ಚಿಕ್ಕಬಳ್ಳಾಪುರ –
ಸರ್ಕಾರಿ ಶಾಲಾ ಪ್ರಧಾನ ಗುರುಗಳ ಮನೆಗೆ ಕನ್ನ ಹಾಕಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಕಳೆದ ಹಲವು ದಿನಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳ್ಳರ ಕೈಚಳಕ ನಿರಂತರವಾಗಿದ್ದು ಚೇಳೂರಿನಲ್ಲಿ ಸರಣಿ ಕಳ್ಳತನ ನಡೆಸಿದ್ದಾರೆ ಐನಾತಿ ಕಳ್ಳರು.ಚೇಳೂರಿನ ಶಾಂತಿನಗರದಲ್ಲಿರುವ ಚರ್ಚ್ ಹಾಗೂ ಮನೆಗಳಲ್ಲಿ ಕಳ್ಳತನವನ್ನು ಮಾಡಲಾಗಿದೆ.

ಚರ್ಚ್ ಹುಂಡಿ ಸೇರಿ ಹಲವು ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.ಸರ್ಕಾರಿ ಶಾಲಾ ಹೆಡ್ ಮಾಸ್ಟರ್ ಜಿಲಾನ್ ಎಂಬುವವರ ಮನೆಯಲ್ಲಿ ಈ ಒಂದು ಕಳ್ಳತನ ನಡೆದಿದೆ.ಶಿಕ್ಷಕ ಮನೆಯಲ್ಲಿದ್ದ ದ್ವಿಚಕ್ರ ವಾಹನ ಹಣ ಸೇರಿ ಹಲವು ವಸ್ತುಗಳ ಕಳುವು ಮಾಡಲಾಗಿದೆ.

ಮನೆಯಲ್ಲಿ ಕಳ್ಳತನ ಮಾಡಿ ಅದೇ ಮನೆಯಲ್ಲಿಯೇ ಕಳ್ಳರ ಗುಂಡು ಪಾರ್ಟಿ ಮಾಡಿದ್ದಾರೆ.ಸ್ಥಳಕ್ಕೆ ಚೇಳೂರು ಠಾಣೆ ಪೊಲೀಸರು ಬೇಟಿ ಪರಿಶೀಲನೆ ಮಾಡಿದ್ದಾರೆ. ಚಿಕ್ಕಬಳ್ಖಾಪುರ ಜಿಲ್ಲೆಯ ಚೇಳೂರು ತಾಲ್ಲೂಕು ಕೇಂದ್ರದಲ್ಲಿ ಈ ಒಂದು ಕೃತ್ಯ ನಡೆದಿದೆ. ಕಳ್ಳರ ಜಾಡು ಪತ್ತೆಗೆ ಬಲೆ ಬೀಸಿದ ಪೊಲೀಸರು ತನಿಖೆಯನ್ನು ಮಾಡುತ್ತಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಈ ಒಂದು ಕೆಲಸವನ್ನು ಐನಾತಿ ಕಳ್ಳರು ಮಾಡಿದ್ದಾರೆ.
