NPS ರದ್ದು ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಬಜೆಟ್ ನಲ್ಲಿ ನಿರಾಸೆ ಹೋರಾಟಕ್ಕೆ ನಿರ್ಧಾರ ನಾಳೆ ನಿರ್ಧಾರವಾಗಲಿದೆ ಹೋರಾಟದ ಭವಿಷ್ಯ

Suddi Sante Desk
NPS ರದ್ದು ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಬಜೆಟ್ ನಲ್ಲಿ ನಿರಾಸೆ ಹೋರಾಟಕ್ಕೆ ನಿರ್ಧಾರ ನಾಳೆ ನಿರ್ಧಾರವಾಗಲಿದೆ ಹೋರಾಟದ ಭವಿಷ್ಯ

ಬೆಂಗಳೂರು

ರಾಜ್ಯ ಸರ್ಕಾರದ ವಿರುದ್ಧ ರಾಜ್ಯದ ಸರ್ಕಾರಿ ನೌಕರರು ಸಿಡಿದೆದ್ದಿದ್ದಾರೆ.ಹೌದು ರಾಜ್ಯ ಸರ್ಕಾರಿ ನೌಕರರ ವೇತನ,ಭತ್ಯೆ ಪರಿಷ್ಕರಣೆ ಎನ್.ಪಿ.ಎಸ್. ರದ್ದು ಮಾಡಿ ಒಪಿಎಸ್ ಮರು ಜಾರಿ ಬಗ್ಗೆ ರಾಜ್ಯ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡದ ಹಿನ್ನೆಲೆಯಲ್ಲಿ ಹೋರಾಟ ನಡೆಸಲು ಸರ್ಕಾರಿ ನೌಕರರು ಮುಂದಾಗಿದ್ದಾರೆ.

ಫೆಬ್ರವರಿ 21 ರಂದು ಸಂಜೆ 5 ಗಂಟೆಗೆ ಕಬ್ಬನ್ ಪಾರ್ಕ್ ನಲ್ಲಿರುವ ನೌಕರರ ಸಂಘದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆ ಕರೆಯಲಾಗಿದೆ. ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಈ ಒಂದು ಸಭೆಯನ್ನು ಕರೆದಿದ್ದಾರೆ ವೇತನ ಪರಿಷ್ಕ ರಣೆ, ಎನ್.ಪಿ.ಎಸ್. ರದ್ದು ಮಾಡುವ ಬಗ್ಗೆ ನಿರೀಕ್ಷೆ ಯಲ್ಲಿದ್ದ ನೌಕರರಿಗೆ ಬಜೆಟ್ ನಿರಾಶದಾಯಕ ವಾಗಿದ್ದು ಹೋರಾಟ ಅನಿವಾರ್ಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.

ಫೆಬ್ರವರಿ 21 ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ವೃಂದ ಸಂಘಗಳ ಅಧ್ಯಕ್ಷರು,ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ನಡೆಸಿ ಮುಂದಿನ ಹೋರಾಟದ ರೂಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.