ಬೆಂಗಳೂರು –
ಸದಾ ಒಂದಿಲ್ಲೊಂದು ವಿಚಾರ ವಿಷಯಗಳ ಮೂಲಕ ಸುದ್ದಿಯಲ್ಲಿರುವ ತುಪ್ಪದ ಬೆಡಗಿ ರಾಗಿಣಿ ದಿಗ್ವೇದಿ ಈಗ ಮತ್ತೆ ಸುದ್ದಿಯಾಗಿದ್ದಾರೆ. ಹೌದು ಅದು ಬಾತ್ ರೂಮ್ ನಲ್ಲಿನ ಹಾಟ್ ಹಾಟ್ ಪೊಟೊಗಳ ಮೂಲಕ.ಕನ್ನಡ ಚಿತ್ರರಂ ಗದ ಹೆಸರಾಂತ ಚಿತ್ರನಟಿ ರಾಗಿಣಿ ಯವರು ಬಾತ್ ರೂಮ್ ನಲ್ಲಿ ಕುಳಿತುಕೊಂಡಿರುವ ಕೆಲವೊಂದಿಷ್ಟು ಹಾಟ್ ಫೋಟೋ ಗಳನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಡ್ರಗ್ಸ್ ಕೇಸ್ ನಿಂದ ಬೇಸತ್ತು ಹೋಗಿದ್ದ ನಟಿ ಜೈಲಿನಿಂದ ಹೊರ ಬಂದ ಮೇಲೆ ಬಹಳ ಬದಲಾಗಿದ್ದಾರೆ. ಇದನ್ನೆಲ್ಲ ಸರಿ ಮಾಡಿಕೊಳ್ಳುವ ಹಂಬಲದಲ್ಲಿರುವ ಇವರು ಕಹಿ ಘಟನೆಗಳನ್ನೆಲ್ಲ ಮರೆತು ಹೊಸ ಸಂತೋಷದ ಜೀವನ ನಡೆಸುತ್ತಿ ದ್ದು ಇದಕ್ಕೆ ಈ ಒಂದು ಫೋಟೋ ಗಳೇ ಸಾಕ್ಷಿ ಯಾಗಿದ್ದು ಹೊಸ ಪೊಟೊ ಶೂಟ್ ಶೂಟ್ ಮಾಡಿಸಿ ಅದನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.ಸದಾ ಬೋಲ್ಡ್ ಬಟ್ಟೆಗಳಲ್ಲಿ ಸಾರ್ವಜನಿಕವಾಗಿ ಕೂಡ ಕಾಣಿಸಿ ಕೊಳ್ಳುವ ರಾಗಿಣಿ ಟ್ರೆಡಿಶನಲ್ ಗಿಂತ ತುಂಡು ಉಡುಗೆಯಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಾರೆ.
ಅವರು ಅಪ್ಲೋಡ್ ಮಾಡುವ ಫೋಟೋಗ ಳಲ್ಲೂ ಕೂಡ ಅದೇ ಹೆಚ್ಚು ವಿಶೇಷತೆಯಿಂದ ಕೂಡಿದ್ದು ಸಖತ್ ಹಾಟ್ ಲುಕ್ ಅಲ್ಲಿ ಫೋಟೋ ಶೂಟ್ ಮಾಡಿಸುತ್ತಾರೆ. ಹಿಂದೆ ಇವರು ಹಂಚಿ ಕೊಂಡಿರುವ ಅನೇಕ ಫೋಟೋಗಳು ಕೂಡ ಇಂತಹದ್ದೇ ಆಗಿದ್ದು ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಈ ಬಾರಿ ನಟಿ ಫೋಟೋಶೂಟ್ ಮಾಡಿಸಿ ಅಪ್ಲೋಡ್ ಮಾಡಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.ಸ್ವಿಮ್ ಡ್ರೆಸ್ ಅಲ್ಲಿ ಟಬ್ ಒಳಗೆ ಕುಳಿತು ಕೊಟ್ಟಿರುವ ಫೋಸ್ ಗೆ ಇವರ ಮೇಲ್ ಫ್ಯಾನ್ಸ್ ಫಿದಾ ಆಗಿದ್ದಾರೆ.
