ಕಲಬುರಗಿ –
ಜಿಲ್ಲಾಡಳಿತವು ಅಧಿಕಾರಿಗಳು ಹಾಗೂ ನೌಕರರಿಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಏಪ್ರಿಲ್ 26ರಂದು ಕಲಬುರಗಿ ನಗರದಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಸಂದ ರ್ಭದಲ್ಲಿ 20 ಜನರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಿತ್ತು.ಆದರೆ ಅದರೊಂದಿಗೆ ನೀಡಬೇಕಿದ್ದ ಪ್ರಶಸ್ತಿ ಹಣವನ್ನು ಇನ್ನೂ ನೀಡಿಲ್ಲ.ಜಿಲ್ಲಾಡಳಿತವೇ ಪ್ರತಿ ವರ್ಷ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗ ಳಲ್ಲಿ ನೌಕರರ ದಿನಾಚರಣೆ ಆಯೋಜಿಸಿ ಅಂದೇ ಚೆಕ್ ನೀಡಲಾಗಿದೆ.ಆದರೆ ಕಲಬುರಗಿಯಲ್ಲಿ ಮಾತ್ರ ಚೆಕ್ ನೀಡ ದಿರುವುದು ಸಧ್ಯ ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಶಸ್ತಿ ಪುರಸ್ಕೃತರೊ ಬ್ಬರು ಪ್ರಶಸ್ತಿ ಎಂದಾಗ ಸಹಜವಾಗಿಯೇ ಒಂದು ಬಗೆಯ ಖುಷಿ ಇದ್ದೇ ಇರುತ್ತದೆ.ಪ್ರಶಸ್ತಿ ಫಲಕದೊಂದಿಗೆ ಹಣದ ಚೆಕ್ ನೀಡುತ್ತಾರೆ ಎಂಬುದು ನಮ್ಮ ನಿರೀಕ್ಷೆಯಾಗಿತ್ತು. ಆದರೆ ಚೆಕ್ ಕೊಟ್ಟಿಲ್ಲ.ಏಕೆ ಎಂಬ ಬಗ್ಗೆ ಕಾರಣವನ್ನೂ ನೀಡಿಲ್ಲ ಇದರಿಂದಾಗಿ ಮನೆಯಲ್ಲಿ ಉತ್ತರ ಹೇಳಬೇಕಿದೆ ಎಂದರು.
ಇನ್ನೂ ಈ ಒಂದು ವಿಚಾರ ಕುರಿತು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ ಮಾತನಾಡಿ 2020-21ನೇ ಸಾಲಿನಲ್ಲಿ 10 ಜನರಿಗೆ
ತಲಾ ₹ 10 ಸಾವಿರ ಹಾಗೂ 2021-22ನೇ ಸಾಲಿನಲ್ಲಿ ಆಯ್ಕೆಯಾದ 10 ಜನರಿಗೆ ತಲಾ ₹ 25 ಸಾವಿರ ಮೊತ್ತದ ಚೆಕ್ ಬರಬೇಕಿತ್ತು. ಆದರೆ, ಸರಣಿ ರಜೆಗಳು ಬಂದಿದ್ದರಿಂದ ಹಾಗೂ ಅವಸರದಲ್ಲಿ ನಾವು ಕಾರ್ಯಕ್ರಮ ಆಯೋಜಿಸಿದ್ದ ರಿಂದ ಸರ್ಕಾರದಿಂದ ಜಿಲ್ಲಾಧಿಕಾರಿ ಅವರ ಖಾತೆಗೆ ಹಣ ಬಂದಿಲ್ಲ.ಶೀಘ್ರವೇ ಹಣ ಬರಲಿದ್ದು ಪುರಸ್ಕೃತರಿಗೆ ನೀಡಲಿ ದ್ದೇವೆ ಎಂದು ಸ್ಪಷ್ಟಪಡಿಸಿದರು.ಪಿ.ಡಿ.ಖಾತೆ ಬಂದ್ ಆಗಿದ್ದ ರಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂ ದ ಬರಬೇಕಿದ್ದ ಪ್ರಶಸ್ತಿಯ ಹಣ ಬಂದಿಲ್ಲ.ಎರಡು-ಮೂರು ದಿನಗಳಲ್ಲಿ ಹಣ ಖಾತೆಗೆ ಜಮಾ ಆಗಲಿದೆ