ಹುಬ್ಬಳ್ಳಿ –
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 16ಕ್ಕೆ ಪ್ರಾರಂ ಭವಾಗಲಿವೆ. ಆದರೆ ಈ ವರೆಗೂ ಪೂರ್ಣ ಪ್ರಮಾಣದಲ್ಲಿ ಪಠ್ಯ ಪುಸ್ತಕ ಮಾತ್ರ ಬಂದಿಲ್ಲ.ಬಂದಿರುವುದು ಬರೀ ಶೇ.34.19 ಮಾತ್ರ ಹೀಗಾಗಿ ಈ ಸಲವೂ ಪಠ್ಯ ಪುಸ್ತಕ ಬರುವುದು ವಿಳಂಬ ವಾಗಲಿವೆ.ಪುಸ್ತಕವಿಲ್ಲದೇ ಅದ್ಹೇಗೆ ಪಾಠ ಮಾಡುವುದು ಎಂಬ ಚಿಂತೆ ಶಿಕ್ಷಕರನ್ನು ಕಾಡುತ್ತ ಲಿದೆ.ಈ ಬಾರಿ ಪ್ರತಿ ವರ್ಷಕ್ಕಿಂತ 15 ದಿನ ಮುಂಚಿತವಾಗಿ ಶಾಲೆಗಳು ಆರಂಭ ವಾಗುತ್ತಿವೆ.ಕೊರೋನಾದಿಂದ ಎರಡು ವರ್ಷ ಸರಿಯಾಗಿ ಶಾಲೆಗಳು ನಡೆದಿಲ್ಲ.ಈ ವರ್ಷವಾದರೂ ಬೇಗ ತರಗತಿ ಪ್ರಾರಂಭಿಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಹೆಚ್ಚಿನ ರೀತಿಯಲ್ಲಿ ಸಾಧಿಸಬೇಕೆಂಬ ಇಚ್ಛೆ ಸರ್ಕಾರದ್ದು ಶಾಲೆಯ ನ್ನೇನೋ 15 ದಿನ ಮೊದಲು ಪ್ರಾರಂಭಿಸುತ್ತಿದೆ.ಆದರೆ ಪಠ್ಯ ಪುಸ್ತಕಗಳ ವ್ಯವಸ್ಥೆ ಮಾತ್ರ ಮಾಡಿಲ್ಲ.ಹಾಗೆ ನೋಡಿದರೆ ಶಾಲೆಗಳು ಪ್ರಾರಂಭವಾದ ದಿನವೇ ಮಕ್ಕಳಿಗೆ ಪುಸ್ತಕ ಕೊಡುವುದು ರೂಢಿ.ಇದು ಮಕ್ಕಳ ಅಪೇಕ್ಷೆ ಕೂಡ ಆಗಿರು ತ್ತದೆ.ಶಾಲೆ ಆರಂಭಕ್ಕೂ ಮುನ್ನವೇ ಎಲ್ಲರಿಗೂ ಪುಸ್ತಕಗ ಳನ್ನು ಸರಬರಾಜು ಮಾಡಲಾಗುತ್ತಿದೆ.
ಪುಸ್ತಕಗಳ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಬುಕ್ ಬ್ಯಾಂಕ್ ನ್ನು ಕೂಡ ಕಳೆದ ವರ್ಷ ಮಾಡಿದೆ ಕೆಲವೊಂದಿಷ್ಟು ಪುಸ್ತಕಗಳ ದಾಸ್ತಾನು ಕೂಡ ಇದೆ. ಆ ಪುಸ್ತಕಗಳನ್ನೆಲ್ಲ ಬಳಸಿದ ಮೇಲೂ ಧಾರವಾಡ ಜಿಲ್ಲೆಗೆ 1ರಿಂದ 10 ತರಗತಿ ಓದುವ ಮಕ್ಕಳಿಗೆ 19,62, 264 ಪುಸ್ತಕಗಳು ಬೇಕಿವೆ.ಇದರಲ್ಲಿ 16,06,431 ಉಚಿತವಾಗಿ ಹಂಚುವ ಪುಸ್ತಕವಾದರೆ 3,55,833 ಪುಸ್ತಕಗಳ ಮಾರಾಟ ಮಾಡುವಂತಹವು(ಖಾಸಗಿ ಶಾಲೆಗಳಿಗೆ ಸರಬರಾಜು ಮಾಡಬೇಕಾದ ಪುಸ್ತಕಗಳ ಸಂಖ್ಯೆ)ಈ ವರೆಗೆ ಜಿಲ್ಲೆಯಲ್ಲಿನ ಬ್ಲಾಕ್‌ಗಳು 5,78,555 ಪುಸ್ತಕಗಳನ್ನು ಮಾತ್ರ ಪಡೆದಂ ತಾಗಿದೆ.ಅಂದರೆ ಶೇ.34.19ರಷ್ಟುಪುಸ್ತಕಗಳ ಸರಬರಾಜು ಆದಂತಾಗಿದೆ.ಜಿಲ್ಲೆಗೆ 19,62,264 ಪುಸ್ತಕ ಪೈಕಿ ಇನ್ನೂ 13,83,709 ಪುಸ್ತಕಗಳು ಬರಬೇಕಿದೆ.ಜೊತೆಗೆ ಕೆಲವೊಂ ದಿಷ್ಟುವಿಷಯಗಳ ಪುಸ್ತಕಗಳು ಬಂದಿಯೇ ಇಲ್ಲ. ಈ ಸಲವೂ ಪುಸ್ತಕ ವಿಳಂಬವಾಗುವ ಸಾಧ್ಯತೆಯುಂಟು ಹೀಗಾಗಿ ಹತ್ತಾರು ಕೆಲಸ ಕಾರ್ಯಗಳ ನಡುವೆ ಪುಸ್ತಕದ ಸಮಸ್ಯೆ ಶಿಕ್ಷಕರಿಗೆ ಮತ್ತೊಂದು ದೊಡ್ಡ ತಲೆನೋವಿನ ಕೆಲಸವಾಗಲಿದೆ.