KSRTC ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ – ಬಾಕಿ ಮೊತ್ತವನ್ನು ನೀಡಿ ನೌಕರರಿಗೆ ನೆಮ್ಮದಿಯ ಸುದ್ದಿಯನ್ನು ನೀಡಿದ ಸಚಿವರು…..

Suddi Sante Desk
KSRTC ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ – ಬಾಕಿ ಮೊತ್ತವನ್ನು ನೀಡಿ ನೌಕರರಿಗೆ ನೆಮ್ಮದಿಯ ಸುದ್ದಿಯನ್ನು ನೀಡಿದ ಸಚಿವರು…..

ಬೆಂಗಳೂರು

KSRTC ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ – ಬಾಕಿ ಮೊತ್ತವನ್ನು ನೀಡಿ ನೌಕರರಿಗೆ ನೆಮ್ಮದಿಯ ಸುದ್ದಿಯನ್ನು ನೀಡಿದ ಸಚಿವರು ಹೌದು

KSRTC ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.ಹೌದು ರಾಜ್ಯ ಸರ್ಕಾರವು ನೌಕರರ ಬಾಕಿ ಮೊತ್ತವನ್ನು ಪಾವತಿಸಲು ಆದೇಶವನ್ನು ಮಾಡಿದೆ.ಇದರೊಂದಿಗೆ ರಾಜ್ಯ ಸರ್ಕಾರವು ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದು ತುಟ್ಟಿಭತ್ಯೆ ಹಿಂಬಾಕಿ,

ಗಳಿಕೆ ರಜೆ ನಗದೀಕರಣ ಹಾಗೂ ಉಪಧನದ ಬಾಕಿ ಮೊತ್ತ ಒಟ್ಟು ರೂ. 84 ಕೋಟಿ ಪಾವತಿ ಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗು ಕೆಎಸ್‌ಆರ್​ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ನಿರ್ದೇಶನದಂತೆ ಆದೇಶ ಹೊರಡಿಸಲಾಗಿದೆ. ಕೆಎಸ್​ಆರ್​ಟಿಸಿಯ ಸಿಬ್ಬಂದಿಗಳಿಗೆ ಸದರಿ ಅವಧಿಯಲ್ಲಿನ ನಿವೃತ್ತ ಸಿಬ್ಬಂದಿಗಳನ್ನು ಸೇರಿ ದಂತೆ 2022-23 ಮೇ ಸಾಲಿನ ಗಳಿಕೆ ರಜೆ ನಗದೀಕರಣದ ಮೊತ್ತ ರೂ.24 ಕೋಟಿ ರೂಪಾಯಿ.

ಜುಲೈ-2022 ರಿಂದ ನವೆಂಬರ್-2022 ರ ವರ್ಷದ 5 ತಿಂಗಳು.ಜನವರಿ-2023 ರಿಂದ ಜುಲೈ-2023 ರವರೆಗಿನ 7 ತಿಂಗಳು. ಜುಲೈ- 2023 ರಿಂದ ಅಕ್ಟೋಬರ್-2023 ರವರೆಗಿನ 4 ತಿಂಗಳುಗಳ ಹಿಂಬಾಕಿ ತುಟ್ಟಿಭತ್ಯೆ ಮೊತ್ತ ರೂ.54 ಕೋಟಿಯನ್ನು ಪಾವತಿಸಲು ಆದೇಶಿಸಲಾಗಿದೆ.

ಈ ವರ್ಷ ಅಂದರೆ ಜನವರಿ-2024 ರಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಸಿಬ್ಬಂದಿ ಗಳ ಉಪಧನ ರೂ.6 ಕೋಟಿ ಮೊತ್ತವನ್ನು ವ್ಯವಸ್ಥಾಪಕ ನಿರ್ದೇಶಕರು ಬಿಡುಗಡೆಗೊಳಿಸಲು ಆದೇಶಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.