ಸರ್ಕಾರಿ ಶಾಲೆಗಳಲ್ಲಿ ವಿಶೇಷವಾಗಿ ಕಂಡು ಬಂದ ಮಗ್ಗಿ ಆಟ ಹುಗ್ಗಿ ಊಟ.ಅದಲ್ ಬದಲ್ ಕಂಚಿ ಕದಲ್ ಕಾರ್ಯಕ್ರಮ – ಮಕ್ಕಳ ಪ್ರತಿಭೆಗೆ ಸಾಕ್ಷಿಯಾಯಿತು ಗೋವನಕೊಪ್ಪ ಗ್ರಾಮದ ಸರ್ಕಾರಿ ಶಾಲೆ

Suddi Sante Desk
ಸರ್ಕಾರಿ ಶಾಲೆಗಳಲ್ಲಿ ವಿಶೇಷವಾಗಿ ಕಂಡು ಬಂದ ಮಗ್ಗಿ ಆಟ ಹುಗ್ಗಿ ಊಟ.ಅದಲ್ ಬದಲ್ ಕಂಚಿ ಕದಲ್ ಕಾರ್ಯಕ್ರಮ – ಮಕ್ಕಳ ಪ್ರತಿಭೆಗೆ ಸಾಕ್ಷಿಯಾಯಿತು ಗೋವನಕೊಪ್ಪ ಗ್ರಾಮದ ಸರ್ಕಾರಿ ಶಾಲೆ

ಧಾರವಾಡ

ಹೌದು ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಅಣ್ಣಿಗೇರಿಯ ಮಜಾಗಟಾ ಮಾಸ್ತರ್, ಗಣಿತ ತಜ್ಞರು ಎಂ ಎಸ್ ಪೂಜಾರ ಅವರಿಂದ ಶಾಲಾ ಮಕ್ಕಳಿಗೆ ಮಗ್ಗಿ ಆಟ ಹುಗ್ಗಿ ಊಟ ಹಾಗೂ ಪದ ಬದಲಾಟ,ಅದಲ್ ಬದಲ್ ಕಂಚಿ ಕದಲ್ ಕಾರ್ಯಕ್ರಮವನ್ನು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ,  ಮಕ್ಕಳು ಆಲಿಸುವುದನ್ನು ಮತ್ತು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಂಡು ಓದುವುದರ ಕಡೆಗೆ ಹೆಚ್ಚು ಗಮನಹರಿಸಬೇಕು ಮೊಬೈಲ್ ನಿಂದ ದೂರವಿರಬೇಕು, ಹಿರಿಯರು, ಶಿಕ್ಷಕರಿಗೆ ಗೌರವ ನೀಡಬೇಕು ಎಂದರು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಧಾರವಾಡದ ಅಶ್ವಿನಿ ಪಿಜಿಯ ಮುಖ್ಯಸ್ಥ ಮಾಲತೇಶ ಎಸ್ ನಾಡಗೌಡ,ಮಾತನಾಡಿ ಎಂ ಎಸ್ ಪೂಜಾರವ ರಲ್ಲಿರುವ ಗಣಿತ ಜ್ಞಾನ ಅತ್ಯದ್ಭುತವಾಗಿದೆ ಎಂದರು

ಈ ಇಳಿ ವಯಸ್ಸಿನಲ್ಲಿ ಸಹ ಆಸಕ್ತಿಯಿಂದ ಸ್ವಯಂ ಪ್ರೇರಣೆಯಿಂದ ತಮ್ಮಲ್ಲಿರುವ ಜ್ಞಾನವನ್ನು ಹಂಚುವ ಕಾರ್ಯ ನಿಜಕ್ಕೂ ಮೆಚ್ಚುವಂತಹುದು ಇವರ ಜ್ಞಾನದ ಸದುಪಯೋಗವನ್ನು ಪ್ರತಿಯೊ ಬ್ಬರೂ ಪಡೆದುಕೊಳ್ಳಬೇಕು ಎಂದು ಹೇಳಿ ನಾನು ಸಹ ಪ್ರತಿ ವರ್ಷ ಈ ಶಾಲೆಯ ಒಬ್ಬ ಆದರ್ಶ ಮಗುವಿಗೆ ಅವರ ಶೈಕ್ಷಣಿಕ ಪ್ರಗತಿಗಾಗಿ ಐದು ಸಾವಿರ ಪ್ರತಿಭಾ ಪುರಸ್ಕಾರ ನೀಡುವೆ ಎಂದರು, ಗಿಣಿರಾಮ ಧಾರಾವಾಹಿಯ ನಟಿ ಅನ್ನಪೂರ್ಣ ಉಂಡಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಶಹರ ಘಟಕದ ಪ್ರದಾನ ಕಾರ್ಯದರ್ಶಿ ಎಂ ಆರ್ ಕಬ್ಬೇರ, ನಂದ ಕುಮಾರ ದ್ಯಾಪೂರ ಮಲ್ಲಿಕಾರ್ಜುನ ಉಪ್ಪಿನ ಸಿ ಆರ್ ಪಿ ಎಂ ಎನ್ ಮುಲ್ಲಾನವರ ಹೆಬ್ಬಳ್ಳಿ ಪಾರ್ಮ ಶಾಲೆಯ ಮುಖ್ಯ ಶಿಕ್ಷಕ ಕಮ್ಮಾರ ಮಾತ ನಾಡಿದರು.

ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ಭೀಮಪ್ಪ ಚೌಡಣ್ಣವರ ಅಧ್ಯಕ್ಷತೆಯನ್ನು ವಹಿಸಿದ್ದರು, ಮುಖ್ಯ ಶಿಕ್ಷಕ ಐಐ ಮುಲ್ಲಾನವರ ಸ್ವಾಗತಿಸಿದರು, ಎಂ ವಿ ಹಟ್ಟಿಹೋಳಿ ಪುಟ್ಬಾಲ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ನಾಲ್ಕು ಜನ ಮಕ್ಕಳಿಗೆ ರೋಹನ್ ಕೇರ್ ಫೌಂಡೇಶನ್ ನೀಡಿದ ಹಣವನ್ನು ವಿತರಿಸಿದರು,ಕೆ ಆರ್ ಜೋಶಿ ನಿರೂಪಿಸಿದರು, ಎಲ್ ಐ ಲಕ್ಕಮ್ಮನವರ ವಂದಿಸಿ ದರು.ಇದರೊಂದಿಗೆ ಗೋವನಕೊಪ್ಪ ಗ್ರಾಮದಲ್ಲಿ ಮಗ್ಗಿ ಆಟ ಹುಗ್ಗಿ ಊಟ ಹಾಗೂ ಅದಲ್ ಬದಲ್ ಕಂಚಿ ಕದಲ್ ಕಾರ್ಯಕ್ರಮ ಯಶಸ್ವಿ ಯಾಯಿತು

ಸುದ್ದಿ ಸಂತೆ ನ್ಯೂಸ್ ಹೆಬ್ಬಳ್ಳಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.