ಫೋಟೋಗಳು ಅಪ್ಲೋಡ್ ಆಗುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆ ಕಂಡು ಲೈಕ್ಸ್ ಕೂಡ ಪಡೆದಿದೆ. ಜೊತೆಗೆ ಅಭಿಮಾನಿಗಳಿಂದ ಭರಪೂರ ಕಮೆಂಟ್ ಗಳ ಸುರಿಮಳೆಯೇ ಹರಿದು ಬಂದಿದೆ. ರಾಗಿಣಿ ಅವರು ಮೊದಲು ಸುದೀಪ್ ಅವರ ವೀರಮದಕರಿ ಸಿನಿಮಾ ಮೂಲಕ ಲಾಂಚ್ ಆದರು.ನಂತರ ಅಭಿನಯಿಸಿದ ಒಂದಷ್ಟು ಸಿನಿಮಾಗಳಲ್ಲೂ ಕೂಡ ಉತ್ತಮ ಪಾತ್ರವನ್ನು ನಿರ್ವಹಿಸಿದ್ದರು.ಅದರಲ್ಲೂ ಮತ್ತೊಮ್ಮೆ ಸುದೀಪ್ ಅವರಿಗೆ ಜೊತೆಯಾಗಿ ಮಾಡಿದ ಕೆಂಪೇಗೌಡ,ಚಿರಂಜೀವಿ ಸರ್ಜಾ ಅವರ ಜೊತೆ ಅಭಿನಯಿಸಿದ ಗಂಡೆದೆ ಮತ್ತು ದುನಿಯಾ ವಿಜಯ್ ಅವರ ಜೊತೆ ಅಭಿನಯಿಸಿದ ಬ್ಲಾಕ್ ಕೋಬ್ರಾ ಹಾಗೂ ಪೊಲೀಸ್ ಅಧಿಕಾರಿಯಾಗಿ ಆರ್ಭಟಿಸಿದ್ದ ರಾಗಿಣಿ ಐಪಿಎಸ್ ಮುಂತಾದ ಸಿನಿಮಾಗಳು ನಟಿ ಮಣಿಗೆ ಒಳ್ಳೆ ಇಮೇಜ್ ಅನ್ನು ತಂದು ಕೊಟ್ಟಿದ್ದವು.ಆದರೆ ನಂತರ ಆರಿಸಿಕೊಂಡ ಪಾತ್ರಗಳು ಅದೇ ಪಾತ್ರಗಳಲ್ಲಿ ಮುಂದುವರೆಯು ವಂತೆ ಮಾಡಿಬಿಟ್ಟಿದೆ. ಯಾವಾಗ ಕಳ್ಳ ಮಳ್ಳ ಸುಳ್ಳ ಸಿನಿಮಾದ ತುಪ್ಪ ಬೇಕಾ ತುಪ್ಪ ಐಟಂ ಹಾಡಿನಲ್ಲಿ ಕುಣಿದರು ಅಂದಿನಿಂದ ಅದೇ ಇಮೇಜ್ ಅಲ್ಲಿ ನೋಡಲಾಗುತ್ತಿದೆ.
ನಂತರ ಅಕ್ಕ ನಿನ್ನ ಮಗಳು ಚಿಕ್ಕವಳು ಆಗಲ್ವಾ ಎನ್ನುವ ವಿಕ್ಟರಿ ಸಿನಿಮಾದ ಮತ್ತೊಂದು ಇದೇ ಮಾದರಿಯ ಹಾಡಿನಲ್ಲಿ ಕುಣಿದರು.ಹಾಗಾಗಿ ಈಕೆಗೆ ಇಂಥದೇ ಆಫರ್ ಗಳು ಬರುತ್ತಿದ್ದು ಮಧ್ಯೆ ಮಾಡಿಕೊಂಡ ಡ್ರಗ್ಸ್ ಕೇಸ್ ಎಡಬಟ್ಟಿನಿಂದ ಜೈಲುಸೇರುವಂತಾಗಿತ್ತು.ಸದ್ಯಕ್ಕೀಗ ಎಲ್ಲಾ ವಿವಾದಗಳಿಂದ ಹೊರಬಂದಿದ್ದು ಸಧ್ಯ ಸಿನಿಮಾ ರಂಗದಂತ ಮತ್ತೆ ಮುಖ ಮಾಡುತ್ತಿದ್ದಾರೆ ಇನ್ನಾದರೂ ಈಕೆ ಬುದ್ಧಿ ಕಲಿತು ಕನ್ನಡ ಚಿತ್ರರಂಗದ ಹೆಸರುಳಿಸುವ ಕೆಲಸಗಳಲ್ಲಿ ತೊಡಗಿಕೊಳ್ಳವಂತೆ ಆಗಲಿ ಎಂದು ಹರಸೋಣ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..