ಬೆಂಗಳೂರು –
ಗ್ರಾಮೀಣ ಕೃಪಾಂಕದ ವಿಶೇಷ ನಿಯಮಗಳ ಅನ್ವಯ ನೇಮಕಗೊಂಡ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ 2013ರಲ್ಲಿ ಸಚಿವ ಸಂಪುಟ ಸಭೆ ತೆಗೆದುಕೊಂಡ ನಿರ್ಣ ಯದಂತೆ ಎರಡು ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡಲು ಸರ್ಕಾರ ಸಮ್ಮತಿಸಿದೆ.
1997-98ನೇ ಸಾಲಿನಲ್ಲಿ ಶೇ 10ರಷ್ಟು ಗ್ರಾಮೀಣ ಕೃಪಾಂಕ ಪಡೆದು ನೇಮಕವಾಗಿದ್ದ ಶಿಕ್ಷಕರ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಪರಿಷ್ಕರಿಸಿ ನಗರ ಪ್ರದೇಶದ ಅರ್ಹ ಅಭ್ಯರ್ಥಿಗಳಿಗೆ 2003ರಲ್ಲಿ ಅವಕಾಶ ಕಲ್ಪಿಸ ಲಾಗಿತ್ತು.ಆಗ ಪಟ್ಟಿಯಿಂದ ಹೊರಗುಳಿದ 1,700 ಶಿಕ್ಷಕ ರನ್ನು ವಜಾಗೊಳಿಸಲಾಗಿತ್ತು.ನಾಲ್ಕು ತಿಂಗಳ ನಂತರ ಮಾನವೀಯತೆ ದೃಷ್ಟಿಯಿಂದ ಅವರಿಗೆ ಮತ್ತೆ ಕೆಲಸ ನೀಡಲಾಗಿತ್ತು.ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆದ ನಗರ ಪ್ರದೇಶದ ಅಭ್ಯರ್ಥಿಗಳ ಸೇವೆಯನ್ನು 1997-98ರಿಂದಲೇ ಪೂರ್ವಾನ್ವಯ ಮಾಡಿದ್ದ ಸರ್ಕಾರ ಮರು ನೇಮಕಗೊಂಡ ಗ್ರಾಮೀಣ ಶಿಕ್ಷಕರ ವಿಷಯದಲ್ಲಿ ತಾರತಮ್ಯ ನೀತಿ ಅನುಸ ರಿಸಿತ್ತು ಈ ತಾರತಮ್ಯದ ವಿರುದ್ಧ ಶಿಕ್ಷಕರು ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ.ಗ್ರಾಮೀಣ ಕೃಪಾಂಕ ಆಧಾರಿತ ನೌಕರರು ಗುರುವಾರ ಸಲ್ಲಿಸಿದ ಮನವಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಜತೆ ನಡೆಸಿದ ಮಾತುಕತೆಯ ಫಲವಾಗಿ ಸರ್ಕಾರ ಸೇವಾ ಜ್ಯೇಷ್ಠತೆ, ಪಿಂಚಣಿಗೆ ಹಿಂದಿನ ಸೇವೆ ಪರಿಗಣಿಸಲು ಒಪ್ಪಿಗೆ ನೀಡಿದೆ.