ಚಿಕ್ಕಬಳ್ಳಾಪುರ –
ಹೌದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರೊಬ್ಬರ ಕಾರೊಂದು ಅಪಘಾತ ವಾಗಿ ಸ್ಥಳದಲ್ಲೇ ವ್ಯಕ್ತಿ ಯೊಬ್ಬರು ಮೃತರಾದ ಘಟನೆ ಚಿಕ್ಕಬಳ್ಳಾಪುರ ದಲ್ಲಿ ನಡೆದಿದೆ.ಹೌದು ಆರೋಗ್ಯ ಇಲಾಖೆ ಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತಿದ್ದ 56 ವರ್ಷದ ಸುರೇಶ್ ಅನ್ಯ ಕೆಲಸದ ನಿಮಿತ್ತ ಪೆಟ್ರೋಲ್ ಬಂಕ್ ಮುಂದೆ ಹೋಗುತ್ತಿದ್ದಾಗ ವೇಗವಾಗಿ ಬಂದ ಜನಾರ್ದನ್ ರೆಡ್ಡಿ ಎಂಬುವರಿಗೆ ಸೇರಿದ ಕಾರು ಡಿಕ್ಕಿ ಹೊಡೆದಿದೆ.

ಹೌದು ಜಿಲ್ಲಾಧಿಕಾರಿ ಕಚೇರಿ ಸಮೀಪವಿರುವ ಇಂಡಿಯನ್ ಪೆಟ್ರೋಲ್ ಬಂಕ್ ಮುಂಭಾಗ ಬೈಕ್ ಮತ್ತು ಇನ್ನೋವಾ ಕಾರು ನಡುವೆ ಡಿಕ್ಕಿ ಸಂಭವಿಸಿದ್ದು ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಚಿಂತಾಮಣಿ ತಾಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜನಾರ್ದ ನ್ ರೆಡ್ಡಿಯೊಂದಿಗೆ ಮೂವರು ಇನ್ನೋವಾ ಕಾರಿನಲ್ಲಿ ಚಿಂತಾಮಣಿಯಿಂದ ಚಿಕ್ಕಬಳ್ಳಾಪುರ ನಗರಕ್ಕೆ ಹೋಗುತ್ತಿ ದ್ದರು.

ಇದೇ ವೇಳೆ ದೊಡ್ಡಬಳ್ಳಾಪುರದ ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತಿದ್ದ 56 ವರ್ಷದ ಸುರೇಶ್ ಅನ್ಯ ಕೆಲಸದ ನಿಮಿತ್ತ ಪೆಟ್ರೋಲ್ ಬಂಕ್ ಮುಂದೆ ಹೋಗುತ್ತಿದ್ದಾಗ ವೇಗವಾಗಿ ಬಂದ ಜನಾ ರ್ದನ್ ರೆಡ್ಡಿ ಕಾರು ಡಿಕ್ಕಿ ಹೊಡೆದಿದೆ.ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.