ಬೆಂಗಳೂರು –
ನಾಳೆ ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿಯೊಂದನ್ನು ನೀಡಲಿದೆ ಅಂತೆ.ಹೌದು ಈಗಾಗಲೇ ರಾಜ್ಯದ ಸರ್ಕಾರಿ ನೌಕರ ರ ತುಟ್ಟಿ ಭತ್ಯೆ ಹೆಚ್ಚಳ ವಿಚಾರ ಕುರಿತು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಡತಕ್ಕೆ ಒಪ್ಪಿಗೆ ನೀಡಿದ್ದಾರಂತೆ.

ಮಾನ್ಯ ಸರ್ಕಾರಿ ನೌಕರರ ಆದ್ಯ ಗಮನಕ್ಕೆ,
✍? ದಿನಾಂಕ:01-07-2021 ರಿಂದ ಅನ್ವಯವಾಗುವಂತೆ ಶೇಕಡಾ 10.25 ತುಟ್ಟಿಭತ್ಯೆ ಮಂಜೂರಾತಿ ಕಡತವು ಮಾನ್ಯ ಮುಖ್ಯ ಮಂತ್ರಿಗಳಿಂದ ಅನುಮೋದನೆಗೊಂಡಿದ್ದು ನಾಳೆ ಆದೇಶ ಹೊರಬೀಳಲಿದೆ ಎಂದು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಮೊನ್ನೆ ಮೊನ್ನೆಯಷ್ಟೇ ಒಂದು ಸುದ್ದಿ ನೀಡಿರುವ ಯಡಿಯೂರಪ್ಪ ಅವರು ಈಗ ಮತ್ತೊಂದು ಸಿಹಿ ಸುದ್ದಿ ಯನ್ನು ರಾಜ್ಯದ ಸರ್ಕಾರಿ ನೌಕರರಿಗೆ ನೀಡುತ್ತಿದ್ದು ಇದರೊಂದಿಗೆ ವರ್ಗಾವಣೆ ವಿಚಾರದಲ್ಲಿ ಸರಿಯಾಗಿ ಆದರೆ ನಾಡಿನ ಶಿಕ್ಷಕರು ನೆಮ್ಮದಿ ಆಗಿರುತ್ತಾರೆ.