ಬೆಂಗಳೂರು –
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟ ಗೊಂಡು ರಾಜ್ಯದಲ್ಲಿ ನೀತಿ ಸಂಹಿತೆ ಸಡಿಲಿಕೆ ಯಾಗುತ್ತಿದ್ದಂತೆ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದಾರೆ.ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುವ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಲು ಸರ್ಕಾರ ಮುಂದಾಗಿದೆ.
ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಜಾರಿಗಾಗಿ ಜಾತಕಪಕ್ಷಿಯಂತೆ ಕಾಯುತ್ತಿ ದ್ದಾರೆ.ಚುನಾವಣಾ ನೀತಿ ಸಂಹಿತೆ ಜಾರಿಯಾ ಗುವ ಒಂದು ದಿನ ಮೊದಲು 7ನೇ ವೇತನ ಆಯೋಗದ ವರದಿ ಸರ್ಕಾರದ ಕೈ ಸೇರಿದೆ. ಹೀಗಾಗಿ ಮಾದರಿ ನೀತಿ ಸಂಹಿತೆ ಸಡಿಲಗೊಂಡ ಕೂಡಲೇ ವರದಿ ಜಾರಿಗೆ ಸರ್ಕಾರ ಸಿದ್ದತೆ ನಡೆಸಿದೆ.
ಮಾರ್ಚ್ 16ರಿಂದ ಜಾರಿಯಲ್ಲಿರುವ ನೀತಿ ಸಂಹಿತೆಯು ಮುಂಬರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಗೆ ಜೂನ್ 3ರವರೆಗೆ ನೀತಿ ಸಂಹಿತೆ ಜಾರಿಯಲ್ಲಿದೆ ರಾಜ್ಯ ವಿಧಾನಪರಿಷತ್ ಚುನಾವಣಾ ಫಲಿತಾಂಶಗಳು ಜೂನ್ 6ರಂದು ಹೊರಬೀಳಲಿವೆ.
ಸರ್ಕಾರದ ಎಲ್ಲಾ ಆದೇಶಗಳನ್ನು ಸಿದ್ಧಪಡಿಸು ವಂತೆ ನಾವು ತಿಳಿಸಿದ್ದೇವೆ. ಜೂನ್ 15ರ ಮೊದಲು ಎಲ್ಲಾ ಆದೇಶಗಳನ್ನು ಹೊರಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹಣಕಾಸು ಇಲಾಖೆ ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಹೇಳಿದ್ದಾರೆ.ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು 2024-25ರ ಬಜೆಟ್‌ನಲ್ಲಿ ನೀಡಿದ ಭರವಸೆಗಳನ್ನು ಜಾರಿಗೆ ತರಲು 337 ಸರ್ಕಾರಿ ಆದೇಶಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ.
ನಮ್ಮ ವಿನಂತಿಯ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯ ಸಡಿಲಿಕೆ ಮಾಡುತ್ತದೆ. ಇದು ಕೇಸ್ ಟು ಕೇಸ್ ಆಧಾರದ ಮೇಲೆ ಇರುತ್ತದೆ ಎಂದು ಅತೀಕ್ ತಿಳಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾ ಮಯ್ಯ ಅಥವಾ ಯಾರೇ ಸಚಿವರಾದರೂ ಅಧಿ ಕೃತ ಸಭೆಗಳ ಅಧ್ಯಕ್ಷತೆ ವಹಿಸಲು ಚುನಾವಣಾ ಸಮಿತಿಯ ಒಪ್ಪಿಗೆ ಅಗತ್ಯ.
ಯಾವುದೇ ಹೊಸ ಘೋಷಣೆ ಹೊಸ ಆದೇಶ ಗಳನ್ನು ನೀಡುವುದು, ಹೊಸ ಟೆಂಡರ್‌ಗಳನ್ನು ಕರೆಯುವುದು, ಹೊಸ ಗುತ್ತಿಗೆಗಳನ್ನು ನೀಡು ವುದು, ಹೊಸ ಕೆಲಸದ ಆದೇಶಗಳನ್ನು ವಹಿಸಿ ಕೊಡುವುದು ಮತ್ತು ಹೊಸ ಯೋಜನೆಗಳನ್ನು ಮಂಜೂರು ಮಾಡುವುದು ಮಾದರಿ ನೀತಿ ಸಂಹಿತೆಯ ಕಾರಣದಿಂದಾಗಿ ತಡೆಯಾಗುತ್ತವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿ ದಿರುವ ಕಾರಣ ಇಷ್ಟು ದಿನ ಚುನಾವಣಾ ಕರ್ತವ್ಯ ದಲ್ಲಿದ್ದ ಅನೇಕ ಸರ್ಕಾರಿ ನೌಕರರು ತಮ್ಮ ಕೆಲಸಕ್ಕೆ ಹಿಂದಿರುಗಿದ್ದಾರೆ.ಇದರಿಂದ ಆಡಳಿತ ಯಂತ್ರವನ್ನು ಮತ್ತೆ ಚುರುಗೊಳಿಸಲು ಸಹಾಯ ವಾಗುತ್ತದೆ.ಇದಾದ ನಂತರ ಸರ್ಕಾರ ಹಲವು ಆದೇಶಗಳನ್ನು ಜಾರಿಗೆ ತರಲಿದೆ.ಸರ್ಕಾರ ಕೂಡ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..