ಬೆಂಗಳೂರು –
ಒಂದು ಕಡೆ ಕೊನೋನಾ ಎರಡನೇ ಮಹಾಮಾರಿ ಯ ಭೀತಿ ಮತ್ತೊಂದು ಕಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲಿನ ಪ್ರಮಾಣ ಇವೆಲ್ಲವುಗಳ ನಡುವೆ ಕರ್ತವ್ಯ ನಿಭಾಯಿಸಲು ಸರ್ಕಾರಿ ಪ್ರಾಥಮಿ ಕ ಶಾಲಾ ಶಿಕ್ಷಕರು ಪರದಾಡುತ್ತಿದ್ದಾರೆ.

ಸಿಕ್ಕಾಪಟ್ಟಿ ಕಾಡುತ್ತಿರುವ ಕೊನೋನಾ ಕಾಟದಿಂದ ಶಿಕ್ಷಕರ ಸಮುದಾಯವೇ ಭಯದಲ್ಲಿ ಕರ್ತವ್ಯವನ್ನು ನಿಭಾಯಿಸುವಂತಾಗಿದ್ದು ಹೀಗಾಗಿ ಮಾಡುವದಿದ್ದರೆ ಕೂಡಲೇ ಪರೀಕ್ಷೆಯನ್ನು ಮುಗಿಸಿ ಏಪ್ರೀಲ್ 10 ರಿಂದ ಬೇಸಿಗೆ ರಜೆಯನ್ನುನೀಡುವಂತೆ ಪ್ರಾಥಮಿಕ ಶಾಲ ಶಿಕ್ಷಕರ ಸಂಘವು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದೆ.

ದಿನದಿಂದ ದಿನಕ್ಕೆ ರಾಜ್ಯದಲ್ಲೂ ಕೂಡಾ ಬಿಸಿಲು ಜಾಸ್ತಿ ಆಗುತ್ತಿದ್ದು ಇದರೊಂದಿಗೆ ಮತ್ತೊಂದು ಕಡೆ ಕೊರೊನಾ ಎರಡನೇಯ ಅಲೆಯು ಹೆಚ್ಚಾಗುತ್ತಿದೆ ಹೀಗಾಗಿ ಭಯದಿಂದ ಕರ್ತವ್ಯ ಮಾಡುವಂತಾಗಿದೆ ಎಂದು ಶಿಕ್ಷಕರ ಸಮುದಾದವರು ಆತಂಕಗೊಂಡಿ ದ್ದಾರೆ.ಹೀಗಾಗಿ ಕೂಡಲೇ ಇವರು ಸಧ್ಯ ಶೈಕ್ಷಣಿಕ ವರುಷವನ್ನು ಮುಗಿಸಿ ಏಪ್ರೀಲ್ 10 ರಿಂದ ಬೇಸಿಗೆ ರಜೆಯನ್ನು ನೀಡುವಂತೆ ರಾಜ್ಯದ ಪ್ರಾಥಮಿಕ ಶಾಲಾ ನೌಕರರ ಸಂಘವು ಒತ್ತಾಯವನ್ನು ಮಾಡಿದೆ

ಈ ಹಿಂದೆ ಕೂಡಾ ಇದೇ ವಿಚಾರ ಕುರಿತಂತೆ ಶಿಕ್ಷಕರು ಕೂಡಾ ಒತ್ತಾಯವನ್ನು ಮಾಡಿದ್ದು ಈಗ ಮತ್ತೇ ಇದೇ ವಿಚಾರ ಕುರಿತಂತೆ ಧ್ವನಿ ಎತ್ತಿದ್ದು ಏಪ್ರೀಲ್ ತಿಂಗಳು ಆರಂಭಗೊಂಡು ಇನ್ನೇನು ಅರ್ಧ ತಿಂಗಳು ಮುಗಿಯುತ್ತಾ ಬಂದರೂ ಕೂಡಾ ಈವರೆಗೆ ಮಾತ್ರ ಈ ಕುರಿತಂತೆ ಸ್ಪಷ್ಟನೆ ಕೊಡುತ್ತಿಲ್ಲ ಹೀಗಾಗಿ ರಾಜ್ಯದ ಶಿಕ್ಷಕ ಸಮುದಾಯದವರು ಗೊಂದಲದಲ್ಲಿದ್ದು ಕೂಡಲೇ ಪರೀಕ್ಷೆ ಮುಗಿಸಿ ನಾಳೆಯಿಂದ ರಜೆಯನ್ನು ಘೋಷಣೆಯನ್ನು ಮಾಡುವಂತೆ ಶಿಕ್ಷಕರು ಒತ್ತಾಯ ನ್ನು ಮಾಡಿದ್ದಾರೆ