ಕೋಲಾರ –
ರಾಜ್ಯದ ಸರ್ಕಾರಿ ಶಾಲೆಯೊಂದು ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ.ಹೌದು ಕೋಲಾರ ಜಿಲ್ಲೆಯ ಮುಳಬಾ ಗಿಲು ಪಟ್ಟಣ ದಲ್ಲಿರುವ ಶಾಲೆಯೇ ಈಗ ವಿವಾದದ ಸುಳಿಯಲ್ಲಿ ಸಿಲುಕಿಕೊಂಡ ಆರೋಪವನ್ನು ಎದುರಿಸು ತ್ತಿದೆ.ಸೋಮೇಶ್ವರ ಪಾಳ್ಯದ ಬಳೇಚಂಗಪ್ಪ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂಬ ಒಂದು ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ ಕಳೆದ ಎರಡು ತಿಂಗಳಿಂದ ಶಾಲೆಯಲ್ಲಿ ಮಕ್ಕಳು ಪ್ರತಿ ಶುಕ್ರವಾರ ಸಾಮೂಹಿಕವಾಗಿ ಒಮ್ಮೆ ನಮಾಜ್ ಮಾಡುತ್ತಿ ದ್ದಾರಂತೆ ಈ ವಿಷಯ ತಿಳಿದು ಶಾಲೆಗೆ ಭೇಟಿ ನೀಡಿದ ಹಿಂದೂ ಸಂಘಟನೆ ಕಾರ್ಯಕರ್ತರು ನಮಾಜ್ ಮಾಡು ತ್ತಿರುವ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡಿ ದ್ದಾರೆ.
ಕಳೆದ ಎರಡು ತಿಂಗಳಿಂದ ಶಾಲೆಯಲ್ಲಿ ಮಕ್ಕಳು ಪ್ರತಿ ಶುಕ್ರವಾರ ಸಾಮೂಹಿಕವಾಗಿ ಒಮ್ಮೆ ನಮಾಜ್ ಮಾಡು ತ್ತಿದ್ದು ಈ ವಿಷಯ ತಿಳಿದು ಶಾಲೆಗೆ ಭೇಟಿ ನೀಡಿದ ಹಿಂದೂ ಸಂಘಟನೆ ಕಾರ್ಯಕರ್ತರು ನಮಾಜ್ ಮಾಡುತ್ತಿರುವ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡು ವೈರಲ್ ಮಾಡಿದ್ದು ಕಳೆದ ಎರಡು ತಿಂಗಳಿಂದ ಒಂದು ಧರ್ಮದವರಿಗೆ ಪ್ರಾರ್ಥನೆಗೆ ಸರ್ಕಾರಿ ಶಾಲೆಯಲ್ಲಿ ಅವ ಕಾಶ ನೀಡಿದ್ದಕ್ಕೆ ಮುಳಬಾಗಿಲು ತಾಲೂಕಿನ ಹಿಂದೂಪರ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿದ್ದು ಪ್ರತಿ ಶುಕ್ರವಾರ ಮಧ್ಯಾಹ್ನ 12 ರಿಂದ 1.30 ವರೆಗೂ ನಮಾಜ್ ಗೆ ಅವಕಾಶ ನೀಡಲಾಗಿದೆಯಂತೆ. ಇನ್ನೂ ಶಾಲೆಯಲ್ಲಿ ನಮಾಜ್ ಗೆ ಅವಕಾಶ ನೀಡಿರುವ ವಿಷಯ ಕುರಿತಂತೆ ಕ್ಷೇತ್ರ ಶಿಕ್ಷಣಾಧಿ ಕಾರಿಯವರನ್ನು ಪ್ರಶ್ನೆ ಮಾಡಿದಾಗ ಈ ಒಂದು ವಿಚಾರವು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಬಿಇಓ ಗಿರಿಜೇಶ್ಚರಿ ದೇವಿ ಹೇಳಿದ್ದಾರೆ. ಈ ಕುರಿತು ಮಾಹಿತಿ ಪಡೆಯಲಾಗುವುದು ಪ್ರತಿ ಶುಕ್ರವಾರ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಗೆ ಗೈರಾಗು ತ್ತಿದ್ದರು ಆದ್ದರಿಂದ ಶಾಲೆಯ ಒಂದು ಕೊಠಡಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈಗ ನಮಾಜ್ ಬಳಿಕ ಊಟ ಮಾಡಿದ ನಂತರ ತರಗತಿಗೆ ಹಾಜರಾಗುತ್ತಿದ್ದಾರೆ ಎಂದು ಶಿಕ್ಷಕರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಒಟ್ಟಾರೆ ಸರ್ಕಾರಿ ಶಾಲೆಯೊಂದರಲ್ಲಿ ಒಂದು ಧರ್ಮದವರಿಗೆ ಪ್ರಾರ್ಥನೆ ಮಾಡಲು ಅವಕಾಶ ವನ್ನು ನೀಡಿರುವ ಸರ್ಕಾರಿ ಶಾಲೆ ಸಧ್ಯ ವಿವಾವದಕ್ಕೆ ಸಿಲುಕಿದ್ದು ಇತ್ತ ಶಾಲೆಯ ಶಿಕ್ಷಕರು ಇಕ್ಕಟ್ಟಿನಲ್ಲಿ ಸಿಲುಕಿಕೊಂ ಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡ ಬೇಕು.