ದಸರಾ ಹಬ್ಬದ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

Suddi Sante Desk
ದಸರಾ ಹಬ್ಬದ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ಬೆಂಗಳೂರು –

ನವರಾತ್ರಿ ದಸರಾ ಹಬ್ಬದ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ.ಹೌದು ರಾಜ್ಯ ಸರ್ಕಾರ ವೇತನ ಪರಿಷ್ಕರಣೆ ಸಂಬಂಧ ಪಟ್ಟ ಸಮಿತಿ ರಚಿಸಲು ಸಿದ್ಧತೆ ಮಾಡಿಕೊಂಡಿದೆ. ದಸರಾ ನಂತರ ಸಮಿತಿ ರಚಿಸಲಿದ್ದು ಡಿಸೆಂಬರ್ ಅಂತ್ಯಕ್ಕೆ ವರದಿ ಮಂಡನೆಯಾಗಲಿದೆ.

 

ಹೊಸ ವರ್ಷದಲ್ಲಿ ಪರಿಷ್ಕೃತ ವೇತನ ಜಾರಿ ಯಾಗಲಿದ್ದು ಮೂಲ ವೇತನದಲ್ಲಿ ಡಿಎ ಶೇ. 25 ರಿಂದ 30ರಷ್ಟು ವಿಲೀನವಾಗಲಿದೆ.

 

ಇದರಿಂದ ಸುಮಾರು 6 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ ಮಂಡಳಿ ಪ್ರಾಧಿಕಾರಗಳ ಸಿಬ್ಬಂದಿ ಹಾಗೂ 4.50 ಲಕ್ಷ ಪಿಂಚಣಿದಾರಾರಿಗೆ ಅನು ಕೂಲವಾಗಲಿದೆ.17000 ಮೂಲವೇತನ ಡಿಎ ವಿಲೀನವಾದಾಗ 21 ಸಾವಿರ ರೂ.ಗೆ ಏರಿಕೆ ಯಾಗಲಿದೆ.ರಾಜ್ಯದಲ್ಲಿ ಆರನೇ ವೇತನ ಆಯೋಗದ ಶಿಫಾರಸಿನ ಅನ್ವಯ ಸರ್ಕಾರಿ ನೌಕರರಿಗೆ ವೇತನ ನೀಡುತ್ತಿದ್ದು

 

7ನೇ ವೇತನ ಆಯೋಗ ರಚನೆಗೆ ಮತ್ತು ಕೇಂದ್ರ ಸರ್ಕಾರ ನೌಕರರಿಗೆ ಸಮನಾದ ವೇತನ ಭತ್ಯೆ ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದ್ದು,ಈ ನಿಟ್ಟಿನಲ್ಲಿ ಅಧಿಕಾರಿಗಳ ಸಮಿತಿ ರಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗು ತ್ತದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.