರಿಗೆ ಊಟ ಬಡಿಸಬಹುದಾಗಿದೆ.
ಇನ್ನು ಗಂಭೀರ್ ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರು ಶ್ಲಾಘಿಸಿದ್ದಾರೆ.
ಅಂದ್ಹಾಗೆ, ಕಳೆದ ವರ್ಷ ಡಿಸೆಂಬರ್ ನಲ್ಲಿ ತಮ್ಮ ಪೂರ್ವ ದೆಹಲಿ ಕ್ಷೇತ್ರದ ಗಾಂಧಿ ನಗರದ ನಲ್ಲಿ ಗಂಭೀರ್ ಮೊದಲ ಕ್ಯಾಂಟೀನ್ ಉದ್ಘಾಟಿಸಿದ್ದರು. ಈವರೆಗೆ ಈ ಕ್ಯಾಂಟೀನ್ನಲ್ಲಿ ಸುಮಾರು 50 ಸಾವಿರ ಜನರಿಗೆ ಆಹಾರ ನೀಡಲಾಗಿದೆ ಎಂದು ಗಂಭೀರ್ ಅವರ ಕಚೇರಿ ತಿಳಿಸಿದೆ.