ಬಾಗಲಕೋಟೆ –
ಪಂಚಮಸಾಲಿ ಸಮುದಾಯಕ್ಕೆ ಎರಡು ದಿನಗಳಲ್ಲಿ ಮೀಸಲಾತಿ ನೀಡಿ ಇಲ್ಲವಾದರೆ ಪಾದಯಾತ್ರೆ ಮಾಡಲಾಗುವುದು ಎಂದು ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸಾಮಿಜಿ ಮುಖ್ಯಮಂತ್ರಿಗೆ ಗಡುವು ನೀಡಿದ್ದಾರೆ.

ಬಾಗಲಕೋಟೆಯ ಹುನಗುಂದದಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮಿಜಿ ಮಾತನಾಡಿ ಮುಖ್ಯಮಂತ್ರಿಗೆ ಗಡುವು ನೀಡಿದರು. ಪಂಚಮಸಾಲಿ 2 ಎ ಮೀಸಲಾತಿ ಪಾದಯಾತ್ರೆ ಹೋರಾಟ ವಿಚಾರ ಕುರಿತಂತೆ ಸರ್ಕಾರಕ್ಕೆ ಇನ್ನೆರಡು ದಿನಗಳ ಗಡುವು ನೀಡಿದರು ಸ್ವಾಮೀಜಿ.Vinay

ಎರಡು ದಿನದಲ್ಲಿ ಸಿಎಂ ಯಡಿಯೂರಪ್ಪ ತಮ್ಮ ನಿಲುವು ತಿಳಿಸಿ ಸ್ಪಂದಿಸಿದಿದ್ದರೆ ಪಾದಯಾತ್ರೆ ಅಚಲ.ಸರ್ಕಾರ ಸ್ಪಂದಿಸಿದರೆ ಅಭಿನಂದಿಸಿ ವಿಜಯೋತ್ಸವ ಮಾಡುತ್ತೇವೆ.ಸ್ಪಂದನೆ ಇರದಿದ್ದರೆ ಕೂಡಲಸಂಗಮದಿಂದ ಜನೇವರಿ 14 ರಿಂದ ಬೃಹತ್ ಪಾದಯಾತ್ರೆ ಮಾಡುತ್ತೇವೆ ಎಂದರು.ಇನ್ನೂ ಕೂಡಲಸಂಗಮದಿಂದ ಇಲಕಲ್, ಕೊಪ್ಪಳ, ಹರಪ್ಪನಹಳ್ಳಿ, ದಾವಣಗೆರೆ, ಚಿತ್ರದುಗ೯, ತುಮಕೂರು ಮಾಗ೯ವಾಗಿ ಬೆಂಗಳೂರಿಗೆ ಪಾದಯಾತ್ರೆಯನ್ನು ಮಾಡಲಾಗುತ್ತದೆ.

ಅಧಿವೇಶನ ನಡೆಯುವ ವೇಳೆ ಬೆಂಗಳೂರು ತಲುಪಿ ವಿಧಾನಸೌಧ ಮುತ್ತಿಗೆಗೆ ಹಾಕುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು ಇದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಬಳಿಕ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಸಹ ನಿರ್ಧಾರ ಮಾಡಲಾಗಿದೆ ಎಂದರು.