ಕುಷ್ಟಗಿ –
ಸಾಮಾನ್ಯವಾಗಿ ಅವರವರ ಕೆಲಸಗಳು ಅವರಿಗೆ ಸಾಕಷ್ಟು ಆಗುತ್ತದೆ ಒಂದೇ ಒಂದು ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿ ಮುಗಿಸುವಲ್ಲಿ ಪರದಾಡುತ್ತಿರುವಾಗ ಇಲ್ಲೊಬ್ಬ ಶಿಕ್ಷಕ ರೊಬ್ಬರು ಆಕಸ್ಮಿಕವಾಗಿ ಗಿಡದಿಂದ ಜಾರಿ ಬಿದ್ದು ಪ್ರಜ್ಞೆ ಹೀನವಾಗಿದ್ದ ಅಳಿಲಿಗೆ ಹಾರೈಕೆ ಮಾಡಿದ್ದಾರೆ.ಇದರೊಂ ದಿಗೆ ಈ ಶಾಲೆಯ ಶಿಕ್ಷಕರು,ಮಕ್ಕಳು ಆರೈಕೆಯಿಂದ ಚೇತರಿ ಕೊಂಡಿದೆ ಆ ಅಳಿಲು

ಹೌದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊರಡ ಕೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಗ್ಗೆ ಪ್ರಾರ್ಥನೆ ಸಂದರ್ಭದಲ್ಲಿ ಗಿಡಗಳಲ್ಲಿ ಓಡಾಟ ನಡೆಸುತ್ತಿದ್ದ ಅಳಿಲೊಂ ದು ಆಯಾತಪ್ಪಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು ಇದನ್ನು ಗಮನಿಸಿದ ಶಿಕ್ಷಕ ರಾಮೇಶ್ವರ ಡಾಣಿ ಅವರು ಕೂಡಲೇ ಅದನ್ನು ಹಿಡಿದು ಹಾರೈಕೆ ಮಾಡಿದರು ಅಲ್ಲದೇ ಅಳಿಲಿಗೆ ಕ್ಷೀರ ಭಾಗ್ಯದ ಹಾಲನ್ನು ಕುಡಿಸಿದರು.

ಸ್ವಲ್ಪ ಹೊತ್ತಿನ ಬಳಿಕ ಅಳಿಲು ಚೇತರಿಸಿಕೊಂಡಿದೆ ಈ ವೇಳೆ ವಿದ್ಯಾರ್ಥಿಗಳು ಅಳಿಲಿನ ಬೆನ್ನಿಗೆ ಕೈಯಿಂದ ನೆವರಿಸಿ ಸಂತಸ ವ್ಯಕ್ತಪಡಿಸಿದರು.ಶಾಲೆಗೆ ಆಕಸ್ಮಿಕವಾಗಿ ಬಂದ ಅಳಿಲಿಗೆ ಅಳಿಲು ಸೇವೆ ಮಾಡಿರುವುದು ಸ್ಮರಣೀಯವೆ ನಿಸಿದ್ದು ವೃತ್ತಿ ಯೊಂದಿಗೆ ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ಶಿಕ್ಷಣ ದೊಂದಿಗೆ ತೋರಿಸಿಕೊಟ್ಟ ಗುರುವಿಗೆ ನಮ್ಮದೊಂದು ಸಲಾಂ