ಬೆಳಗಾವಿ –
ಸರ್ಕಾರಿ ಶಾಲೆಗಳ ವಿಕಾಸಕ್ಕೆ ಸರ್ಕಾರ ಬದ್ಧ ಶಿಕ್ಷಣ ಸಚಿವರ ಭರವಸೆ -ಚಿತ್ರಕಲಾ ಪ್ರದರ್ಶನ ವೀಕ್ಷಿಸಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾ ರಪ್ಪ ಹೌದು ರಾಜ್ಯ ಸರಕಾರಿ ಸ್ವಾಮ್ಯದ ಪ್ರಾಥ ಮಿಕ ಮತ್ತು ಪ್ರೌಢ ಶಾಲೆಗಳ ವಿಕಾಸಕ್ಕೆ ಸರಕಾರ ಸಂಪೂರ್ಣ ಬದ್ಧವಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು
ಸುವರ್ಣ ವಿಧಾನಸೌಧದಲ್ಲಿ ನಡೆದಿರುವ ವಿಧಾನ ಮಂಡಳದ ಅಧಿವೇಶನದ ಕಲಾಪ ವೀಕ್ಷಣೆಗೆ ಆಗಮಿಸುವ ಶಾಲಾ ವಿದ್ಯಾರ್ಥಿಗಳು ಚಿತ್ರಕಲಾ ಕೃತಿಗಳನ್ನು ವೀಕ್ಷಿಸಿ ಹೊಸ ವಿಷಯ ಅರಿಯಲು ಅನುಕೂಲವಾಗುವಂತೆ ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯು
ಹಲಗಾದ ಭರತೇಶ ಪಬ್ಲಿಕ್ ಸೆಂಟ್ರಲ್ ಸ್ಕೂಲ್ ದಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಕೃತಿಗಳ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸರಕಾರಿ ಶಾಲಾ ಮಕ್ಕಳ ಹಾಜರಾತಿ ಸುಧಾರಣೆಗೆ ಶ್ರಮಿಸಿದ ಶಿಕ್ಷಕ-ಶಿಕ್ಷಕಿಯರಿಗೆ ಮೆಚ್ಚುಗೆ ಪತ್ರ ವಿತರಣೆ ಮಾಡಿ ಮಾತನಾಡಿದರು
ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳನ್ನು ಮುಚ್ಚಲು ಅವಕಾಶ ನೀಡುವದಿಲ್ಲ. ಕನ್ನಡ ಮಾಧ್ಯಮದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಬಲೀಕ ರಣಕ್ಕೆ ಸರಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮುಂದುವರೆಸುತ್ತದೆ ಎಂದರು.
ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರು ತಮ್ಮ ಕ್ರಿಯಾಶೀಲ ಬೋಧನೆ ಯೊಂದಿಗೆ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ವನ್ನು ಎತ್ತರಿಸಿ ಸಾರ್ವಜನಿಕರು ಸರಕಾರಿ ಶಾಲೆಗಳತ್ತ ಆಕರ್ಷಿತರಾಗುವಂತೆ ನಿರಂತರ ಶ್ರಮಿಸಬೇಕು ಎಂದೂ ಮಧು ಬಂಗಾರಪ್ಪ ನುಡಿದರು.
ಮೆಚ್ಚುಗೆ ಪತ್ರ ವಿತರಣೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸುಧಾರಣೆಗೆ ಹಾಗೂ ಮಕ್ಕಳ ಕಲಿವಿನಫಲ ಸಂವರ್ಧನೆಗೆ ಶ್ರಮಿಸಿದ ಮುಖ್ಯ ಶಿಕ್ಷಕರಿಗೆ ಹಾಗೂ ಅಧ್ಯಾಪಕರುಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯು ಕೊಡಮಾಡಿದ ಮೆಚ್ಚುಗೆ ಪತ್ರಗಳನ್ನು ಸಚಿವ ಮಧು ಬಂಗಾರಪ್ಪ ಇದೇ ಸಂದರ್ಭದಲ್ಲಿ ವಿತರಿಸಿದರು.
ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಆಯುಕ್ತರಾದ ಬಿ.ಬಿ. ಕಾವೇರಿ, ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತರಾದ ಜಯಶ್ರೀ ಶಿಂತ್ರಿ, ರಾಜ್ಯ ಪ್ರೌಢ ಶಿಕ್ಷಣ ನಿರ್ದೇಶಕ ಕೃಷ್ಣಾಜಿ ಕರಿಚಣ್ಣವರ, ಜಂಟಿ ನಿರ್ದೇಶಕ ಎಂ.ಎಂ. ಸಿಂಧೂರ, ಡಿಡಿಪಿಐ ಮೋಹನಕುಮಾರ ಹಂಚಾಟೆ,ಬಿಇಓ ಲೀಲಾವತಿ ಹಿರೇಮಠ,
ಎಸ್.ಪಿ. ದಾಸಪ್ಪನವರ, ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ, ಜಿಲ್ಲೆಯ ವಿವಿಧ ತಾಲೂಕುಗಳ ಇಲಾಖಾ ಅಧಿಕಾರಿಗಳು, ಎ.ಎನ್ ಪ್ಯಾಟಿ, ರವಿ ಬಳಿಗಾರ, ಅಜಿತ ಮನ್ನಿಕೇರಿ, ಸಲಿಂ ನದಾಫ್, ರವಿ ಮೆಳವಂಕಿ, ಮುಖ್ಯ ಶಿಕ್ಷಕಿ ದೇವ. ಯಾನಿ ದೇಸಾಯಿ, ನಳಿನಿ ಪಾಟೀಲ, ಶಂಕರ ತಾರಾಪೂರ ಇದ್ದರು.
ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯು ಈ ಹಿಂದೆ ಧಾರವಾಡದಲ್ಲಿ ಸಂಘಟಿಸಿದ್ದ ಗಾಂಧೀಜಿ 150 : ಕುಂಚ ನಮನ’ ಚಿತ್ರಕಲಾ ಕೃತಿಗಳ ಕಾರ್ಯಾಗಾರ, ‘ನಕಲು ಮುಕ್ತ ಪರೀಕ್ಷೆಗಳು’ ಎಂಬ ಪ್ರಧಾನ ಆಶಯದ ಪರಿಕಲ್ಪನೆಯಲ್ಲಿ
ನಡೆದ ಚಿತ್ರಕಲಾಕೃತಿಗಳ ಕಾರ್ಯಾಗಾರ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಬದುಕು-ಸಾಧನೆಯ ಕುರಿತು ಪ್ರೌಢ ಶಾಲಾ ಚಿತ್ರಕಲಾ ಅಧ್ಯಾಪಕರು ರಚಿಸಿದ ವಿಶಿಷ್ಟ ಚಿತ್ರಕಲಾ ಕೃತಿಗಳನ್ನು ಸಚಿವರು ವೀಕ್ಷಿಸಿ ಚಿತ್ರಕಲಾ ಶಿಕ್ಷಕರ ಕಲಾಭಿವ್ಯಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..