ಬೆಂಗಳೂರು –
ಮಾಹಿತಿ ನೀಡಿ 10 ಲಕ್ಷ ರೂಪಾಯಿ ಬಹುಮಾನ ಗೆಲ್ಲಿ – ಮಾಹಿತಿ ನೀಡಿದವರ ಮಾಹಿತಿಯನ್ನು ಗೌಪ್ಯ ಈಗಾಗಲೇ ವೈರಲ್ ಆಗಿರುವ ಪೊಟೊ ವಿಡಿಯೋಗಳನ್ನು ನೋಡಿ ಮಾಹಿತಿ ನೀಡಿ
ಹೌದು ಬೆಂಗಳೂರಿನ ಹೆಸರಾಂತ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಯ ಮಾಹಿತಿ ನೀಡಿದವರಿಗೆ ಬಹುಮಾನವನ್ನು ಘೋಷಣೆ ಮಾಡಲಾಗಿದೆ.ಕಳೆದ ವಾರ ರಾಮೇಶ್ವರಂ ಕೆಫೆಯಲ್ಲಿ ಈ ಒಂದು ಸ್ಪೋಟ ಸಂಭವಿಸಿದ ನಂತರ ಈವರೆಗೆ ಆರೋಪಿಯ ಮಾಹಿತಿ ಲಭ್ಯವಾಗಿಲ್ಲ ಹೀಗಾಗಿ ಸಧ್ಯ ಸ್ಪೋಟದ ಆರೋಪಿಯ ರೇಖಾಚಿತ್ರವನ್ನು ಕೂಡಾ ರಾಷ್ಟ್ರೀಯ ತನಿಖಾ ಸಂಸ್ಥೆ ಬಿಡುಗಡೆ ಮಾಡಿದ್ದು ಇದರ ಬೆನ್ನಲ್ಲೇ ಈ ಒಂದು ಆರೋಪಿಯ ಕುರಿತಂತೆ ಯಾರಾದರೂ ಮಾಹಿತಿಯನ್ನು ನೀಡಿದರೆ ಅವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಣೆ ಮಾಡಿದೆ.
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನ ಚುರುಕು ಮಾಡಿದೆ. ಬಾಂಬರನ ಪೋಟೋವನ್ನು ಹಂಚಿಕೊಂಡಿರುವ ಎನ್‍ಐಎ, ಬಾಂಬರನ ಬಂಧನಕ್ಕೆ ಕಾರಣವಾಗಬಲ್ಲ ಮಾಹಿತಿ ನೀಡಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿದೆ.
ಜೊತೆಗೆ ಮಾಹಿತಿ ನೀಡಿದವರ ವ್ಯಕ್ತಿಯನ್ನು ಗೌಪ್ಯವಾಗಿ ಇಡುವು ದಾಗಿ ತಿಳಿಸಿದೆ. ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಳಸಿ ಬಾಂಬ್ ಸ್ಫೋಟ ನಡೆಸಿದ ಶಂಕಿತನ ವಿಡಿಯೋಗಳು ಈಗಾಗಲೇ ವೈರಲ್ ಆಗಿದೆ. ಈ ವ್ಯಕ್ತಿಯ ಮಾಹಿತಿ ನೀಡಿ ಆತನ ಬಂಧನಕ್ಕೆ ಕಾರಣವಾದಲ್ಲಿ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.ಶಂಕಿತ ಉಗ್ರನ ಮಾಹಿತಿಯನ್ನು 08029510900, 8904241100 ತಿಳಿಸುವಂತೆ ಎನ್‍ಐಎ ತಿಳಿಸಿದ್ದು ಮಾಹಿತಿ ನೀಡಿದ ವ್ಯಕ್ತಿಯ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..