ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೌಕರರಿಗೆ ಪ್ರಭಾರಿ ಭತ್ಯೆ ಪರಿಷ್ಕರಣೆ ಮಾಡಿ ಆದೇಶ

Suddi Sante Desk
ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೌಕರರಿಗೆ ಪ್ರಭಾರಿ ಭತ್ಯೆ ಪರಿಷ್ಕರಣೆ ಮಾಡಿ ಆದೇಶ

ಹೌದು ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಪ್ರಭಾರ ಭತ್ಯೆಗಳನ್ನು ಇದೀಗ ರಾಜ್ಯ ಸರ್ಕಾರ ಪರಿಷ್ಕರಿಸಿ ಆದೇಶಿಸಿದೆ.ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ.ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು ಸರ್ಕಾರಿ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಾಗಲೀ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆಗೆ ಬೇರೊಂದು ಹುದ್ದೆಯ ಹೆಚ್ಚಿನ ಪ್ರಭಾರದಲ್ಲಿರಿಸಿದಾಗ ಆ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತದಲ್ಲಿ ಮೂರು ತಿಂಗಳವರೆಗೆ ಶೇ.7.5 ದರದಲ್ಲಿ ಆ ನಂತ್ರದ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಶೇ 15ರ ದರದಲ್ಲಿ ಪ್ರಭಾರ ಭತ್ಯೆಯನ್ನು ನಿಗದಿಪಡಿಸಿ ಆದೇಶಿಸಲಾಗಿದೆ.ಇದೀಗ ಸರ್ಕಾರದ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು ಸುಗಮ ಆಡಳಿತಕ್ಕಾಗಿ ಹಲವಾರು ಸಿಬ್ಬಂದಿಗಳನ್ನು ಒಂದಕ್ಕಿತ ಹೆಚ್ಚಿನ ಹುದ್ದೆಗಳಲ್ಲಿ ಅಧಿಕ ಪ್ರಭಾರ ಸಮವರ್ತಿ ಪ್ರಭಾರದಲ್ಲಿ ಇರಿಸಲಾಗಿದೆ.ಇನ್ಈನೂ ಅಧಿಕಾರಿಗಳು ಹೆಚ್ಚಿನ ಕಾರ್ಯಭಾರದ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಈ ಅಧಿಕಾರಿ, ನೌಕರರುಗಳಿಗೆ ಪ್ರಭಾರ ಭತ್ಯೆ ಮಂಜೂರು ಮಾಡಲು ಹಾಲಿ ಅನುಸರಿಸುತ್ತಿರುವ ಕಾರ್ಯವಿಧಾನದ ಜಟಿಲತೆಯಿಂದಾಗಿ ಹಲವು ಸಂದರ್ಭಗಳಲ್ಲಿ ಪ್ರಭಾರ ಭತ್ಯೆ ಪಡೆಯುವುದು ಬಹಳ ಕಷ್ಟಕರವಾಗುತ್ತಿದೆ. ಈ ಎಲ್ಲವನ್ನು ಪರಿಶೀಲಿಸಿ, ಈ ಕಾರ್ಯವಿಧಾನವನ್ನು ಸರಳಗೊಳಿಸುವ ನಿಟ್ಟಿನಲ್ಲಿ, ಪ್ರಸ್ತುತ ಎರಡು ಹಂತದಲ್ಲಿ ನೀಡುತ್ತಿರುವ ಪ್ರಭಾರ ಭತ್ಯೆಯನ್ನು ವಿಲೀನಗೊಳಿಸಿ, ಒಂದೇ ಹಂತದಲ್ಲಿ ನೀಡುವ ಬಗ್ಗೆ ಈ ಕೆಳಕಂಡಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 32 ಮತ್ತು 68ರಡಿಯಲ್ಲಿ ಸರ್ಕಾರಿ ಅಧಿಕಾರಿ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಿ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆಗೆ ಬೇರೊಂದು ಹುದ್ದೆಯಲ್ಲಿ ಹೆಚ್ಚಿನ ಪ್ರಭಾರದಲ್ಲಿರಿಸಿದ್ದ ಸಂದರ್ಭ ದಲ್ಲಿ ಅಂತಹ ಪ್ರಭಾರದಲ್ಲಿರಿಸಿದ ಅಧಿಕಾರಿಯ ಮೂಲ ವೇತನದ ಶೇಕಡಾ 15ರ ದರದಲ್ಲಿ ಪ್ರಭಾರ ಭತ್ಯೆಯನ್ನು ನಿಗಧಿಪಡಿಸಿ ಆದೇಶಿಸಿದ್ದಾರೆ.ಇನ್ನೂ ಅಂದಹಾಗೇ ಪ್ರಭಾರ ಭತ್ಯೆಯನ್ನು ಪ್ರತಿ ಮಾಸಿಕ ವೇತನದ ಬಿಲ್ಲಿನೊಂದಿಗೆ ಪಾವತಿಸಬೇಕು ಪ್ರಭಾರದಲ್ಲಿ ಇರಿಸಿದ ಹುದ್ದೆಗೆ ಸಂಬಂಧಪಟ್ಟ ಡಿಡಿಒ ಅಥವಾ ವರದಿ ಪ್ರಾಧಿಕಾರವು ಯಾವುದು ಉನ್ನತವೋ ಅಂತಹ ಅಧಿಕಾರಿ ಮಂಜೂರು ಮಾಡುವುದು ಎಂದು ಹೇಳಿದ್ದಾರೆ

ಇದಲ್ಲದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ನೇಮಿಸಲಾದ ಇಲಾಖಾ ಮುಖ್ಯಸ್ಥರ ಹಂತದಲ್ಲಿನ ಪ್ರಭಾರದ ಸಂದರ್ಭದಲ್ಲಿ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲು ಡ್ರಾ ಮಾಡಲು ಇಲಾಖೆ ಮುಖ್ಯಸ್ಥರು ಸಕ್ಷಮರಾಗಿರುತ್ತಾರೆ ಎಂದು ಹೇಳಿದೆ.

ಸಚಿವಾಲಯದ ಅಧಿಕಾರಿ,ಸಿಬ್ಬಂದಿಗಳಿಗೆ ಸಂದರ್ಭಾನುಸಾರ ಐಆರ್ ಎಲ್ ಎ ಶಾಖೆಗಳಿಂದ ಮಾಸಿಕ ವೇತನದ ಬಿಲ್ ಗಳೊಂದಿಗೆ ಪ್ರಭಾರ ಭತ್ಯೆಯನ್ನು ಸೆಳೆದು ಪಾವತಿಸಬೇಕು. ಪ್ರಭಾರ ಭತ್ಯೆಯ ಪರಿಷ್ಕೃತ ದರಗಳು ದಿನಾಂಕ 01-09-2022ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.