ಮೈಸೂರು –
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ 2022-23 ನೇ ಸಾಲಿನ ಡಿ.ಇ.ಎಲ್.ಇ.ಡಿ ಟಿ.ಸಿ.ಎಚ್ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂ ಶದಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ.50 ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇ.45 ಅಂಕ ಗಳು ಪಡೆದಿರಬೇಕು.
ಪರಿಶಿಷ್ಟ ಜಾತಿ ಅಥವಾ ಪಂಗಡದ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.ಸಾಮಾನ್ಯ ವಿದ್ಯಾರ್ಥಿ ಗಳಿಗೆ ವಾರ್ಷಿಕ ಶುಲ್ಕ ಕೇವಲ 3015 ರೂ.ಇರುತ್ತದೆ. ವಿದ್ಯಾರ್ಥಿವೇತನ ಶುಲ್ಕ ಮರುಪಾವತಿಗೆ ಅವಕಾಶವಿ ರುತ್ತದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಮಿ ಕರ ಮಕ್ಕಳಿಗೆ 25000 ರೂ ವಿದ್ಯಾರ್ಥಿ ವೇತನವು ಇರುತ್ತದೆ.
ಡಿ.ಇ.ಎಲ್.ಇ.ಡಿ ಕೋರ್ಸ್ ಮುಗಿದ ನಂತರ ಖಾಸಗಿ ಶಾಲೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುವುದು. ಆಸಕ್ತ ಅಭ್ಯರ್ಥಿಗಳು ಪಿ.ಎಸ್.ಟಿ.ಇ ನೋಡಲ್ ಅಧಿಕಾರಿ ಗಳಾದ ಡಿ.ಆರ್.ಅಮಿತ್ ಅಥವಾ ದೂ.ಸಂ: 8971265899,9535565579, 9964449959 ಮತ್ತು 8722660192 ಅನ್ನು ಸಂಪರ್ಕಿಸಬಹುದು ಎಂದು ಡಯಟ್‌ನ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು ತಿಳಿಸಿದ್ದಾರೆ.