ಬಳ್ಳಾರಿ –
ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಒಂದಾಗಿರುವ ಬಳ್ಳಾರಿ ಮಹಾನಗರ ಪಾಲಿಕೆಗೆ ಸಾರ್ವತ್ರಿಕ ಚುನಾವಣೆಗೆ ಮುಹೂರ್ತ ಘೋಷಣೆಯಾಗಿದೆ.

ರಾಜ್ಯ ಚುನಾವಣಾ ಆಯೋಗವು ದಿನಾಂಕವನ್ನು ನಿಗದಿ ಮಾಡಿ ಘೋಷಣೆ ಮಾಡಿದೆ.ಮಹಾನಗರ ಪಾಲಿಕೆಯ 39 ವಾಡ್೯ಗಳಿಗೆ ಚುನಾವಣೆ ನಡೆಯಲಿದ್ದು ಸಾರ್ವತ್ರಿಕ ಚುನಾವಣೆಗಾಗಿ ಆಯೋಗ ದಿನಾಂಕ ವನ್ನು ಘೋಷಣೆ ಮಾಡಿದೆ.

ಏಪ್ರಿಲ್ 8 ರಂದು ನಾಮ ಪತ್ರ ಸಲ್ಲಿಕೆ ಆರಂಭವಾಗಲಿದ್ದು ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 15 ಗುರುವಾರ ಕೊನೆಯ ದಿನಾಂಕವಾಗಿದೆ.

ನಾಮ ಪತ್ರ ಪರಿಶೀಲಿಸಲು ಏಪ್ರಿಲ್ 16 ಕೊನೆಯ ದಿನಾಂಕವಾಗಿದೆ.ನಾಮ ಪತ್ರ ಹಿಂತೆಗೆದುಕೊಳ್ಳಲು 19/04/21 ಕೊನೆಯ ದಿನಾಂಕವಾಗಿದೆ.


ಇನ್ನೂ 27/04/21 ರಂದು ಬೆಳಿಗ್ಗೆ 7 ರಿಂದ ಸಂಜೆ 5 ರ ವರಗೆ ಮತದಾನ ನಡೆಯಲಿದೆ.ಅವಶ್ಯವಿದ್ದರೆ ಮರು ಮತದಾನವನ್ನು ದಿನಾಂಕ 29/04/21 ಬೆಳಿಗ್ಗೆ 7 ರಿಂದ ಸಂಜೆ 5 ರ ವರಗೆ ಮಾಡಲು ಅವಕಾಶ ನೀಡಲಾಗಿದೆ.ಮತ ಎಣಿಕೆಯು 30/04/21 ರಂದು ನಡೆಯಲಿದೆ.ತೀವ್ರ ಕುತೂಹಲ ಗೊಳಿಸಿರುವ ಮಹಾನಗರ ಪಾಲಿಕೆ ಚುನಾವಣೆ