ಬೆಂಗಳೂರು –
ಪರೀಕ್ಷೆ ಮೂಲಕ ಭಡ್ತಿ ನೀಡಲಾಗುತ್ತಿದೆ ಎಂಬ ಆತಂಕದಲ್ಲಿ ದ್ದ ನಾಡಿನ ಶಿಕ್ಷಕರಿಗೆ ಶಿಕ್ಷಣ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ ಹೌದು ಪರೀಕ್ಷಾ ರಹಿತವಾಗಿ ಜೇಷ್ಠತೆಯ ಆಧಾರದ ಮೇಲೆಯೇ PST ಯಿಂದ GPT ಹುದ್ದೆಗೆ ಬಡ್ತಿ ನೀಡುವುದಾಗಿ ಮಾನ್ಯ ಶಿಕ್ಷಣ ಸಚಿವರು ಇಂದಿನ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಮತ್ತು ಬಡ್ತಿಯ ಪ್ರಮಾಣ(%)ಅನ್ನು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ತಿಳಿಸಿದರು.ಇದರೊಂದಿಗೆ ಆತಂಕದಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಸಚಿವರು ಗುಡ್ ನ್ಯೂಸ್ ನೀಡಿದರು.
ಈ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಅಂತಿಮ ಮಾಡೊದಾಗಿ ಹೇಳಿದರು ಅತ್ತ ಈ ಒಂದು ಶುಭ ಸುದ್ದಿ ಹೊರಬೀಳುತ್ತಿದ್ದಂತೆ ಇತ್ತ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ನಿರಂತರ ಹೋರಾಟಕ್ಕೆ ಕೊಂಚ ಜಯ ಸಿಕ್ಕಿದೆ ಎಂದು ಹೇಳಲು ಹೆಮ್ಮೆ ಪಡುತ್ತಾ, ಸಂಘದ ಹೋರಾಟಕ್ಕೆ ಬೆಂಬಲ ನೀಡಿದ ಸರ್ವ ಶಿಕ್ಷಕರಿಗೆ ಧನ್ಯವಾದಗಳು ಎಂಬ ಮಾತುಗಳು ಕೇಳಿ ಬರುತ್ತಿವೆ.ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ(ರಿ) ಧಾರವಾಡ